Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ

| Updated By: ಸುಷ್ಮಾ ಚಕ್ರೆ

Updated on: Oct 22, 2021 | 6:39 PM

ನಿಮಗೆ ಹಸಿವಾದಾಗ ಮಾತ್ರ ತಿನ್ನಿರಿ. ಅಂದರೆ ನಿಮ್ಮ ಹಿಂದಿನ ಊಟವು ಸಂಪೂರ್ಣವಾಗಿ ಜೀರ್ಣವಾದ ನಂತರವೇ ತಿನ್ನಿರಿ. ತಿನ್ನುವಾಗ ಸಾಧ್ಯವಾದಷ್ಟೂ ಟಿವಿ, ಪುಸ್ತಕ, ಫೋನ್, ಲ್ಯಾಪ್‌ಟಾಪ್ ಮುಂತಾದವುಗಳಿಂದ ದೂರ ಇರಿ.

Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ನಾವು ಏನು ತಿನ್ನುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ನಾವು ತಿನ್ನವ ಪದಾರ್ಥಗಳು ಚೆನ್ನಾಗಿ ಜೀರ್ಣವಾದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ, ಸುಲಭವಾಗಿ ಜೀರ್ಣವಾಗುವ ಆಹಾರವನ್ನೇ ಆಯ್ಕೆ ಮಾಡಿಕೊಂಡು ತಿನ್ನವುದರಿಂದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು. ಎಲ್ಲೋ ಆಗೊಮ್ಮೆ ಈಗೊಮ್ಮೆ ಬಾಯಿ ರುಚಿಗೆ ಅತಿಯಾದ ಮಸಾಲೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥ, ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಏನೂ ಅಪಾಯವಿಲ್ಲ. ಆದರೆ, ದಿನವೂ ಅಂತಹ ಪದಾರ್ಥ ಹಾಗೂ ಜಂಕ್ ಫುಡ್​ಗಳನ್ನು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ.

ಜೀರ್ಣಕ್ರಿಯೆ ಚೆನ್ನಾಗಿರಲು ಆಯುರ್ವೇದದಲ್ಲಿ ಸಾಕಷ್ಟು ಮಾರ್ಗಗಳಿವೆ. ನಿಮ್ಮ ಜೀರ್ಣಾಂಗ ಆರೋಗ್ಯವಾಗಿರಬೇಕೆಂದರೆ ಏನು ಮಾಡಬೇಕೆಂಬುದಕ್ಕೆ 9 ಆಯುರ್ವೇದ ಸಲಹೆಗಳು ಇಲ್ಲಿವೆ. ಈ ಬಗ್ಗೆ ಡಾ. ದೀಕ್ಷಾ ಭಾಸ್ಕರ್ ಇನ್​ಸ್ಟಾಗ್ರಾಂನಲ್ಲಿ ಸಲಹೆಗಳನ್ನು ನೀಡಿದ್ದಾರೆ.

1. ನಿಮಗೆ ಹಸಿವಾದಾಗ ಮಾತ್ರ ತಿನ್ನಿರಿ. ಅಂದರೆ ನಿಮ್ಮ ಹಿಂದಿನ ಊಟವು ಸಂಪೂರ್ಣವಾಗಿ ಜೀರ್ಣವಾದ ನಂತರವೇ ತಿನ್ನಿರಿ. ಕೆಲವೊಮ್ಮೆ ನಾವು ಹಸಿದಿದ್ದೇವೆ ಎಂದು ನಾವು ಭಾವಿಸಬಹುದು, ಆದರೆ ಅದು ನಿಜವಾದ ಹಸಿವಾಗಿರುವುದಿಲ್ಲ. ನಮಗೆ ತೀವ್ರವಾದ ಬಾಯಾರಿಕೆಯಾದಾಗ ಅಥವಾ ನಮ್ಮ ದೇಹ ನಿರ್ಜಲೀಕರಣಗೊಂಡಾಗಲೂ ಹಸಿವಾದಂತೆಯೇ ಅನುಭವವಾಗುತ್ತದೆ.

2. ಶಾಂತ ಮತ್ತು ಆರಾಮದಾಯಕವಾದ ಸ್ಥಳದಲ್ಲಿ ತಿನ್ನಿರಿ. ತಿನ್ನುವಾಗ ಕುಳಿತುಕೊಂಡು ತಿನ್ನಿರಿ. ತಿನ್ನುವಾಗ ಸಾಧ್ಯವಾದಷ್ಟೂ ಟಿವಿ, ಪುಸ್ತಕ, ಫೋನ್, ಲ್ಯಾಪ್‌ಟಾಪ್ ಮುಂತಾದವುಗಳಿಂದ ದೂರ ಇರಿ.

3. ನಾವೆಲ್ಲರೂ ವಿಭಿನ್ನವಾಗಿದ್ದೇವೆ. ನಮಗೆ ಬೇಕಾಗುವ ಆಹಾರಗಳು, ಹೊಟ್ಟೆಯ ಗಾತ್ರ, ನಮ್ಮ ದೇಹದ ಚಯಾಪಚಯದ ವೇಗ, ಜೀರ್ಣಕ್ರಿಯೆಯ ಸಾಮರ್ಥ್ಯ ಎಲ್ಲವೂ ವಿಭಿನ್ನವಾಗಿರುತ್ತದೆ. ಹೀಗಾಗಿ, ನಿಮ್ಮ ದೇಹಕ್ಕೆ ಏನು ಬೇಕೆಂಬುದನ್ನು ನೀವೇ ನಿರ್ಧರಿಸಿ. ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಿ.

4. ಯಾವಾಗಲೂ ಬಿಸಿಯಾದ ಮತ್ತು ತಾಜಾ ಊಟವನ್ನು ಸೇವಿಸಿ. ಫ್ರಿಜ್​ನಲ್ಲಿ ಶೇಖರಿಸಿಟ್ಟ ಆಹಾರ ಪದಾರ್ಥಗಳನ್ನು ನೀವು ಎಷ್ಟರ ಮಟ್ಟಿಗೆ ದೂರ ಇಡುತ್ತೀರೋ ಅಷ್ಟರ ಮಟ್ಟಿಗೆ ನಿಮ್ಮ ಜೀರ್ಣ ಶಕ್ತಿ ಚೆನ್ನಾಗಿರುತ್ತದೆ.

5. ಯಾವಾಗಲೂ ಗುಣಮಟ್ಟದ ಆಹಾರವನ್ನು ಸೇವಿಸಿ. ನಿಮ್ಮ ಊಟವು ರಸಭರಿತವಾಗಿದೆಯೇ ಅಥವಾ ಎಣ್ಣೆಯುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸ್ವಲ್ಪ ಮಟ್ಟಿಗೆ ಎಣ್ಣೆ ಅಂಶ, ನೀರಿನಾಂಶ ಇರುವ ಪದಾರ್ಥಗಳನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗಿರುತ್ತದೆ. ಆದಷ್ಟು ಒಣ ಆಹಾರಗಳನ್ನು ತಪ್ಪಿಸಿ.

6. ಹೊಂದಾಣಿಕೆಯಾಗದ ಆಹಾರ ಪದಾರ್ಥಗಳನ್ನು ಒಟ್ಟಿಗೆ ತಿನ್ನಬೇಡಿ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು. ಹೊಂದಿಕೆಯಾಗದ ಆಹಾರಗಳಲ್ಲಿ ಕೆಲವು ಹಣ್ಣುಗಳು ಮತ್ತು ಹಾಲು, ಮೀನು ಮತ್ತು ಹಾಲು ಇತ್ಯಾದಿಗಳನ್ನು ಒಟ್ಟಿಗೇ ಸೇವಿಸಬೇಡಿ.

7. ನೀವು ತಿನ್ನುವಾಗ ತಿನ್ನುವುದರ ಬಗ್ಗೆಯೇ ಗಮನವಿಡಿ. ನಿಮ್ಮ ಊಟದ ವಾಸನೆ, ನಿಮ್ಮ ತಟ್ಟೆಯ ನೋಟ, ನಿಮ್ಮ ಆಹಾರದ ವಿನ್ಯಾಸ, ವಿವಿಧ ರುಚಿಗಳು ಮತ್ತು ನೀವು ತಿನ್ನುವಾಗ ನೀವು ಮಾಡುವ ಶಬ್ದಗಳನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳಿ.

8. ವೇಗವಾಗಿ ತಿನ್ನಬೇಡಿ. ನಿಮ್ಮ ಆಹಾರವನ್ನು ನುಂಗಬೇಡಿ, ಅಗಿಯಲು ನಿಮ್ಮ ಸಮಯವನ್ನು ತೆಗೆದುಕೊಳ್ಳಿ. ಚೂಯಿಂಗ್ ಜೀರ್ಣಕ್ರಿಯೆಯ ಅತ್ಯಗತ್ಯ ಹಂತವಾಗಿದೆ.

9. ನಿಯಮಿತ ಸಮಯದಲ್ಲಿ ತಿನ್ನಿರಿ. ಪ್ರಕೃತಿಯು ಚಕ್ರಗಳನ್ನು ಮತ್ತು ನಿಯಮಿತತೆಯನ್ನು ಇಷ್ಟಪಡುತ್ತದೆ. ಆದ್ದರಿಂದ ನೀವು ಪಾಲಿಸಲೇಬೇಕು!

ಇದನ್ನೂ ಓದಿ: Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

Published On - 6:35 pm, Fri, 22 October 21