ಭಾರತದಲ್ಲಿ 10 ಕೋಟಿ ಜನರಿಗೆ ನಿದ್ರಾಹೀನತೆ ಸಮಸ್ಯೆ; ನಿಮಗೂ ಈ ಲಕ್ಷಣಗಳಿವೆಯೇ?

ಭಾರತದಲ್ಲಿ 10 ಕೋಟಿ ಜನರಿಗೆ ಈ ನಿದ್ರಾಹೀನತೆ ಸಮಸ್ಯೆ ಇದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇವರಲ್ಲಿ ಸುಮಾರು 5 ಕೋಟಿ ಜನರಿಗೆ ನಿದ್ರಾಹೀನತೆಯ ತೀವ್ರ ಲಕ್ಷಣಗಳಿವೆ. ಈ ಕಾಯಿಲೆಯಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜು ಹೆಚ್ಚುತ್ತಿದೆ.

ಭಾರತದಲ್ಲಿ 10 ಕೋಟಿ ಜನರಿಗೆ ನಿದ್ರಾಹೀನತೆ ಸಮಸ್ಯೆ; ನಿಮಗೂ ಈ ಲಕ್ಷಣಗಳಿವೆಯೇ?
ನಿದ್ರಾಹೀನತೆImage Credit source: iStock
Follow us
|

Updated on: Oct 10, 2023 | 4:01 PM

ಭಾರತದಲ್ಲಿ 10 ಕೋಟಿ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ನವದೆಹಲಿಯ ಏಮ್ಸ್ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಭಾರತದಲ್ಲಿ 10 ಕೋಟಿ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಕೆಲವರಿಗೆ ನಿದ್ರೆಯ ಸಮಯದಲ್ಲಿ ಸರಿಯಾಗಿ ಉಸಿರಾಡಲು ಆಗದೆ, ಗೊರಕೆ ಕೂಡ ಉಂಟಾಗುತ್ತದೆ. ಈ ಕಾರಣದಿಂದಾಗಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ದೇಶದ ವಯಸ್ಕ ಜನಸಂಖ್ಯೆಯ ಸುಮಾರು ಶೇ. 11ರಷ್ಟು ಜನರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಏಮ್ಸ್​ ಕಳೆದ 20 ವರ್ಷಗಳಲ್ಲಿ 6 ಸಂಶೋಧನೆಗಳನ್ನು ಮಾಡುವ ಮೂಲಕ ಈ ಡೇಟಾವನ್ನು ಸಿದ್ಧಪಡಿಸಿದೆ. ಪುರುಷರಲ್ಲಿ ಗೊರಕೆ ಮತ್ತು ನಿದ್ರೆಯ ಸಮಯದಲ್ಲಿನ ಉಸಿರಾಟದ ತೊಂದರೆಯ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸಂಶೋಧನೆ ತಿಳಿಸಿದೆ. ಹೀಗಾಗಿ, ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಇದರಿಂದ ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ. ನಿದ್ರಾಹೀನತೆಯಿಂದ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯವೂ ಹೆಚ್ಚುತ್ತಿದೆ. ಈ ಸಂಶೋಧನೆಯನ್ನು ಜರ್ನಲ್ ಆಫ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಮಗುವಿನ ನಿದ್ರೆಯ ಸಮಯದ ಬಗ್ಗೆ ಎಚ್ಚರ ವಹಿಸದಿದ್ದರೆ ಏನಾಗುತ್ತೆ?

ಈ ಸಂಶೋಧನೆಯನ್ನು ನಡೆಸಿರುವ ದೆಹಲಿಯ ಏಮ್ಸ್ ಪಲ್ಮನಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಅನಂತ್ ಮೋಹನ್ ಅವರ ಪ್ರಕಾರ, ಭಾರತದಲ್ಲಿ 10 ಕೋಟಿ ಜನರಿಗೆ ಈ ನಿದ್ರಾಹೀನತೆ ಸಮಸ್ಯೆ ಇದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇವರಲ್ಲಿ ಸುಮಾರು 5 ಕೋಟಿ ಜನರಿಗೆ ನಿದ್ರಾಹೀನತೆಯ ತೀವ್ರ ಲಕ್ಷಣಗಳಿವೆ. ಈ ಕಾಯಿಲೆಯಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜು ಹೆಚ್ಚುತ್ತಿದೆ.

ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗದ ಕೆಲವರು ಹಗಲಲ್ಲಿ ನಿದ್ರೆ ಮಾಡುತ್ತಾರೆ. ಕೆಲವರಿಗೆ ನಿದ್ರೆಯಲ್ಲಿ ಗೊರಕೆ ಉಂಟಾಗುವುದರಿಂದ ನಿದ್ರೆಗೆ ತೊಂದರೆ ಆಗುತ್ತದೆ. ಈ ಕಾರಣದಿಂದಾಗಿ ಜನರು ಹಗಲಿನಲ್ಲಿ ನಿದ್ರೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಈ ರೋಗವು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ. ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವೂ ಉಂಟಾಗುತ್ತದೆ.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ನಿದ್ರಾಹೀನತೆಯನ್ನು ತಡೆಗಟ್ಟಲು ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆ ರೋಗಲಕ್ಷಣಗಳು ಯಾವುವೆಂದರೆ,

– ರಾತ್ರಿ ವೇಳೆ ಗೊರಕೆ ಹೊಡೆಯುವುದು

– ಉಸಿರಾಟದ ತೊಂದರೆ

– ಒಣಗಿದ ಬಾಯಿ

– ಬೆಳಿಗ್ಗೆ ತಲೆನೋವು

– ಅತಿಯಾಗಿ ಹಗಲಿನ ವೇಳೆ ನಿದ್ರೆ ಮಾಡುವುದು

– ಏಕಾಗ್ರತೆಯ ಕೊರತೆ

– ಸಿಡುಕುತನ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ