’ಭಾರತ ಐಸಿಸ್​ ಉಗ್ರರ ಶಿಬಿರಗಳನ್ನು ನಡೆಸುತ್ತಿದೆ’-ಪಾಕಿಸ್ತಾನದ ಆರೋಪ, ಸ್ಥಳಗಳ ಪಟ್ಟಿ ಬಿಡುಗಡೆ

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್​ಗೆ ಪಾಕಿಸ್ತಾನ ಸಹಕಾರ ಕೊಡುತ್ತಿದೆ. ತಾಲಿಬಾನ್​ ಆಡಳಿತಕ್ಕೆ ಬಂದ ನಂತರ ಪಾಕಿಸ್ತಾನದ ಗಮನ ಹೆಚ್ಚಾಗಿದೆ ಎಂಬ ವರದಿಯ ಬೆನ್ನಲ್ಲೇ ಈ ಆರೋಪ ಮಾಡಲಾಗಿದೆ.

’ಭಾರತ ಐಸಿಸ್​ ಉಗ್ರರ ಶಿಬಿರಗಳನ್ನು ನಡೆಸುತ್ತಿದೆ’-ಪಾಕಿಸ್ತಾನದ ಆರೋಪ, ಸ್ಥಳಗಳ ಪಟ್ಟಿ ಬಿಡುಗಡೆ
ಶಾ ಮೊಹಮ್ಮದ್ ಖುರೇಶಿ
Follow us
TV9 Web
| Updated By: Lakshmi Hegde

Updated on:Sep 13, 2021 | 4:36 PM

ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಅಡ್ಡಗಾಲು ಹಾಕಲು, ತನ್ನ ನೆಲದ ಹಲವು ನಗರಗಳಲ್ಲಿ ಐಸಿಸ್​ (ISIS) ಭಯೋತ್ಪಾದಕ ಕ್ಯಾಂಪ್​ಗಳನ್ನು ಆಯೋಜಿಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ.  ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮದ್​ ಖುರೇಷಿ, ರಾಷ್ಟ್ರೀ ಭದ್ರತಾ ಸಲಹೆಗಾರ ಮೊಯೀದ್​ ಯುಸುಫ್​ ಮತ್ತು ಮಾನವ ಹಕ್ಕುಗಳ ಸಚಿವ ಶಿರೀನ್​ ಮಜಾರಿ, ಈ ಆರೋಪ ಮಾಡಿದ್ದಾರೆ. ಹಾಗೇ, ಇದಕ್ಕೆ ಸಂಬಂಧಪಟ್ಟ 131 ಪುಟಗಳ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ಭಾರತದ ಗುಲ್​ಮಾರ್ಗ್​, ರಾಯಪುರ, ಜೋಧಪುರ, ಚಕ್ರಾಟಾ, ಅನುಪ್​ ಗಡ್​, ಬಿಕಾನೆರ್​ಗಳಲ್ಲಿ ಐಸಿಸ್​ ಉಗ್ರರ ಶಿಬಿರಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರತಿಪಾದಿಸಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್​ಗೆ ಪಾಕಿಸ್ತಾನ ಸಹಕಾರ ಕೊಡುತ್ತಿದೆ. ತಾಲಿಬಾನ್​ ಆಡಳಿತಕ್ಕೆ ಬಂದ ನಂತರ ಪಾಕಿಸ್ತಾನದ ಗಮನ ಹೆಚ್ಚಾಗಿದೆ ಎಂಬ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದ ಬೆನ್ನಲ್ಲೇ ಪಾಕಿಸ್ತಾನ, ಭಾರತದ ವಿರುದ್ಧ ಆರೋಪ ಮಾಡಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್​ ಅಲಿ ಗಿಲಾನಿ ನಿಧನ ಮತ್ತು ಆ ಬಳಿಕ ಅವರ ಕುಟುಂಬವನ್ನು ಭಾರತ ನಡೆಸಿಕೊಂಡ ರೀತಿಯನ್ನು ಗಮನದಲ್ಲಿಟ್ಟುಕೊಂಡು ನಾವು ದಾಖಲೆಯನ್ನು ಸಂಕಲಿಸಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಪರಿಗಣಿಸಿಕೊಂಡು, ಅಲ್ಲಿನ ಕೇಂದ್ರ ಸರ್ಕಾರದ ನೈಜ ಮುಖವನ್ನು ಜಗತ್ತಿನ ಎದುರು ಅನಾವರಣ ಗೊಳಿಸುವ ಸಲುವಾಗಿ ನಾವು ದಾಖಲೆ ಬಿಡುಗಡೆ ಮಾಡಿದ್ದೇವೆ ಎಂದೂ ಖುರೇಷಿ ಹೇಳಿಕೊಂಡಿದ್ದಾರೆ.

ನಂತರ ಮಾತನಾಡಿದ ಮೊಯೀದ್​ ಯುಸುಫ್,  ಇದೀಗ ನಡೆಯುತ್ತಿರುವ ಕಾಶ್ಮೀರ ಸ್ವಾತಂತ್ರ್ಯ ಹೋರಾಟಕ್ಕೆ ಐಸಿಸ್​ ಉಗ್ರರನ್ನು ಭಾರತವೇ ಸೇರಿಸಿಕೊಂಡು, ನಂತರ ಅದನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಲಿಂಕ್​ ಮಾಡಬಹುದು. ಈ ಮೂಲಕ ಕಾಶ್ಮೀರ ಹೋರಾಟಕ್ಕೆ ಅಡ್ಡಗಾಲು ಹಾಕಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶತಮಾನದ ಆರಂಭದಲ್ಲಿ ಯುವಕರ ನಿದ್ರೆಗೆಡಿಸಿದ್ದ ಶ್ರೀಯಾ ಶರನ್ ಮತ್ತೇ ವಾಪಸ್ಸು ಬಂದಿದ್ದಾಳೆ!

Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಹೇಳಿಕೆ

Published On - 4:31 pm, Mon, 13 September 21

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ