Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ, ಶನಿವಾರ ಅನಾರೋಗ್ಯದಿಂದ ಮನಸ್ಸು ಹಾಳು, ಪುಣ್ಯಕ್ಷೇತ್ರ ದರ್ಶನ, ಹೂಡಿಕೆಯ ಬಗ್ಗೆ ಅಪನಂಬಿಕೆ ಈ ದಿನದ್ದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 12, 2025 | 1:55 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ : ಶನಿವಾರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ಕೌಲವ, ಸೂರ್ಯೋದಯ – 06 : 21 am, ಸೂರ್ಯಾಸ್ತ – 06 : 44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:28 – 11:01, ಯಮಘಂಡ ಕಾಲ 14:06 – 15:39, ಗುಳಿಕ ಕಾಲ 06:22 – 07:55

ತುಲಾ ರಾಶಿ: ಮಧ್ಯವರ್ತಿಗಳಿಗೆ ಆರ್ಥಿಕ ತೊಂದರೆ. ನ್ಯಾಯಕ್ಕಾಗಿ ತಂತ್ರಗಾರಿಕೆ ಮಾಡುವರು. ಬಹಳ ದಿನಗಳ ಅನಂತರ ನಿಮ್ಮ ಹಳೆಯ ಶತ್ರುವಿನ ಭೇಟಿಯಾಗಬಹುದು. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ನ್ಯಾಯಾಲಯದಿಂದ ಸಿಕ್ಕ ತೀರ್ಪು ನಿಮಗೆ ಸಂತೋಷಕೊಡುವುದು. ಭವಿಷ್ಯದ ಆರ್ಥಿಕತೆಯ ಚಿಂತನೆಯನ್ನು ನಡಸುವಿರಿ. ಸಂಗಾತಿಯ ಜೊತೆ ಶೀತಲಸಮರವು ನಡೆಯಬಹುದು. ನೀವು ಅಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ತಂದೆ ಮಕ್ಕಳ ಜೊತೆ ಆರ್ಥಿಕತೆಯ ವಿಷಯಕ್ಕೆ ಕಲಹ. ಹಿರಿಯರ ಮಾರ್ಗದರ್ಶನದಲ್ಲಿ ನೀವು ಮುಂದುವರಿಯಿರಿ. ಅನಿರೀಕ್ಷತ ಸಂಕಟಕ್ಕೆ ಹಣದ ಕೊರತೆ ಕಾಣಿಸುವುದು. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಆಪ್ತರೊಂದಿಗೆ ನೀವು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.

ವೃಶ್ಚಿಕ ರಾಶಿ: ನಿಮಗೆ ಯಾವುದಾದರೂ ಒಂದು ರೀತಿಯಲ್ಲಿ ಬಂಧನವಾಗಬಹುದು. ಮಾತಿನಿಂದಲೂ ಕಟ್ಟಿಹಾಕುಬರು. ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದಾಗಿದೆ. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ವಿದೇಶ ಪ್ರವಾಸ ದಾಖಲೆಗಳ ಕೊರೆತೆಯಿಂದ ಸ್ಥಗತಿವಾಗಲಿದೆ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಸಂಗಾತಿಯ ಜೊತೆ ಈ ದಿನವನ್ನು ಆನಂದದಿಂದ ಕಳೆಯಿರಿ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ನಿಮ್ಮವರೇ ನಿಮ್ಮ ಗೆಲುವನ್ನು ಕಸಿದುಕೊಳ್ಳಬಹುದು. ವಿವಾಹದ ಸುಖದಲ್ಲಿ ನೀವಿರುವಿರಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ. ಸಾಮಾಜಿಕ ಸೇವೆಗೆ ಪ್ರಶಂಸೆ.

ಧನು ರಾಶಿ: ಅತಿಯಾದ ಯೋಚನೆಯಿಂದ ಹೊಸ ಸಮಸ್ಯೆಗಳೇ ಹುಟ್ಟುವುದು. ಕಣ್ಮುಚ್ಚಿ ಕುಳಿತರೆ ಕಾಣಬೇಕಾದುದೂ ಕಾಣದು. ಇತರರು ನಿಮ್ಮ ಬಗ್ಗೆ ಸಕಾರಾತ್ಮವಾಗಿ ಹೇಳಿದರೂ ನಂಬುವ ಮಾನಸಿಕತೆ ನಿಮ್ಮಲ್ಲಿ ಇರುವುದಿಲ್ಲ. ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸವನ್ನು ದುರಪಯೋಗ ಮಾಡಿಕೊಳ್ಳುವಿರಿ. ಅನ್ಯಚಿಂತೆಯಿಂದ ಕೆಲಸಗಳು ಹಾಗೆಯೇ ಉಳಿದಿರಬಹುದು. ಇಂದು ನೀವು ಕೆಲವು ವಿಷಯಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ಸುಮ್ಮನೇ ಯಾರದೋ ಸಲಹೆಯನ್ನು ಅನುಸರಿಸುವುದರಿಂದ ಅರ್ಥವಿಲ್ಲ. ನಾಯಕತ್ವ ಕೌಶಲ್ಯಗಳು ಇತರರಿಗೆ ಗೊತ್ತಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಭರವಸೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಪ್ರಯತ್ನಿಸಿ. ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಕುಟುಂಬ ಸಂಬಂಧಗಳಿಗೆ ಪ್ರಾಮುಖ್ಯವನ್ನು ನೀಡುತ್ತದೆ. ಭೂಮಿಯ ಲಾಭಕ್ಕಾಗಿ ಓಡಾಟವನ್ನು ಮಾಡಬೇಕಾದೀತು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿನವೂ ಇದಾಗಬಹುದು.

ಮಕರ ರಾಶಿ: ಬುದ್ಧಿವಂತರಂತೆ ಯೋಚಿಸಿ ದಡ್ಡರಾಗುವಿರಿ. ನಿಮ್ಮ ಯೋಜನೆಯನ್ನು ಪುನಃ ಗುರಿಯ ಕಡೆಗೆ ತಂದು ನಿಲ್ಲಿಸಿ.‌ ನಿಮ್ಮ ಹೂಡಿಕೆ ವಿಚಾರವನ್ನು ರಹಸ್ಯವಾಗಿ ಇಡುವಿರಿ. ಇದನ್ನು ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ‌ ಅಸಮಾಧಾನವಾಗುವ ಸಾಧ್ಯತೆ ಇದೆ. ಯಾವುದಾರೂ ಸ್ಪರ್ಧೆಯಲ್ಲಿ ಭಾಗವಹಿಸುವುದಿದ್ದರೆ ಇಂದು ಜಯ ನಿಮ್ಮದೇ. ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಂಡು ಬೇಸರವಾಗಿದ್ದರೂ ಅದನ್ನು ಮಾಡಿಕೊಳ್ಳದೇ ವಿಧಿಯಿಲ್ಲ. ನಿಮ್ಮ ಅಗತ್ಯ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಬಹುದು. ನೀವು ಧರ್ಮ ಕಾರ್ಯಗಳಲ್ಲಿ ಮುನ್ನಡೆಯುವುದು ಉತ್ತಮ. ಮಕ್ಕಳಿಗೆ ನೀವು ಆದರ್ಶರಾಗುವಿರಿ. ಹಿರಿಯ ಸದಸ್ಯರಿಗೆ ನಿಮ್ಮ ಸಹಕಾರವು ಇರಲಿದೆ. ನೆರಮನೆಯವರ ಜೊತೆ ಭೂಮಿಯ ವಿಚಾರಕ್ಕೆ ವಾಗ್ವಾದವು ಆಗಬಹುದು. ಗೃಹನಿರ್ಮಾಣದ ದಾಖಲೆ ಪಡೆಯಲು ನೀವು ಓಡಾಟ ಮಾಡಬೇಕಾಗುವುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ.

ಕುಂಭ ರಾಶಿ: ನಿಮ್ಮನ್ನು ನಂಬಿದವರಿಗೆ ನಂಬಿಕೆ ಬರುವಂತೆ ಕೆಲಸವನ್ನು ಮಾಡಿ. ಹಣದ ತೊಂದರೆ ಎದ್ದು ಕಾಣಿಸುತ್ತದೆ. ಇದರಿಂದ ಚಿಂತೆಯೂ ಆಗಬಹುದು. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಉತ್ತಮವಾದ ಅಭ್ಯಾಸವನ್ನು ಆರಂಭಿಸಲು ಸಕಲ. ಉತ್ಸಾಹಕ್ಕೆ ಭಂಗವಾಗುವ ಯಾವ ವಿಚಾರಗಳೂ ಇಂದ ಆಗದು.‌ ನಿಶ್ಚಿಂತೆಯಿಂದ ಇರಬಹುದು. ಗೆಳಯರ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡು ಖುಷಿಪಡುವಿರಿ. ಅವಸರದಲ್ಲಿ ಯಾವುದೇ ಕಾರ್ಯವನ್ನು ಮಾಡುವುದು ಬೇಡ. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ಪೂರ್ಣವಾಗಿ ಸಫಲವಾಗದು. ನೀವು ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುತ್ತೀರಿ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ಕಾರ್ಯನಿರ್ವಹಣೆಗೆ ಪ್ರಶಂಸೆಯು ಸಿಗಲಿದೆ. ಗ್ರಾಹಕರಿಂದ ಮೋಸ ಹೋಗಬೇಕಾದೀತು.

ಮೀನ ರಾಶಿ: ಇಂದು ನಿರೀಕ್ಷಿತ ವಾರ್ತೆಯಿಂದ ನಿಮಗೆ ಸಂತೋಷವಿದೆ. ವಿನಾಕಾರಣ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಕೆಲಸಗಳನ್ನು ಮುಂದೂಡುವ ಮನಃಸ್ಥಿತಿಯನ್ನು ಹೊಂದಿದ್ದೀರಿ. ಮಾತುಗಳನ್ನು ಆಡುವಾಗ ಗಮನವಿರಲಿ. ಸ್ನೇಹಿತರ ಬೆಂಬಲವು ನಿಮಗೆ ಅಗತ್ಯವಾಗಿ ಸಿಗಲಿದೆ. ಕೆಲವು ಅಪರಿಚಿತರ ಜೊತೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಲಿ. ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಪ್ರಯೋಜನವುದೆ. ಸಂಗಾತಿಯ ಮಾತುಗಳಿಂದ ಮನೋಬಲವು ಹೆಚ್ಚಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ಪೂರೈಸುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ