ಮಂಡ್ಯದಲ್ಲಿ 29 ಸಾಕು ಪ್ರಾಣಿಗಳ ನಿಗೂಢ ಸಾವು! ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ
29 ಸಾಕು ಪ್ರಾಣಿಗಳು ಒಂದೇ ದಿನ ಸಾವನ್ನಪ್ಪಿಲ್ಲ. ಎರಡೂವರೆ ವರ್ಷಗಳಿಂದ ಒಟ್ಟು 29 ಪ್ರಾಣಿಗಳು ಸಾವನ್ನಪ್ಪಿವೆ. ರೈತ ಸಹೋದರರ ಮನೆಯಲ್ಲಿ ಈ ರೀತಿ ಜಾನುವಾರುಗಳು ಸಾವನ್ನಪ್ಪುತ್ತಿರುವುದು ಕುಟುಂಬಸ್ಥರಿಗೆ ಅಚ್ಚರಿ ಮೂಡಿಸಿದೆ.
ಮಂಡ್ಯ: ಕೀಲಾರ ಗ್ರಾಮದ ಇಬ್ಬರಿಗೆ ಸೇರಿದ ಸುಮಾರು 29 ಸಾಕು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿವೆ. ರಾಸುಗಳು ಸಾವನ್ನಪ್ಪಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಪ್ರಾಣಿಗಳ ಸಾವಿಗೆ ಕಾರಣ ತಿಳಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾವನ್ನಪ್ಪಿರುವ ಸಾಕು ಪ್ರಾಣಿಗಳು ಕೃಷ್ಣೇಗೌಡ, ಶಂಕರೇಗೌಡ ಎಂಬ ಸಹೋದರರಿಗೆ ಸೇರಿದ್ದಾಗಿವೆ. ರಾಸುಗಳ ಸಾವಿನಿಂದ ಕುಟುಂಬ ಕಂಗಾಲಾಗಿದ್ದು, ಕುಟುಂಬಸ್ಥರೊಂದಿಗೆ ಹೆಚ್ಡಿಕೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ್ದಾರೆ.
29 ಸಾಕು ಪ್ರಾಣಿಗಳು ಒಂದೇ ದಿನ ಸಾವನ್ನಪ್ಪಿಲ್ಲ. ಎರಡೂವರೆ ವರ್ಷಗಳಿಂದ ಒಟ್ಟು 29 ಪ್ರಾಣಿಗಳು ಸಾವನ್ನಪ್ಪಿವೆ. ರೈತ ಸಹೋದರರ ಮನೆಯಲ್ಲಿ ಈ ರೀತಿ ಜಾನುವಾರುಗಳು ಸಾವನ್ನಪ್ಪುತ್ತಿರುವುದು ಕುಟುಂಬಸ್ಥರಿಗೆ ಅಚ್ಚರಿ ಮೂಡಿಸಿದೆ. ಯಾರಾದರೂ ವಾಮಾಚಾರ ಮಾಡಿಸಿದ್ದಾರೆನ್ನುವ ಭಯ ಶುರುವಾಗಿದೆ. ಸಾವಿರಾರು ಮೌಲ್ಯದಲ್ಲಿ ಬೆಲೆಬಾಳುವ ದನಕರುಗಳು ಸಾವನ್ನಪ್ಪಿದ್ದು, ನಿನ್ನೆಯೂ ಸಹ ಒಂದು ಲಕ್ಷ ರೂ. ಬೆಲೆ ಬಾಳುವ ಒಂದು ಎತ್ತು ಸಾವಿಗೀಡಾಗಿದೆ.
ಶಂಕರೇಗೌಡರಿಗೆ ಸೇರಿದ 22 ಪ್ರಾಣಿಗಳು ಸಾವಿಗೀಡಾಗಿದ್ದರೆ, ಕೃಷ್ಣೇಗೌಡರಿಗೆ ಸೇರಿದ 7 ಪ್ರಾಣಿಗಳು ಸಾವಿಗೀಡಾಗಿವೆ. ಎಲ್ಲಾ ಪ್ರಾಣಿಗಳನ್ನು ತರುವಾಗ ಆರೋಗ್ಯವಾಗಿಯೇ ಇರುತ್ತವೆ. ಮನೆಗೆ ಬಂದ 2 ತಿಂಗಳಲ್ಲಿ ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಿವೆ. ಈ ಬಗ್ಗೆ ಮಾಹಿತಿ ಪಡೆದ ಹೆಚ್.ಡಿ.ಕುಮಾರಸ್ವಾಮಿ ರೈತರ ಮನೆಗೆ ಭೇಟಿ ನೀಡಿ ಪ್ರಾಣಿಗಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ
ಚರ್ಚ್ ಧರ್ಮಗುರುವಿನ ಮುಸ್ಲಿಂ ದ್ವೇಷ ಭಾಷಣ ವಿರೋಧಿಸಿ ಪ್ರಾರ್ಥನಾ ಸಭೆಯಿಂದ ಹೊರ ನಡೆದ ಕೇರಳದ ಕ್ರೈಸ್ತ ಸನ್ಯಾಸಿನಿಯರು
‘ನಾನು ಕಷ್ಟದಲ್ಲಿದ್ದಾಗ ನನ್ನ ಗೆಳೆಯರೇ ನನಗೆ ದುಡ್ಡು ಕೊಟ್ಟಿಲ್ಲ’; ನೋವು ತೋಡಿಕೊಂಡ ರವಿಚಂದ್ರನ್
(29 Pets Death in two and half year in farmer home at mandya)