World Down Syndrome Day 2024: ಎಲ್ಲರಂತಲ್ಲ ಈ ವಿಶೇಷಚೇತನ ಮಕ್ಕಳು, ಈ ಮಕ್ಕಳಿಗೂ ಬೇಕು ಪ್ರೀತಿಯ ಆರೈಕೆ

ನಮ್ಮ ಸುತ್ತ ಮುತ್ತಲಿನಲ್ಲಿ ಕೆಲವೊಂದು ವಿಶೇಷಚೇತನ ಮಕ್ಕಳನ್ನು ನೋಡಿರಬಹುದು. ಆ ಮಕ್ಕಳಲ್ಲಿ ಅನುವಂಶಿಕವಾಗಿ ಬರುವ ಕಾಯಿಲೆಯಲ್ಲಿ ಒಂದಾಗಿರುವ ಡೌನ್ ಸಿಂಡ್ರೋಮ್‌ ಸಮಸ್ಯೆಯೂ ಇರುತ್ತವೆ. ಸಾಮಾನ್ಯವಾಗಿ ಮಗುವು ಜನಿಸುವಾಗ 46 ಕ್ರೋಮ್‌ಸೋಮ್‌ಗಳಿರುತ್ತವೆ. ಆದರೆ ಈ ಕ್ರೋಮ್‌ಸೋಮ್‌ಗಳ ಸಂಖ್ಯೆಯೂ 46ಕ್ಕಿಂತ ಅಧಿಕವಾಗಿದ್ದಾಗ ಅಂತಹ ಮಗುವಿನಲ್ಲಿ ಈ ಡೌನ್ ಸಿಂಡ್ರೋಮ್‌ ಸಮಸ್ಯೆಯೂ ಉಂಟಾಗುತ್ತದೆ. ಈ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಮೂಲಕ ಜೀವನ ಶೈಲಿ ಸುಧಾರಿಸಬಹುದು. ಆದರೆ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯ ಹಿಂದಿನ ಉದ್ದೇಶ ಹಾಗೂ ಇತಿಹಾಸ ಬಗ್ಗೆ ನೀವು ಕೂಡ ತಿಳಿದುಕೊಳ್ಳುವುದು ಅಗತ್ಯ.

World Down Syndrome Day 2024: ಎಲ್ಲರಂತಲ್ಲ ಈ ವಿಶೇಷಚೇತನ ಮಕ್ಕಳು, ಈ ಮಕ್ಕಳಿಗೂ ಬೇಕು ಪ್ರೀತಿಯ ಆರೈಕೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 19, 2024 | 4:35 PM

ಹೆಣ್ಣು ತಾಯಿಯಾದಾಗಲೇ ಆಕೆಯ ಜೀವನ ಪರಿಪೂರ್ಣವಾಗುವುದು. ಆದರೆ ಯಾವುದೇ ಹೆಣ್ಣಾಗಲಿ ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಆದರೆ ಆರೋಗ್ಯವಂತವಾಗಿರಲಿ ಎಂದು ಬಯಸುವುದು ಸಹಜ. ಮಕ್ಕಳ ಆಟ ಪಾಠ ಬೆಳವಣಿಗೆಯಲ್ಲಿ ಖುಷಿ ಕಾಣುವವಳೇ ತಾಯಿ. ಮಗು ಹೇಗೆ ಇದ್ದರೂ ಕೂಡ ತಾಯಿಯ ಪ್ರೀತಿಯೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಆದರೆ ಕೆಲವರಿಗೆ ವಿಶೇಷ ಚೇತನ ಮಕ್ಕಳು ಹುಟ್ಟುತ್ತಾರೆ. ಈ ಮಕ್ಕಳು ಉಳಿದ ಮಕ್ಕಳಂತೆ ಆಡಿಕೊಂಡು, ಸಲೀಸಾಗಿ ಮಾತನಾಡುವುದಕ್ಕೂ ಆಗುವುದಿಲ್ಲ. ಈ ಸಮಸ್ಯೆಯನ್ನು ಹೊಂದಿದ ಮಕ್ಕಳಲ್ಲಿ ಬುದ್ಧಿ ಶಕ್ತಿಯ ಕೊರತೆಯ ಜೊತೆಗೆ ದೈಹಿಕ ಬೆಳವಣಿಗೆಯಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಇಂತಹ ಆರೋಗ್ಯ ಸಮಸ್ಯೆಯ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಇತಿಹಾಸ:

2005ರಲ್ಲಿ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಡೌನ್‌ ಸಿಂಡ್ರೋಮ್‌ ಇಂಟರ್‌ನ್ಯಾಷನಲ್‌ ಅನ್ನು ಸ್ಥಾಪಿಸಲಾಯಿತು. ಮೊದಲ ಬಾರಿಗೆ ಅಂದರೆ 2006ರಲ್ಲಿ ವಿಶ್ವ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆಯ ಬಳಿಕ ಬ್ರೆಜಿಲಿಯನ್‌ ಫೆಡರೇಶನ್‌ ಅಸೋಸಿಯೇಷನ್‌ ಆಫ್‌ ಡೌನ್‌ ಸಿಂಡ್ರೋಮ್‌ ಇದಕ್ಕೆ ಕೈ ಜೋಡಿಸಿತು. ಅದರೊಂದಿಗೆ ಡಿಎಸ್‌ಐ ಜೊತೆ ಕೆಲಸವನ್ನು ಶುರು ಮಾಡಿತು. ಸದಸ್ಯರು ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವನ್ನು ಪಡೆಯುವ ಸಲುವಾಗಿ ಇವರ ಜೊತೆಗೆ ಕೆಲಸ ಮಾಡಲು ಮುಂದಾದರು. 2011ರ ನವೆಂಬರ್‌ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲು ಒಪ್ಪಿಗೆ ಸಿಕ್ಕಿತು. ಅಂದಿನಿಂದ ಪ್ರತಿ ವರ್ಷ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಹೃದಯಾಘಾತ ಖಂಡಿತ

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಮಹತ್ವ:

ಡೌನ್‌ ಸಿಂಡ್ರೋಮ್‌ ದಿನ ಆಚರಣೆಯ ಮುಖ್ಯ ಉದ್ದೇಶವೇ ಈ ಸಮಸ್ಯೆಯಿಂದ ಬಳಲುತ್ತಿರುವವರನ್ನು ಬೇಧಭಾವವನ್ನು ಮಾಡದೇ ನಮ್ಮಂತೆಯೇ ನೋಡುವುದು. ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ ವ್ಯಕ್ತಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಗೌರವಿಸುವುದಾಗಿದೆ. ಅದಲ್ಲದೇ ಡೌನ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುವವರಿಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಅನುವು ಮಾಡಿಕೊಡುವುದಾಗಿದೆ. ವಿಶ್ವ ಡೌನ್‌ ಸಿಂಡ್ರೋಮ್‌ ದಿನದಂದು ಡೌನ್‌ ಸಿಂಡ್ರೋಮ್‌ ಸಮಸ್ಯೆಗಳು ಯಾವ ಕಾರಣದಿಂದ ಬರುತ್ತವೆ ಹಾಗೂ ಪ್ರಾರಂಭದಲ್ಲಿಯೇ ಯಾವ ರೀತಿ ಪತ್ತೆ ಮಾಡಲಾಗುತ್ತದೆ ಎನ್ನುವುದನ್ನು ತಿಳಿಸಲು ವಿಶೇಷ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ