AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರ ಅನೇಕ ವರ್ಷಗಳ ಕಾರ್ಯಕ್ಕೆ ಜಯ, ಕುಟುಂಬದಲ್ಲಿ ಸಂತೋಷದ ವಾತಾವರಣ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ, ಶನಿವಾರ ಅನಾರೋಗ್ಯದಿಂದ ಮನಸ್ಸು ಹಾಳು, ಪುಣ್ಯಕ್ಷೇತ್ರ ದರ್ಶನ, ಹೂಡಿಕೆಯ ಬಗ್ಗೆ ಅಪನಂಬಿಕೆ ಈ ದಿನದ್ದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯವರ ಅನೇಕ ವರ್ಷಗಳ ಕಾರ್ಯಕ್ಕೆ ಜಯ, ಕುಟುಂಬದಲ್ಲಿ ಸಂತೋಷದ ವಾತಾವರಣ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 12, 2025 | 1:48 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ : ಶನಿವಾರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ಕೌಲವ, ಸೂರ್ಯೋದಯ – 06 : 21 am, ಸೂರ್ಯಾಸ್ತ – 06 : 44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:28 – 11:01, ಯಮಘಂಡ ಕಾಲ 14:06 – 15:39, ಗುಳಿಕ ಕಾಲ 06:22 – 07:55

ಮೇಷ ರಾಶಿ: ಅನೇಕ ವರ್ಷಗಳ ನಿಮ್ಮ ಕಾರ್ಯಕ್ಕೆ ಜಯ. ನಿಮ್ಮಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ. ಸ್ವಾರ್ಥಿಗಳ ಸಹವಾಸವು ನಿಮಗೆ ಬೇಡವೆನಿಸಬಹುದು. ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನಂಬಿಕೆಯನ್ನು ಪಡೆದ ಅನಂತರವೇ ಕಾರ್ಯದಲ್ಲಿ ಮುನ್ನಡೆಯಿರಿ. ಸಮಸ್ಯೆಗಳಿಗೆ ಸೊಪ್ಪು ಹಾಕಿದಷ್ಟೂ ದೊಡ್ಡದಾಗುತ್ತದೆ. ನಿಮ್ಮದಲ್ಲದ ಕೆಲಸವನ್ನು ನೀವೇ ಮಾಡಬೇಕಾಗಬಹುದು. ಮಕ್ಕಳ ಚಲನವಲನದ ಕಡೆಗೆ ಗಮನವಿರಲಿ. ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಮನೆಯನ್ನು ಸ್ಥಳಾಂತರ ಮಾಡುವಿರಿ. ಗುರಿಯನ್ನು ಸಾಧಿಸಿದ ಸಂಭ್ರಮವು ನಿಮಗೆ ಇರುವುದು. ಆಪ್ತರಿಗೆ ನಿಮ್ಮ ಮೇಲಿರುವ ಭಾವನೆಯು ಬದಲಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗಬಹುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ವಸ್ತು ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ.

ವೃಷಭ ರಾಶಿ: ಸಕ್ಕರೆ ಇದ್ದಲ್ಲಿ ಇರುವೆಗಳು ಬಂದು ಮುತ್ತುತ್ತವೆ. ಒಳ್ಳೆಯ ಗುಣದ ಕಡೆಗೆ ಒಳ್ಳೆಯವರು ಕೆಟ್ಟವರು ಇಬ್ಬರೂ ಬರಬಹುದು. ಪುಣ್ಯಸ್ಥಳಗಳಿಂದ ನಿಮಗೆ ನೆಮ್ಮದಿ ಸಿಗಲಿದೆ. ಇತ್ತೀಚೆಗೆ ನಡೆದ ಘಟನೆಗಳು ನಿಮ್ಮನ್ನು ಕಾಡಲಿದೆ. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ವ್ಯಾಪರದ ವಿಚಾರದಲ್ಲಿ ಸಹಭಾಗಿಯ ಜೊತೆ ಮಾತನಾಡಿ ಮುಂದಡಿಯಿಡಿ. ನಿಮಗೆ ಸಿಕ್ಕ ಗೌರವವನ್ನು ಬೇರೆಯವರಿಗೆ ಬಿಟ್ಟುಕೊಡುವಿರಿ. ಅಪರಿಚಿತ ಕ್ಷೇತ್ರಕ್ಕೆ ಮುಂದಡಿಯಿಡುವಾಗ ಜಾಗರೂಕತೆ ಇರಲಿ. ನಿಮ್ಮ ವಸ್ತುವಿಗಾದ ತೊಂದರೆಗೆ ಪರಿಹಾರವನ್ನು ಕೇಳುವಿರಿ. ದೊಡ್ಡ ಯೋಜನೆಯು ಚೆನ್ನಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಆಗದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಬಹುದು. ವಿದೇಶದಲ್ಲಿ ವಾಸಿಸುವವರಿಂದ ಶುಭವಾರ್ತೆ ಸಿಗುವುದು. ನಿಯಮ‌ಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ.

ಮಿಥುನ ರಾಶಿ: ಪರಿಣಿತರು ನಿಮ್ಮನ್ನು ಅಳೆಯುವರು. ಇಂದು ನಿಮಗೆ ಶ್ರಮಕ್ಕೆ ಯೋಗ್ಯವಾದ ಫಲವು ಸಿಗದೇ ಬೇಸರಬರಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಹಿರಿಯರ, ತಜ್ಞರ ಮಾತುಗಳು ನಿಮಗೆ ನಿಮ್ಮ ಬಹುದಿನದಿಂದ ಬೆಳವಣಿಗೆ ಕಾಣದ ಯೋಜನೆಯೊಂದು ಆರಂಭವಾಗುತ್ತದೆ. ಉದ್ಯೋಗದ ವಿಚಾರದಲ್ಲಿ ಪ್ರಭಾವಿಗಳಿಂ ಒತ್ತಡ ಬರಲಿದೆ. ವೃತ್ತಿಯಲ್ಲಿ ನಿಮ್ಮನ್ನು ಸೋಲಿಸಬಹುದು. ಮಕ್ಕಳ ಜೊತೆ ಖುಷಿಯಿಂದ ಕಳೆಯಿರಿ. ಚಿಂತನಾತ್ಮಕ ಕೆಲಸದಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ. ಹೊಸ ವ್ಯವಹಾರದ ಪ್ರಸ್ತಾಪವು ನಿಮಗೆ ಒಪ್ಪಿಗೆ ಆದೀತು. ನೀವು ಪಾಲುದಾರಿಕೆಯಲ್ಲಿಯೇ ಇರಲು ಇಷ್ಟಪಡುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ. ಭೂವ್ಯವಹಾರದ ಪ್ರಸ್ತಾಪವು ಕುಟುಂಬದಲ್ಲಿ ನಡೆಯಬಹುದು. ಆರೋಪಮುಕ್ತದಿಂದ ಮನಸ್ಸು ಹಗುರ. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ.

ಕರ್ಕಾಟಕ ರಾಶಿ: ಅಪರಿಚಿತರು ನಿಮ್ಮಮೇಲೆ ಒಂದು ದೃಷ್ಟಿ ಇಡುವರು. ಸಾಲಬಾಧೆಯು ನಿಮಗೆ ಕಿರಿಕಿರಿ ಕೊಡಬಹುದು. ಯಾರ ಮಾತಿನ ಮೇಲೂ ಪೂರ್ವಾಗ್ರಹಸಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ‌. ಹಣಕಾಸಿನ ವಿಚಾರದಲ್ಲಿ ವಂಚನೆ ಸಾಧ್ಯವಾಗಬಹುದು. ಕರೆ ಸಂದೇಶಗಳಿಗೆ ಪ್ರತ್ಯುತ್ತರ ಬೇಡ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ಬಂಧುಗಳ ಜೊತೆ ನಿಮ್ಮ ಹೊಂದಾಣಿಕೆ ಕಷತಡವಾಗಬಹುದು. ಅದನ್ನೇ ಗಟ್ಟಿಗೊಳಿಸಿಕೊಂಡು ಮುನ್ನಡೆಯಿರಿ. ಅನೇಕ ಉತ್ತಮಮಾರ್ಗಗಳು ತೆರೆದುಕೊಳ್ಳಬಹುದು. ಅಪಾಯವು ನಿಮ್ಮ ಕಡೆಗೆ ತಿರುಗೀತು. ಕ್ರಿಯಾ ಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ದಂಡ ಬರಹುದು.‌ ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ಅತಿಯಾದ ಆತ್ಮವಿಶ್ವಾಸವೂ ನಿಮಗೇ ತೊಂದರೆಯನ್ನು ಉಂಟುಮಾಡೀತು. ಎಲ್ಲರಿಂದ ಹೇಳಿಸಿಕೊಳ್ಳುಬಿರಿ. ಅಚಾತುರ್ಯದಿಂದ ಆದ ತಪ್ಪನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ನಿಮ್ಮಲ್ಲಿ ಸಮೃದ್ಧಿಯು ಇರಲಿದೆ. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು.

ಸಿಂಹ ರಾಶಿ: ನೀರಿನ ವಿಚಾರದಲ್ಲಿ ಎಚ್ವರಿಕೆ ಇರಲಿ. ನೀವು ಹಾಸಿಗೆ ಇದ್ದಷ್ಟು ಕಾಲು ಚಾಚುವುದು. ದೊಡ್ಡ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಕೈಗೆಟಕುದ ಯಾವುದಕ್ಕೂ ನಿಮ್ಮ ಪ್ರಯತ್ನವನ್ನು ಮಾಡುವುದು ಬೇಡ. ವಿವಾಹ ನಡೆದು ಇಂದು ವಾರ್ಷಿಕೋತ್ಸವ ಮಾಡಿಕೊಳ್ಳುತ್ತ ಹಳೆಯದನ್ನು ನೆನೆಸಿಕೊಳ್ಳುವಿರಿ. ಇಂದು ಮೋಸಮಾಡುವ ಮನಸ್ಸುಳ್ಳವರಾಗಿರುತ್ತೀರಿ. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಮನೆಯಿಂದ ನಿಮಗೆ ಶುಭಸಂದೇಶದ ಆಗಮನವಾಗಲಿದೆ. ಉದ್ಯಮಕ್ಕೆ ವಿದೇಶದ ಸಹಕಾರ ಸಿಕ್ಕಿದ್ದು, ಇನ್ನಷ್ಟು ಉತ್ಸಾಹ ಬರವುದು. ಸಹೋದ್ಯೋಗಿಗಳ ಬೆಂಬಲವು ಉದ್ಯೋಗದಲ್ಲಿ ಸಿಗಲಿದೆ. ತಮಾಷೆಯಾಗಿ ಕಂಡರೂ ಮುಂದೆ ತಿರುಗುಬಾಣವಾಗಿ ಬರಲಿದೆ. ಇಂದು ನೀವು ವಹಿಸಿಕೊಂಡ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ನೀಡುವಿರಿ. ಹೊಸ ಪರಿಚಯದವರ ಜೊತೆ ವೃತ್ತಿಯನ್ನು ಮಾಡಬೇಕಾದೀತು. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಅಧಿಕವಾಗುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು.

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್