World Animal Day 2021: ನಮ್ಮಂತೆಯೇ ಪ್ರಾಣಿಗಳಿಗೂ ಬದುಕಲು ಅವಕಾಶ ಕೊಡೋಣ; ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸೋಣ
ವಿಶ್ವ ಪ್ರಾಣಿ ಕಲ್ಯಾಣ ದಿನ 2021: ಪ್ರಾಣಿಗಳ ಕಲ್ಯಾಣ ಮತ್ತು ಪ್ರಕೃತಿಯಲ್ಲಿ ಅವುಗಳ ಮಹತ್ವದ ಕುರಿತಾಗಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ದಿನದ ಕುರಿತಾಗಿ ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.
ಪ್ರಾಣಿಗಳ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಅಕ್ಟೋಬರ್ 4ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಈ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವು ಪ್ರಾಣಿಗಳ ಕಲ್ಯಾಣ ಮತ್ತು ಪ್ರಕೃತಿಯಲ್ಲಿ ಅವುಗಳ ಮಹತ್ವದ ಕುರಿತಾಗಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ವಿಶ್ವ ಪ್ರಾಣಿ ಪ್ರೇಮಿಗಳ ದಿನವೆಂದೂ ಕರೆಯುತ್ತಾರೆ. ಈ ದಿನದ ಕುರಿತಾಗಿ ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.
ಇತಿಹಾಸ ಪ್ರಾಣಿ ಪೋಷಕ ಸಂತ ಎಂದು ಕರೆಯಲ್ಪಡುವ ಸೈಂಟ್ ಫ್ಯಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವನ್ನು ವಿಶ್ವ ಪ್ರಾಣಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲಿಗೆ 1925ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಈ ದಿನವನ್ನು ಆಚರಿಸಲಾಯಿತು. ಹೆನ್ರಿಕ್ ಜಿಮ್ಮರ್ಮ್ಯಾನ್ ಈ ಕಾರ್ಯಕ್ರಮವನ್ನು ಮೊದಲಿಗೆ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಸುಮಾರು 5,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಬಳಿಕ 1929ರಲ್ಲಿ ಅಕ್ಟೋಬರ್ 4ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಯಿತು.
ಪರಿಸರ ವ್ಯವಸ್ಥೆಯಲ್ಲಿ ಮಾನವ ಮತ್ತು ಸಸ್ಯಗಳಂತೆಯೇ ಪ್ರಾಣಿಗಳು ಸಹ ಅವಿಭಾಜ್ಯ ಅಂಗ. ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಹಿಡಿದು ಪರಿಸರ ಸಂರಕ್ಷಣೆಯಲ್ಲಿ ಪ್ರಾಣಿಗಳ ಪಾತ್ರ ಮಹತ್ವದ್ದಾಗಿದೆ. ಪ್ರಾಣಿಗಳ ರಕ್ಷಣೆ, ಪ್ರಾಣಿಗಳ ಕಲ್ಯಾಣ, ಪ್ರಾಣಿಗಳು ಮತ್ತು ಜೀವನೋಪಾಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದ ಮೂಲಕ ಈ ದಿನದಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಭೂಮಿಯ ಮೇಲೆ ಪ್ರಾಣಿಗಳು ಅಳಿವಿನಂಚಿನಲ್ಲಿದೆ. ಪ್ರಕೃತಿಯಲ್ಲಿ ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಪ್ರಾಣಿಗಳ ಪಾತ್ರ ಮುಖ್ಯವಾಗಿದೆ. ಅವುಗಳ ಸಂರಕ್ಷಣೆಯಲ್ಲಿ ನಾವೆಲ್ಲರೂ ಒಗ್ಗೂಡಲೇ ಬೇಕು. ನಮ್ಮಂತೆಯೇ ಅವುಗಳೂ ಜೀವಿಗಳು, ಸುಂದರ ಪ್ರಕೃತಿಯಲ್ಲಿ ಪ್ರಾಣಿಗಳಿಗೂ ಸಹ ಬದುಕಲು ಕೊಡೋಣ ಜತೆಗೆ ಅವುಗಳ ರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸಲು ನಾವೆಲ್ಲರೂ ಒಂದಾಗೋಣ.
ಇದನ್ನೂ ಓದಿ:
ಮಂಡ್ಯದಲ್ಲಿ 29 ಸಾಕು ಪ್ರಾಣಿಗಳ ನಿಗೂಢ ಸಾವು! ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ
ಶಿವಮೊಗ್ಗ: ಮೂಕ ಪ್ರಾಣಿಗಳ ಮಾರಣಹೋಮ; 150ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ
Published On - 9:51 am, Mon, 4 October 21