ಮಧುಮೇಹದ ಸಮಸ್ಯೆ ಇರುವವರು ಕೆಲವು ತರಕಾರಿ, ಹಣ್ಣುಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡರೆ ಮಧುಮೇಹ ಸಮಸ್ಯೆಯ ಅಪಾಯದಿಂದ ಪಾರಾಗಬಹುದು. ಡಯಾಬಿಟಿಸ್ ಸಮಸ್ಯೆ ಇರುವವರಿಗೆ ನುಗ್ಗೆ ಕಾಯಿ ಮತ್ತು ನುಗ್ಗೆ ಸೊಪ್ಪು ಅತ್ಯುತ್ತಮವಾದ ತರಕಾರಿ. ಮಧುಮೇಹಕ್ಕೆ ನುಗ್ಗೆಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ನುಗ್ಗೆಕಾಯಿಯನ್ನು ಸೇರಿಸಿಕೊಳ್ಳಬಹುದು.
ನುಗ್ಗೆ ಸೊಪ್ಪು ಉರಿಯೂತದ ಕಾಯಿಲೆ ಮತ್ತು ಚರ್ಮದ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಇದು ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿದ್ದು, ರಕ್ತದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ವಿಟಮಿನ್ ಎ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿದೆ. ಇದು ಚರ್ಮದ ಹೊಳಪು ಮತ್ತು ಕೂದಲ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಚಿಕನ್ಫಾಕ್ಸ್ನಂತಹ ರೋಗಗಳನ್ನು ತಡೆಯಲು ಕೂಡ ನುಗ್ಗೆ ಸೊಪ್ಪನ್ನು ಬಳಸಬಹುದಾಗಿದೆ.
ಇದನ್ನೂ ಓದಿ: ನವರಾತ್ರಿಗೆ ಮಧುಮೇಹಿಗಳು ಉಪವಾಸ ಮಾಡಬಹುದೇ?
ಅಧಿಕ ರಕ್ತದೊತ್ತಡ ಇರುವವರಿಗೆ ನುಗ್ಗೆ ಸೊಪ್ಪು ಒಳ್ಳೆಯದು. ಇದರ ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ನುಗ್ಗೆ ಕಾಯಿಯ ಸೇವನೆ ಮಾಡಿ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಲೋಹದ ಅಂಶವಿದೆ. ನುಗ್ಗೆ ಕಾಯಿಯಲ್ಲಿರುವ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ, ಮಧುಮೇಹ ಹೊಂದಿರುವ ಜನರು ನುಗ್ಗೆ ಸೊಪ್ಪನ್ನು ಹೆಚ್ಚು ಬಳಸಿದರೆ ಒಳ್ಳೆಯದು.
ನುಗ್ಗೆಕಾಯಿಯಲ್ಲಿರುವ ಮತ್ತೊಂದು ಪ್ರಮುಖ ಪೋಷಕಾಂಶವೆಂದರೆ ಫೈಬರ್. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಒಳ್ಳೆಯದು. ನುಗ್ಗೆಕಾಯಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಏಕೆಂದರೆ ಇದು ಇನ್ಸುಲಿನ್ ತರಹದ ಪ್ರೋಟೀನ್ಗಳನ್ನು ಹೊಂದಿರುತ್ತದೆ. ನುಗ್ಗೆ ಸೊಪ್ಪು ಕ್ಯಾರೆಟ್‌ಗಿಂತ ಹೆಚ್ಚಿನ ಕೊಬ್ಬು ಕರಗಬಲ್ಲ ವಿಟಮಿನ್‌ಗಳನ್ನು ಹೊಂದಿರುತ್ತದೆ. ಹಾಲು ಮತ್ತು ಬಾಳೆಹಣ್ಣುಗಳಿಗಿಂತ ಹೆಚ್ಚಿನ ಲೋಹೀಯ ಅಂಶಗಳನ್ನು ಹೊಂದಿರುತ್ತದೆ. ಹಾಗೇ, ಪಾಲಕ್ ಸೊಪ್ಪಿನಿಂತ ಹೆಚ್ಚಿನ ಕಬ್ಬಿಣದ ಅಂಶ ಮತ್ತು ಕಿತ್ತಳೆಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ: Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!
ನುಗ್ಗೆ ಸೊಪ್ಪು ಮತ್ತು ನುಗ್ಗೆ ಕಾಯಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುವ ಗುಣಗಳನ್ನು ಹೊಂದಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ