ರುಚಿಕರವಾದ ತಿಂಡಿ ಎದುರಿಗಿದ್ದರೂ ಸಹ ಹಸಿವಾಗುತ್ತಿಲ್ಲ ಎಂಬುದು ಕೆಲವರ ಚಿಂತೆ. ಯಾವ ಸಮಯದಲ್ಲಿ ನೋಡಿದರೂ ಹೊಟ್ಟೆ ತುಂಬಿರುವಂತೆಯೇ ಭಾಸವಾಗುತ್ತದೆ, ಆದರೆ ಪದೇ ಪದೇ ಈ ರೀತಿಯ ಆಗುತ್ತಿರುವುದು ನಿಮ್ಮ ಆರೋಗ್ಯಕ್ಕೆ ಹಿತವಲ್ಲ. ಹಸಿವಿನ ಕೊರತೆಯಿಂದಾಗಿ ದೇಹಕ್ಕೆ ಬೇಕಾದ ಆಹಾರ ಪೂರೈಕೆ ಸರಿಯಾದ ಕ್ರಮದಲ್ಲಿ ಸಿಗುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಹಸಿವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಜೀರ್ಣ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರ್ಥ. ಇಂತಹ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಹಸಿವಿನ ಕೊರತೆಯನ್ನು ನಿವಾರಿಸಿಕೊಳ್ಳಲು ಈ ಕೆಲವು ಟಿಪ್ಸ್ಗಳು ನಿಮಗಾಗಿ.
ಶುಂಠಿ ರಸ ಶುಂಠಿ ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಹಸಿವನ್ನು ಹೆಚ್ಚಿಸಲು ಒಂದು ಚಮಚ ಶುಂಠಿ ರಸ, ಕಪ್ಪು ಉಪ್ಪು ಮತ್ತು 2 ರಿಂದ 3 ಹನಿ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ಊಟಕ್ಕೆ ಒಂದು ಗಂಟೆ ಮೊದಲೇ ಸೇವಿಸಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ನಿಮಗೆ ಹಸಿವಿನ ಕೊರತೆ ನೀಗುತ್ತದೆ.
ಹಸಿರು ಕೊತ್ತಂಬರಿ ಪದಾರ್ಥಗಳಲ್ಲಿ ಬಳಸುವ ಕೊತ್ತಂಬರಿ ಸೊಪ್ಪು ಹಸಿವನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದಕ್ಕಾಗಿ ಹಸಿ ಕೊತ್ತಂಬರಿ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ವಾರಕ್ಕೆ ಮೂರು ದಿನ ಈ ರೀತಿಯಾದ ಅಭ್ಯಾಸ ನಿಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಸಹಾಯಕವಾಗಿದೆ.
ಮೆಂತ್ಯೆ ಮಂತ್ಯೆ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ. ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟ ಮೆಂತ್ಯೆಯನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಮೂಲಕ ಹಸಿವಿನ ಕೊರತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದೊಂದೇ ಅಲ್ಲದೇ ಹೊಟ್ಟೆ ನೋವು, ವಾಕರಿಕೆ ಬರುವಂತಾಗುವುದು, ಗ್ಯಾಸ್ ಈ ರೀತಿಯ ಸಮಸ್ಯೆಗೂ ಸಹ ಇದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ:
Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು