AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uterus Didelphys: ಈ ಯುವತಿಗೆ ಎರಡು ಗರ್ಭಕೋಶ, ಎರಡು ಯೋನಿ, ಇದು ಗರ್ಭಾಶಯದ ಡಿಡೆಲ್ಸಿಸ್ ಕಾಯಿಲೆ?

ಹೆಣ್ಣಿನ ದೈಹಿಕ ರಚನೆಯು ಸೃಷ್ಟಿಗೆ ಪೂರಕವಾಗಿದೆ. ಒಂದು ಹೆಣ್ಣು ಮಗುವಿನ ಜನ್ಮ ನೀಡಲು ಆಕೆಯ ದೈಹಿಕವಾದ ರಚನೆಯು ಬಹಳ ಅಗತ್ಯ. ಮಗುವಿಗೆ ಜನ್ಮ ನೀಡುವ ಸಲುವಾಗಿ ಹೆಣ್ಮಕ್ಕಳಲ್ಲಿ ಒಂದು ಗರ್ಭಕೋಶವಿರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಎರಡು ಗರ್ಭಕೋಶವಿರುವ ಅಪರೂಪದ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ವೈದ್ಯಕೀಯ ಭಾಷೆಯಲ್ಲಿ ಯೂಟರ್ಸ್ ಡಿಡೆಲ್ಸಿಸ್ ಎನ್ನಲಾಗುವ ಇದೊಂದು ಅಪರೂಪದ ಸ್ಥಿತಿಯಾಗಿದ್ದು, ಮಹಿಳೆಯರ ಪೈಕಿ 0.3% ರಲ್ಲಿ ಮಾತ್ರ ಈ ಸಮಸ್ಯೆಯು ಕಂಡು ಬರುತ್ತದೆ. ಆದರೆ ಇದೀಗ 25ರ ಹರೆಯದ ಆನಿ ಚಾರ್ಲೊಟ್ ಎನ್ನುವ ಯುವತಿಯು ಗರ್ಭ ನಿರೋಧಕ ಸುರುಳಿಯನ್ನು ಅಳವಡಿಸಲು ಹೋದಾಗ ಈ ಗರ್ಭಾಶಯದ ಡಿಡೆಲ್ಸಿಸ್ ಸಮಸ್ಯೆಯಿರುವುದು ಪತ್ತೆಯಾಗಿದೆ.

Uterus Didelphys: ಈ ಯುವತಿಗೆ ಎರಡು ಗರ್ಭಕೋಶ, ಎರಡು ಯೋನಿ, ಇದು ಗರ್ಭಾಶಯದ ಡಿಡೆಲ್ಸಿಸ್ ಕಾಯಿಲೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 19, 2024 | 11:36 AM

ಯೂಟರ್ಸ್ ಡಿಡೆಲ್ಸಿಸ್ ಅಪರೂಪದ ಜನನಾಂಗದ ಸ್ಥಿತಿಯಾಗಿದ್ದು, ಇದರಲ್ಲಿ ಬಳಲುತ್ತಿರುವವರು ಎರಡು ಯೋನಿ ಹಾಗೂ ಎರಡು ಗರ್ಭಾಶಯಗಳನ್ನು ಹೊಂದಿರುತ್ತಾರೆ. 25ರ ಹರೆಯದ ಆನಿ ಚಾರ್ಲೊಟ್ ಎಂಬ ಯುವತಿಗೆ ಯೂಟರಸ್ ಡಿಡೆಲ್ಸಿಸ್ ಎಂಬ ಅಪರೂಪದ ಸ್ಥಿತಿಯನ್ನು ಹೊಂದಿರುವುದು ಪತ್ತೆಯಾಗಿದ್ದು, ಈ ಮಹಿಳೆಗೆ ಎರಡು ಯೋನಿ, ಎರಡು ಗರ್ಭಾಶಯವಿದೆ. ವೈದ್ಯಕೀಯ ತಜ್ಞರು ಹೇಳುವ ಪ್ರಕಾರವಾಗಿ ಈ ಯುವತಿಯೂ ಇಬ್ಬರೂ ಪುರುಷರಿಂದ ಎರಡು ಮಕ್ಕಳನ್ನು ಪಡೆಯಬಹುದು. ಸಂತಾನೋತ್ಪತ್ತಿ ವ್ಯವಸ್ಥೆಯು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಗರ್ಭಾಶಯದ ಡಿಡೆಲ್ಫಿಸ್ ಎಂದರೇನು?

ಗರ್ಭಾಶಯದ ಡಿಡೆಲ್ಫಿಸ್ ಎಂದರೆ ಮಹಿಳೆಯು ಎರಡು ಗರ್ಭಾಶಯ ಮತ್ತು ಎರಡು ಯೋನಿಗಳೊಂದಿಗೆ ಜನಿಸುವ ಸ್ಥಿತಿಯಾಗಿದೆ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ಕೆಲವೊಮ್ಮೆ ಎರಡೂ ಗರ್ಭಾಶಯಗಳಿಗೆ ಒಂದೇ ಗರ್ಭಕಂಠವಿರುತ್ತದೆ. ಕೆಲವೊಮ್ಮೆ ಪ್ರತಿ ಗರ್ಭಾಶಯವು ಗರ್ಭಕಂಠವನ್ನು ಹೊಂದಿರುತ್ತದೆ. ಈ ಸಮಸ್ಯೆಯಿರುವ ಮಹಿಳೆಯರಲ್ಲಿ ಯೋನಿಯನ್ನು ತೆಳುವಾದ ಪೊರೆಯಿಂದ ಎರಡು ಪ್ರತ್ಯೇಕ ತೆರೆಯುವಿಕೆಗಳಾಗಿ ವಿಂಗಡಿಸಲಾಗಿದೆ. ಇಂತಹ ಪ್ರಕರಣಗಳು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯು ಕೇವಲ ಆರರಿಂದ ಇಪ್ಪತ್ತೆರಡು ವಾರಗಳಲ್ಲಿದ್ದಾಗ ಈ ಅಂಗಗಳು ಅಭಿವೃದ್ಧಿಗೊಳ್ಳುತ್ತವೆ.

ಗರ್ಭಾಶಯದ ಡಿಡೆಲ್ಫಿಸ್ ರೋಗಲಕ್ಷಣಗಳು ಹೀಗಿವೆ :

* ಟ್ಯಾಂಪೂನ್ ಬಳಸುವಾಗ ರಕ್ತ ಸೋರಿಕೆಯಾಗುವುದುಯಾಗುವುದು

* ನೋವಿನಿಂದ ಕೂಡಿದ ಲೈಂಗಿಕತೆ

* ಮುಟ್ಟಿನ ಸಮಯದಲ್ಲಿ ಅಥವಾ ಅವಧಿಗೂ ಮೊದಲು ಬಾರಿ ಸೆಳೆತ

* ಮುಟ್ಟಿನ ಸಮಯದಲ್ಲಿ ಅಸಹಜತೆಯಿಂದ ಕೂಡಿದ ರಕ್ತಸ್ರಾವ

ವೈದ್ಯರ ಪ್ರಕಾರ ಗರ್ಭಾಶಯದ ಡಿಡೆಲ್ಸಿಸ್ ಗಳಿಂದ ಈ ಸಮಸ್ಯೆಗಳಿಗೂ ಕಾರಣವಾಗಬಹುದು :

* ಅವಧಿಪೂರ್ವ ಜನನದ ಅಪಾಯವು ಹೆಚ್ಚಳವಾಗಿರುತ್ತದೆ.

* ಗರ್ಭಪಾತದ ಅಪಾಯವು ಹೆಚ್ಚಾಗಿರುತ್ತದೆ.

* ನೋವಿನ ಕೂಡಿದ ಸಂಭೋಗ

* ಗರ್ಭಪಾತವಾಗುವುದು.

ಇದನ್ನೂ ಓದಿ: ಪ್ಲೀಸ್​​ ಗುಬ್ಬಚ್ಚಿಗಳನ್ನು ಬದುಕಲು ಬಿಡಿ, ಅವುಗಳ ಉಳಿವು ನಮ್ಮ ಕೈಯಲ್ಲಿ

ಗರ್ಭಾಶಯದ ಡಿಡೆಲ್ಸಿಸ್ ಹೊಂದಿರುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ವಿಪರೀತ ನೋವಿನ ಅನುಭವ ಮತ್ತು ಭಾರೀ ರಕ್ತಸ್ರಾವವಾಗುತ್ತದೆ. ಎರಡು ಯೋನಿಯಿರುವ ಕಾರಣ ಕೆಲವು ಮಹಿಳೆಯರು ಹೆಚ್ಚು ರಕ್ತಸ್ರಾವವಾಗುತ್ತಿದೆ ಎಂದು ಭಾವಿಸಬಹುದು. ಅದರೊಂದಿಗೆ ಈ ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದರಿಂದ ಗರ್ಭಾಶಯದ ಒಳಪದರವನ್ನು ತೆಳುಗೊಳಿಸುತ್ತದೆ. ಅಂಡಾಶಯದಲ್ಲಿ ಬಿಡುಗಡೆಯಾಗುವ ಮೊಟ್ಟೆಯು ಒಳಪದರಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ