ಮಧುಮೇಹಿಗಳು ಈ 5 ಹೋಮ್ಮೇಡ್ ಸ್ಮೂಥಿಗಳನ್ನು ಮಿಸ್ ಮಾಡಬೇಡಿ!
ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ನಮ್ಮ ದೇಹದ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಡಯಾಬಿಟಿಸ್ ಬರುತ್ತದೆ.
ಇಂದಿನ ವೇಗದ ಜಗತ್ತಿನಲ್ಲಿ ಜನರು ಕೆಲಸ ಮತ್ತು ಆರೋಗ್ಯವೆರಡನ್ನೂ ಸರಿದೂಗಿಸಿಕೊಂಡು ಹೋಗುವುದು ಕಷ್ಟವಾಗಿದೆ. ಹೆಸರು, ಪ್ರತಿಷ್ಠೆ, ಹಣದ ಹಿಂದೆ ಹೋಗುತ್ತಿರುವ ಜನರ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ನಮ್ಮ ಗುರಿಗಳನ್ನು ಸಾಧಿಸುವ ಭರದಲ್ಲಿ ಬಹುಪಾಲು ಜನರು ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ. ಈಗೀಗ ಮಧುಮೇಹ, ಬಿಪಿ, ಹೃದ್ರೋಗಗಳು ಸಾಮಾನ್ಯವಾಗಿಬಿಟ್ಟಿವೆ. ಇವೆಲ್ಲದಕ್ಕೂ ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಯೇ ಕಾರಣ.
ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ನಮ್ಮ ದೇಹದ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಡಯಾಬಿಟಿಸ್ ಬರುತ್ತದೆ. ಇನ್ಸುಲಿನ್ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಮಧುಮೇಹವನ್ನು ನಿಯಂತ್ರಿಸದಿದ್ದರೆ ಹೃದಯರಕ್ತನಾಳದ ಕಾಯಿಲೆಗಳು, ಬೊಜ್ಜು, ಅನಾರೋಗ್ಯಕರ ಕೊಲೆಸ್ಟ್ರಾಲ್ ಮುಂತಾದ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಉಂಟಾಗಬಹುದು.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ನಿಂಬೆ ಜ್ಯೂಸ್ ಕುಡಿಯುತ್ತೀರಾ? ಈ ಅಭ್ಯಾಸ ಬಿಟ್ಟುಬಿಡಿ
ಮಧುಮೇಹ ಇರುವವರು ಆಹಾರದಲ್ಲಿ ಕಟ್ಟುನಿಟ್ಟಿನ ಡಯೆಟ್ ಪಾಲನೆ ಮಾಡಬೇಕು. ಹಣ್ಣು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಇದರ ಜೊತೆಗೆ ಅವರು ಕೆಲವು ಸ್ಮೂಥಿಯನ್ನು ಸಹ ಟ್ರೈ ಮಾಡಬಹುದು. ಆರೋಗ್ಯಕರ ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ ಸ್ಮೂಥಿಗಳು ಉಪಯುಕ್ತವಾಗಿವೆ. ಮಧುಮೇಹಿಗಳು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ 5 ಸ್ಮೂಥಿಗಳು ಇಲ್ಲಿವೆ…
ಬಾಳೆಹಣ್ಣು- ಹೂಕೋಸು ಸ್ಮೂಥಿ:
ಪ್ರತಿದಿನ ಬೆಳಿಗ್ಗೆ ಸ್ಮೂಥಿಯೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಬಾಳೆಹಣ್ಣುಗಳು ಮತ್ತು ರುಚಿಕರವಾದ ಹೂಕೋಸನ್ನು ಸೇರಿಸಿ ಸ್ಮೂಥಿ ಮಾಡಿಕೊಂಡು ಕುಡಿಯಿರಿ.
ಅನಾನಸ್-ದ್ರಾಕ್ಷಿ ಹಣ್ಣಿನ ಡಿಟಾಕ್ಸ್ ಸ್ಮೂಥಿ:
ಪೈನಾಪಲ್, ದ್ರಾಕ್ಷಿಹಣ್ಣು ಮತ್ತು ಪಾಲಕ್ ಸೊಪ್ಪಿನ ನೀರು ಹಾಗೂ ಖನಿಜಗಳಿಂದ ತುಂಬಿರುತ್ತದೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಫೈಬರ್‌ನ ಅಂಶವನ್ನು ಪೂರೈಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!
ಪೀಚ್ ಸ್ಮೂಥಿ:
ಪೀಚ್ ಸ್ಮೂಥಿಯನ್ನು ಮಧ್ಯಾಹ್ನ ಸೇವಿಸುವುದು ಉತ್ತಮ. ಇದರಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದು ನಿಮ್ಮ ಹೊಟ್ಟೆಗೆ ಭಾರವಾಗುವುದಿಲ್ಲ.
ಪ್ರೋಟೀನ್-ಪ್ಯಾಕ್ಡ್ ಗ್ರೀನ್ ಸ್ಮೂಥಿ:
ನೀವು ಹಸಿರು ಸಲಾಡ್‌ಗಳನ್ನು ಹೆಚ್ಚು ಸೇವಿಸುತ್ತೀರಾ? ಹಾಗಾದರೆ ಅದನ್ನು ಸ್ಮೂಥಿ ರೂಪದಲ್ಲಿ ಏಕೆ ಕುಡಿಯಬಾರದು? ಪ್ರೋಟೀನ್-ಪ್ಯಾಕ್ಡ್ ಹಸಿರು ಸ್ಮೂಥಿಯು ಬಾದಾಮಿ ಬೆಣ್ಣೆ ಮತ್ತು ಪ್ರೋಟೀನ್ ಪುಡಿ, ಪಾಲಕ್ ಸೊಪ್ಪು, ಅವಾಕಾಡೊ ಹಣ್ಣನ್ನು ತಯಾರಿಸುವ ಸ್ಮೂಥಿಯಾಗಿದೆ.
ಪೀನಟ್ ಬಟರ್ -ಓಟ್ಮೀಲ್ ಸ್ಮೂಥಿ:
ಸಾಕಷ್ಟು ಪ್ರೋಟೀನ್ ಅಂಶವನ್ನು ಹೊಂದಿರುವ, ಫೈಬರ್ ಹೇರಳವಾಗಿರುವ ಧಾನ್ಯಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಲು ಉತ್ತಮವಾದ ಮಾರ್ಗ ಯಾವುದು ಗೊತ್ತಾ? ಪೀನಟ್ ಬಟರ್ ಮತ್ತು ಓಟ್ಮೀಲ್ ಸ್ಮೂಥಿ ಸೇವಿಸುವುದು. ಓಟ್ಸ್ ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ