World Mental Health Day 2023: ನೀವು ಖಿನ್ನತೆಗೆ ಒಳಗಾಗುತ್ತಿರುವ 10 ಸಂಕೇತಗಳಿವು

ಖಿನ್ನತೆಯು ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಅದು ದುಃಖ, ಒತ್ತಡ, ಹತಾಶೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿಯನ್ನು ಉಂಟುಮಾಡುತ್ತದೆ. ಇದು ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

World Mental Health Day 2023: ನೀವು ಖಿನ್ನತೆಗೆ ಒಳಗಾಗುತ್ತಿರುವ 10 ಸಂಕೇತಗಳಿವು
ಖಿನ್ನತೆImage Credit source: iStock
Follow us
|

Updated on: Oct 10, 2023 | 3:20 PM

ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕವಾಗಿ ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಮೀಸಲಾಗಿರುವ ದಿನವಾಗಿದೆ. ಈ ದಿನವು ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ.

ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಮುಕ್ತ ಚರ್ಚೆಗಳನ್ನು ಮಾಡಲು ಈ ದಿನವು ವೇದಿಕೆಯಾಗಿದೆ. ಖಿನ್ನತೆಯು ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಅದು ದುಃಖ, ಒತ್ತಡ, ಹತಾಶೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿಯನ್ನು ಉಂಟುಮಾಡುತ್ತದೆ. ಇದು ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಖಿನ್ನತೆಯ ಕೆಲವು ಆರಂಭಿಕ ಸಂಕೇತಗಳು ಹೀಗಿವೆ…

ಖಿನ್ನತೆಯ 10 ಆರಂಭಿಕ ಚಿಹ್ನೆಗಳು ಹೀಗಿವೆ:

1. ನಿರಂತರ ದುಃಖ ಅಥವಾ ಶೂನ್ಯತೆಯ ಭಾವನೆಗಳು:

ಖಿನ್ನತೆ ಶುರುವಾಗುವುದಕ್ಕಿಂತ ಮೊದಲು ಸಾಮಾನ್ಯವಾಗಿ ಕೆಲವು ವಾರಗಳು ಅಥವಾ ತಿಂಗಳುಗಳವರೆಗೆ ನಿಮಗೆ ಒಂಟಿತನದ ಭಾವನೆ, ಶೂನ್ಯತೆಯ ಭಾವನೆ, ಬೇಸರ, ದುಃಖ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: Symptoms of depression: ಖಿನ್ನತೆಗೆ ಒಳಗಾದ ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡುಬರಬಹುದು; ಎಂದಿಗೂ ನಿರ್ಲಕ್ಷ್ಯಬೇಡ

2. ಕೆಲಸದಲ್ಲಿ ನಿರಾಸಕ್ತಿ:

ಖಿನ್ನತೆಯನ್ನು ಅನುಭವಿಸುತ್ತಿರುವ ವ್ಯಕ್ತಿಯು ತನ್ನ ಹವ್ಯಾಸಗಳು, ಸಾಮಾಜಿಕ ವರ್ತನೆ, ತಮಗಿಷ್ಟವಾದ ದೈನಂದಿನ ಕಾರ್ಯಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು.

3. ಹಸಿವು ಮತ್ತು ತೂಕದಲ್ಲಿ ಬದಲಾವಣೆ:

ಖಿನ್ನತೆಯ ಲಕ್ಷಣಗಳಲ್ಲಿ ಹಸಿವಾಗದಿರುವುದು ಕೂಡ ಒಂದು. ಅತಿಯಾಗಿ ತಿನ್ನದೇ ಇದ್ದರೂ ತೂಕ ಹೆಚ್ಚಾಗುತ್ತದೆ. ಅಥವಾ ಕೆಲವರಿಗೆ ವಿಪರೀತವಾಗಿ ತೂಕ ಕಡಿಮೆಯಾಗುತ್ತದೆ.

4. ನಿದ್ರೆಗೆ ತೊಂದರೆ:

ಖಿನ್ನತೆಯಲ್ಲಿ ನಿದ್ರಾ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಖಿನ್ನತೆಗೆ ಒಳಗಾಗುವ ವ್ಯಕ್ತಿಗಳು ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಕೆಲವರು ಅತಿಯಾಗಿ ನಿದ್ರೆ ಮಾಡುತ್ತಾರೆ.

5. ಆಯಾಸ:

ರಾತ್ರಿಯಿಡೀ ನಿದ್ರೆ ಮಾಡಿದ ನಂತರವೂ ಸುಸ್ತಾದ ಭಾವನೆ ಇರುತ್ತದೆ. ಆಯಾಸದ ಭಾವನೆ ಖಿನ್ನತೆಯ ಒಂದು ಲಕ್ಷಣವಾಗಿದೆ.

6. ಏಕಾಗ್ರತೆಯಲ್ಲಿ ತೊಂದರೆ:

ಖಿನ್ನತೆಯು ವ್ಯಕ್ತಿಯ ಏಕಾಗ್ರತೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

ಇದನ್ನೂ ಓದಿ: ಹವಾಮಾನ ಬದಲಾವಣೆಯು ಖಿನ್ನತೆಗೆ ಕಾರಣವಾಗಬಹುದು ಎಚ್ಚರ

7. ಹತಾಶತೆಯ ಭಾವನೆ:

ಖಿನ್ನತೆಯಿರುವ ವ್ಯಕ್ತಿಗಳು ಸಾಮಾನ್ಯವಾಗಿ ನಕಾರಾತ್ಮಕ ಆಲೋಚನೆಗಳು, ತಪ್ಪಿತಸ್ಥ ಭಾವನೆ, ನಿಷ್ಪ್ರಯೋಜಕತೆಯ ಭಾವನೆ ಮತ್ತು ಭವಿಷ್ಯದ ಬಗ್ಗೆ ಹತಾಶತೆಯ ಭಾವನೆಯನ್ನು ಅನುಭವಿಸುತ್ತಾರೆ.

8. ಕಿರಿಕಿರಿ ಅಥವಾ ಅತಿಯಾದ ಕೋಪ:

ಖಿನ್ನತೆಯು ಹೆಚ್ಚಾಗುತ್ತಿದ್ದಂತೆ ಕಿರಿಕಿರಿ, ಕೋಪ ಹೆಚ್ಚಾಗುತ್ತದೆ.

9. ಜನರಿಂದ ದೂರ ಇರುವುದು:

ಖಿನ್ನತೆಯಿರುವ ಜನರು ಇತರರೊಂದಿಗೆ ಬೆರೆಯುವುದಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರ ಸಂಪರ್ಕದಿಂದ ದೂರವಿರುತ್ತಾರೆ.

10. ಸಾವು ಅಥವಾ ಆತ್ಮಹತ್ಯೆಯ ಆಲೋಚನೆಗಳು:

ಸಾಯಬೇಕೆಂಬ ಅಥವಾ ಆತ್ಮಹತ್ಯೆಯ ಬಗ್ಗೆ ಪದೇಪದೆ ಆಲೋಚನೆಗಳನ್ನು ಹೊಂದುವುದು ಖಿನ್ನತೆಯ ಗಂಭೀರ ಎಚ್ಚರಿಕೆಯ ಚಿಹ್ನೆಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸ್ಕೂಟಿಗೆ ಕಾರು ಗುದ್ದಿಸಿದ ಅಪ್ರಾಪ್ತ ಬಾಲಕ, ಮಹಿಳೆ ಸ್ಥಳದಲ್ಲೇ ಸಾವು
ಸ್ಕೂಟಿಗೆ ಕಾರು ಗುದ್ದಿಸಿದ ಅಪ್ರಾಪ್ತ ಬಾಲಕ, ಮಹಿಳೆ ಸ್ಥಳದಲ್ಲೇ ಸಾವು
BJP JDS Padayatra: 2ನೇ ದಿನದ ಪಾದಯಾತ್ರೆ, ಲೈವ್​ ವೀಕ್ಷಿಸಿ
BJP JDS Padayatra: 2ನೇ ದಿನದ ಪಾದಯಾತ್ರೆ, ಲೈವ್​ ವೀಕ್ಷಿಸಿ
ನಿಧಿ ಆಸೆಗಾಗಿ ಮಧ್ಯ ರಾತ್ರಿ ದೇವಸ್ಥಾನದ ಬಂಡೆ ಕೊರೆದ ಕಿಡಿಗೇಡಿಗಳು
ನಿಧಿ ಆಸೆಗಾಗಿ ಮಧ್ಯ ರಾತ್ರಿ ದೇವಸ್ಥಾನದ ಬಂಡೆ ಕೊರೆದ ಕಿಡಿಗೇಡಿಗಳು
1993 ಮುಂಬೈ ಸ್ಫೋಟ ಅಪರಾಧಿ ಅಬು ಸಲೇಂನನ್ನು ಮನ್ಮಾಡ್​ಗೆ ಕರೆತಂದ ಪೊಲೀಸರು
1993 ಮುಂಬೈ ಸ್ಫೋಟ ಅಪರಾಧಿ ಅಬು ಸಲೇಂನನ್ನು ಮನ್ಮಾಡ್​ಗೆ ಕರೆತಂದ ಪೊಲೀಸರು
ವಾಟ್ಸ್​​ಆ್ಯಪ್ ಮೆಟಾ ಎಐ ಮೂಲಕ ಬೇಕಾದ ಚಿತ್ರ ರಚಿಸೋದು ಈಸಿ!​
ವಾಟ್ಸ್​​ಆ್ಯಪ್ ಮೆಟಾ ಎಐ ಮೂಲಕ ಬೇಕಾದ ಚಿತ್ರ ರಚಿಸೋದು ಈಸಿ!​
ಹಿತ್ತಾಳೆ ಚೊಂಬಿನಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭವೇನು? ವಿಡಿಯೋ ನೋಡಿ
ಹಿತ್ತಾಳೆ ಚೊಂಬಿನಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭವೇನು? ವಿಡಿಯೋ ನೋಡಿ
Nithya Bhavishya: ರವಿವಾರ ಅಮವಾಸ್ಯೆ, ಇಂದಿನ ನಿಮ್ಮ ದಿನ ಭವಿಷ್ಯ ತಿಳಿಯಿ
Nithya Bhavishya: ರವಿವಾರ ಅಮವಾಸ್ಯೆ, ಇಂದಿನ ನಿಮ್ಮ ದಿನ ಭವಿಷ್ಯ ತಿಳಿಯಿ
ವಾರ ಭವಿಷ್ಯ: ಶ್ರಾವಣ ಮಾಸದ ಆರಂಭ ವಾರದ ಭವಿಷ್ಯ ತಿಳಿಯಿರಿ
ವಾರ ಭವಿಷ್ಯ: ಶ್ರಾವಣ ಮಾಸದ ಆರಂಭ ವಾರದ ಭವಿಷ್ಯ ತಿಳಿಯಿರಿ
ಪಿಎಸ್​ಐ ಅನುಮಾನಾಸ್ಪದ ಸಾವು: ಸಿಎಂ ವಿರುದ್ಧ ರೊಚ್ಚಿಗೆದ್ದ ಶಾಸಕ ಯತ್ನಾಳ್
ಪಿಎಸ್​ಐ ಅನುಮಾನಾಸ್ಪದ ಸಾವು: ಸಿಎಂ ವಿರುದ್ಧ ರೊಚ್ಚಿಗೆದ್ದ ಶಾಸಕ ಯತ್ನಾಳ್
ದುನಿಯಾ ವಿಜಯ್ ನಿರ್ದೇಶನದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ಶಿವಣ್ಣ
ದುನಿಯಾ ವಿಜಯ್ ನಿರ್ದೇಶನದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ಶಿವಣ್ಣ