ಚರ್ಚ್ ಧರ್ಮಗುರುವಿನ ಮುಸ್ಲಿಂ ದ್ವೇಷ ಭಾಷಣ ವಿರೋಧಿಸಿ ಪ್ರಾರ್ಥನಾ ಸಭೆಯಿಂದ ಹೊರ ನಡೆದ ಕೇರಳದ ಕ್ರೈಸ್ತ ಸನ್ಯಾಸಿನಿಯರು

Kerala:ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸನ್ಯಾಸಿನಿಯರು ಭಾನುವಾರ ಕುರವಿಲಂಗಡ್ ಸೇಂಟ್ ಫ್ರಾನ್ಸಿಸ್ ಮಿಷನ್ ಮನೆಯೊಳಗಿನ ಪ್ರಾರ್ಥನಾ ಮಂದಿರದಲ್ಲಿ ಸೇಂಟ್ ಫ್ರಾನ್ಸಿಸ್ ಆಫ್ ಪೆನನ್ಸನ ಮೂರನೇ ಕ್ರಮಾಂಕದ ಪಾದ್ರಿ ರಾಜೀವ್ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.

ಚರ್ಚ್ ಧರ್ಮಗುರುವಿನ ಮುಸ್ಲಿಂ ದ್ವೇಷ ಭಾಷಣ ವಿರೋಧಿಸಿ ಪ್ರಾರ್ಥನಾ ಸಭೆಯಿಂದ ಹೊರ ನಡೆದ ಕೇರಳದ ಕ್ರೈಸ್ತ ಸನ್ಯಾಸಿನಿಯರು
ಕೇರಳದ ಕ್ರೈಸ್ತ ಸನ್ಯಾಸಿಯರು (ಸಂಗ್ರಹ ಚಿತ್ರ)
Follow us
| Updated By: ರಶ್ಮಿ ಕಲ್ಲಕಟ್ಟ

Updated on:Sep 13, 2021 | 4:33 PM

ತಿರುವನಂತಪುರಂ: ಪಾಲಾ ಬಿಷಪ್ ಜೋಸೆಫ್ ಕಲ್ಲರಂಙಾಟ್  (Pala Bishop Joseph Kallarangatt) ಅವರ ‘ನಾರ್ಕೋಟಿಕ್ ಜಿಹಾದ್’ (Narcotic Jihad)ಹೇಳಿಕೆ ಕೇರಳದಲ್ಲಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಕೊಟ್ಟಾಯಂನ ಕುರವಿಲಂಙಾಡ್ ನಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರು ಇನ್ನೊಬ್ಬ ಕ್ರಿಶ್ಚಿಯನ್ ಪಾದ್ರಿ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾದ್ರಿಯ ದ್ವೇಷ ಭಾಷಣಕ್ಕೆ ಆಕ್ಷೇಪಗಳನ್ನು ವ್ಯಕ್ತ ಪಡಿಸಿ ಸನ್ಯಾಸಿನಿಯರು ಪ್ರಾರ್ಥನಾ ಸಭೆಯಿಂದ ಹೊರನಡೆದಿದ್ದಾರೆ. ಈ ಹಿಂದೆ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಇದೇ ಸನ್ಯಾಸಿನಿಯರು ಬಹಿರಂಗವಾಗಿ ಪ್ರತಿಭಟಿಸಿದ್ದರು. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸನ್ಯಾಸಿನಿಯರು ಭಾನುವಾರ ಕುರವಿಲಂಗಡ್ ಸೇಂಟ್ ಫ್ರಾನ್ಸಿಸ್ ಮಿಷನ್ ಮನೆಯೊಳಗಿನ ಪ್ರಾರ್ಥನಾ ಮಂದಿರದಲ್ಲಿ ಸೇಂಟ್ ಫ್ರಾನ್ಸಿಸ್ ಆಫ್ ಪೆನನ್ಸನ ಮೂರನೇ ಕ್ರಮಾಂಕದ ಪಾದ್ರಿ ರಾಜೀವ್ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.

ಅನುಪಮಾ ಕೆಳಮಂಗಲತ್ತುವೆಳಿಯಿಲ್ , ಆಲ್ಫಿ ಪಲ್ಲಾಸೆರಿಲ್, ಅನ್ಸಿತ್ತಾ ಉರುಂಬಿಲ್ ಮತ್ತು ಜೋಸೆಫೀನ್ ವಿಲೂನಿಕಲ್ ಎಂಬ ಸನ್ಯಾಸಿನಿಯರು ಈ ರೀತಿ ಪ್ರತಿಭಟಿಸಿದ್ದಾರೆ. ಪಾದ್ರಿ ಈ ಮೊದಲೂ ಇದೇ ರೀತಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ ಇವರು ‘ಲವ್ ಜಿಹಾದ್ ಮತ್ತು ಮಾದಕವಸ್ತು ಜಿಹಾದ್’ ಕುರಿತು ಮಾರ್ ಜೋಸೆಫ್ ಕಲ್ಲರಂಙಾಟ್ ಅವರ ಹೇಳಿಕೆಗಳನ್ನು ಬೆಂಬಲಿಸದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಕ್ರಿಸ್ತನು ನಮಗೆ ಕಲಿಸಿದ್ದು ಎಲ್ಲರನ್ನು ಪ್ರೀತಿಸುವುದು, ನೆರೆಯವರನ್ನು ಪ್ರೀತಿಸುವುದು ಮತ್ತು ಕೋಮುವಾದವನ್ನು ಪಸರಿಸಬೇಡಿ ಎಂದು. ಕ್ರಿಸ್ತನು ನಮಗೆ ಏನನ್ನು ಬೋಧಿಸುತ್ತಾನೋ ಅದಕ್ಕೆ ವಿರುದ್ಧವಾದ ವಿಷಯಗಳನ್ನು ಪಾದ್ರಿ ಹೇಳುತ್ತಿದ್ದಾಗ ನಮಗೆ ಅದನ್ನು ನೋಡಲಾಗದೆ ಪ್ರತಿಕ್ರಿಯಿಸಿದ್ದೇವೆ ”ಎಂದು ಅವರು ಹೇಳಿದರು.

2018 ರಲ್ಲಿ ಕೊಚ್ಚಿಯಲ್ಲಿ ಬಿಷಪ್ ಫ್ರಾಂಕೊ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸನ್ಯಾಸಿನಿಯರು ಬಹಿರಂಗ ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಬದುಕುಳಿದ ಸನ್ಯಾಸಿನಿಯ ಬೆಂಬಲಕ್ಕೆ ಸನ್ಯಾಸಿನಿಯರು ಐತಿಹಾಸಿಕ ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ, ಮೂರು ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 2018 ರಲ್ಲಿ ಫ್ರಾಂಕೊನನ್ನು ಬಂಧಿಸಲಾಯಿತು.

ಬಿಷಪ್ ಕಲ್ಲರಂಙಾಟ್ ಅವರು, ಸೆಪ್ಟೆಂಬರ್ 9 ರ ಬುಧವಾರದಂದು ಚರ್ಚ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮುಸ್ಲಿಮೇತರರು ರಾಜ್ಯದಲ್ಲಿ ‘ನಾರ್ಕೋಟಿಕ್ ಜಿಹಾದ್’ಗೆ ಒಳಗಾಗುತ್ತಾರೆ ಎಂದು ಹೇಳಿದರು. ‘ಮಾದಕವಸ್ತು ಜಿಹಾದ್’ ಮುಸ್ಲಿಮರಲ್ಲದವರ, ವಿಶೇಷವಾಗಿ ಯುವಜನರ ಮಾದಕ ವ್ಯಸನಕ್ಕೆ ತುತ್ತಾಗುವ ಮೂಲಕ ಅವರ ಜೀವನವನ್ನು ಹಾಳುಮಾಡುತ್ತದೆ ಎಂದು ಅವರು ಹೇಳಿದ್ದರು. ಯಾವುದೇ ಪುರಾವೆಗಳನ್ನು ನೀಡದ ಬಿಷಪ್ ಅವರ ಹೇಳಿಕೆಯು ರಾಜ್ಯದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅನೇಕರು ಈ ಅಭಿಪ್ರಾಯವನ್ನು ವಿರೋಧಿಸಿದ್ದಾರೆ.

ಮಾದಕದ್ರವ್ಯಕ್ಕೆ ಧಾರ್ಮಿಕ ಬಣ್ಣ ನೀಡುವ ಅಗತ್ಯವಿಲ್ಲ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರು ಧಾರ್ಮಿಕ ವಿಭಜನೆಯನ್ನು ಉಂಟುಮಾಡಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು ಪ್ರತಿಪಕ್ಷದ ನಾಯಕ ವಿ.ಡಿ.ಸತೀಸನ್ ಅವರು ಅಪರಾಧಗಳಿಗೆ ಧರ್ಮ, ಜಾತಿ ಅಥವಾ ಲಿಂಗವಿಲ್ಲ. ಇದಕ್ಕಾಗಿ ಒಂದು ನಿರ್ದಿಷ್ಟ ಧರ್ಮವನ್ನು ಆರೋಪಿಸುವುದು ತಪ್ಪು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದ ಬಿಷಪ್​​ನ ನಾರ್ಕೋಟಿಕ್ಸ್ ಜಿಹಾದ್ ಹೇಳಿಕೆ ವಿವಾದ: ಲವ್ ಜಿಹಾದ್ ಬಗ್ಗೆ ಕಾನೂನು ತರಲು ಕೇಂದ್ರಕ್ಕೆ ಬಿಜೆಪಿ ಒತ್ತಾಯ

ಇದನ್ನೂ ಓದಿ:  ಕೇರಳ: ಲವ್ ಜಿಹಾದ್ ಹೇಳಿಕೆಗಾಗಿ ಪ್ರಮುಖ ಬಿಷಪ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಮುಸ್ಲಿಂ ಸಮನ್ವಯ ಸಮಿತಿ ಒತ್ತಾಯ

(Kerala Another Christian priest delivers hate speech against Muslims four nuns walkout protesting)

Published On - 4:32 pm, Mon, 13 September 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ