AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ವು ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಅದರಲ್ಲೂ ಬೆಳಗಿನ ವಾಕ್‌ಗಾಗಿ ಹೋಗುವಾಗ ಜನರು ತಮ್ಮ ಕಿವಿಯಲ್ಲಿ ಹೆಡ್‌ಫೋನ್‌ಗಳನ್ನು ಮತ್ತು ಕೈಯಲ್ಲಿ ಮೊಬೈಲ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ವಾಕಿಂಗ್ ಸಮಯದಲ್ಲಿ ಮೊಬೈಲ್ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Oct 05, 2021 | 7:21 AM

Share

ಇತ್ತಿಚೇಗೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೆಚ್ಚಿನ ಸಮಯವನ್ನು ಮೊಬೈಲ್ ಫೋನಿನೊಂದಿಗೆ ಕಳೆಯುತ್ತಾನೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಜೀವನದಲ್ಲಿ ಮೊಬೈಲ್ ಅವಶ್ಯಕ ಎಂಬಂತಾಗಿದೆ. ಆನ್‌ಲೈನ್ ತರಗತಿಗಳಿಂದ ಹಿಡಿದು ಆನ್‌ಲೈನ್ ಸಭೆಗಳವರೆಗೆ ಮೊಬೈಲ್ ಜತೆಗೆ ಹೊಂದಿಕೊಂಡಿದ್ದೇವೆ. ಹೀಗಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಸಮಯದಲ್ಲಿ ಜನರಿಗಿಂತ ಮೊಬೈಲ್ ಫೋನ್‌ಗಳನ್ನು ಹೆಚ್ಚು ಮುಖ್ಯವೆಂದು ಪರಿಗಣಿಸುತ್ತೇವೆ.

ಬೆಳಿಗ್ಗೆ ಆಗುವ ಆಲರಂನಿಂದ ಹಿಡಿದು ರಾತ್ರಿ ಮಲಗುವವರೆಗೂ ನಮ್ಮ ಕೈಯಲ್ಲಿ ಮೊಬೈಲ್ ಇರುತ್ತದೆ. ಮೊಬೈಲ್ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೀವು ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಅದರಲ್ಲೂ ಬೆಳಗಿನ ವಾಕ್‌ಗಾಗಿ ಹೋಗುವಾಗ ಜನರು ತಮ್ಮ ಕಿವಿಯಲ್ಲಿ ಹೆಡ್‌ಫೋನ್‌ಗಳನ್ನು ಮತ್ತು ಕೈಯಲ್ಲಿ ಮೊಬೈಲ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ವಾಕಿಂಗ್ ಸಮಯದಲ್ಲಿ ಮೊಬೈಲ್ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.

ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವುದು ಹಾನಿಕಾರಕ 1. ದೇಹ ಸ್ಥಿತಿಗೆ ಅಪಾಯಕಾರಿ ವಾಕಿಂಗ್ ಸಮಯದಲ್ಲಿ ನಮ್ಮ ಬೆನ್ನು ಮೂಳೆಯ ಕೋಡ್ ನೇರವಾಗಿರಬೇಕು. ಆದರೆ ನಡಿಗೆಯ ಸಮಯದಲ್ಲಿ ನೀವು ಪದೇ ಪದೇ ಮೊಬೈಲ್ ಬಳಸಿದರೆ, ಬೆನ್ನುಹುರಿ ಸರಿಯಾಗಿರುವುದಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ದೇಹದ ಭಂಗಿಗೆ ಹಾನಿಯಾಗಬಹುದು.

2. ಸ್ನಾಯು ನೋವು ಉಂಟಾಗಬಹುದು ಬೆಳಿಗ್ಗೆ ವ್ಯಾಯಾಮ ಮಾಡುವುದು ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರಿಸುತ್ತದೆ. ಆದರೆ ಒಂದು ಕೈಯಲ್ಲಿ ಮೊಬೈಲ್ ಇರುವುದರಿಂದ, ಕೈ ಒಂದು ಚಲನೆಯಲ್ಲಿ ಉಳಿಯುವುದಿಲ್ಲ. ಈ ಅಭ್ಯಾಸದಿಂದ ಸ್ನಾಯುಗಳು ಅಸಮತೋಲನಗೊಳ್ಳುತ್ತವೆ ಮತ್ತು ಸ್ನಾಯು ನೋವು ಹೆಚ್ಚಾಗಲು ಕಾರಣವಾಗಬಹುದು.

3. ಬೆನ್ನು ನೋವು ಬೆಳಗಿನ ನಡಿಗೆಯಲ್ಲಿ ನೀವು ಮೊಬೈಲ್ ನೋಡುತ್ತಾ ನಡೆದರೆ, ನಿಮ್ಮ ಕುತ್ತಿಗೆ ಮತ್ತು ಬೆನ್ನು ನೋಯಲು ಆರಂಭವಾಗುತ್ತದೆ. ಈ ಕಾರಣದಿಂದಾಗಿ, ಒಂದೇ ಸ್ಥಳದಲ್ಲಿ ನಡೆಯದೇ ಭಂಗಿಯನ್ನು ಬದಲಾಯಿಸುತ್ತಲೇ ಇರುತ್ತೀರಾ. ಈ ಅಭ್ಯಾಸ ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು ಮತ್ತು ಒತ್ತಡ ಉಂಟಾಗುವಂತೆ ಮಾಡುತ್ತದೆ. ಇದು ಸೊಂಟದ ಮೇಲೆ ಪರಿಣಾಮ ಬೀರುತ್ತದೆ.

4. ವಾಕಿಂಗ್​ನಲ್ಲಿ ಗೊಂದಲ ವಾಸ್ತವವಾಗಿ, ವಾಕಿಂಗ್‌ನ ಪ್ರಯೋಜನವೆಂದರೆ ನೆಮ್ಮದಿ ಮತ್ತು ಮನಸ್ಸು ಶಾಂತಿ ಹಾಗೂ ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಆದರೆ ಮೊಬೈಲ್ ನೋಡುವಾಗ ಗಮನ ಬೇರೆಡೆಯೇ ಇರುತ್ತದೆ. ಇದರಿಂದಾಗಿ, ನಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವುದು ಒಳ್ಳೆಯದಲ್ಲ.

ಇದನ್ನೂ ಓದಿ: Types of Walking: ವಾಕಿಂಗ್​ನಲ್ಲಿ ಹಲವು ವಿಧಗಳಿವೆ; ನಿಮ್ಮ ಆರೋಗ್ಯಕ್ಕೆ ಯಾವ ನಡಿಗೆ ಸೂಕ್ತ ತಿಳಿಯಿರಿ

Papaya Leaf Benefits: ಪಪ್ಪಾಯಿ ಹಣ್ಣು ಮಾತ್ರ ಅಲ್ಲ, ಇದರ ಎಲೆಯೂ ಕೂಡ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ