Chanakya Niti: ಸಂಬಂಧಿಕರ ಮುಂದೆ ಬೆಳೆಯಬೇಕು ಅಂದ್ರೆ ಚಾಣಕ್ಯನ ಈ ಸಲಹೆ ಪಾಲಿಸಿ
ಹೆಚ್ಚಿನ ಸಂಬಂಧಿಕರು ನಮಗೆ ಒಳ್ಳೆಯದನ್ನು ಬಯಸುವುದಕ್ಕಿಂತ ಕೆಟ್ಟದ್ದನ್ನು ಬಯಸುವುದೇ ಜಾಸ್ತಿ. ಪ್ರತಿಯೊಂದು ವಿಚಾರಕ್ಕೂ ಅವರು ನಮ್ಮನ್ನು ಆಡಿಕೊಳ್ಳುವುದೇ ಹೆಚ್ಚು. ಬಹುಶಃ ಎಲ್ಲರಿಗೂ ಸಂಬಂಧಿಕರಿಂದ ಈ ರೀತಿಯ ಅನುಭವ ಆಗಿರಬಹುದು. ಹೀಗೆ ಆಡಿಕೊಂಡಂತಹ ಸಂಬಂಧಿಕರ ಮುಂದೆ ಎತ್ತರಕ್ಕೆ ಬೆಳೆದು ನಿಲ್ಲಬೇಕು ಎಂದು ಬಯಸಿದರೆ ನೀವು ಆಚಾರ್ಯ ಚಾಣಕ್ಯರ ಈ ಕೆಲವು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಚಾಣಕ್ಯರು (Chanakya) ತಮ್ಮ ನೀತಿಗಳಲ್ಲಿ (niti) ನಾವು ಜೀವನದಲ್ಲಿ (life) ಅಳವಡಿಸಿಕೊಳ್ಳಬೇಕಾಗಿರುವ ಹಲವಾರು ಉಪಯುಕ್ತ ವಿಚಾರಗಳ ಬಗ್ಗೆ ಹೇಳಿಕೊಟ್ಟಿದ್ದಾರೆ. ಈ ನೀತಿಗಳನ್ನು ಅನುಸರಿಸುವ ಮೂಲಕ ಹಲವಾರು ಪ್ರಯೋಜನಗಳನ್ನು ಕೂಡಾ ಪಡೆಯಬಹುದು. ಜೀವನದಲ್ಲಿ ಹೇಗಿರಬೇಕು, ಎಂತಹ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ಯಾರನ್ನು ನಂಬಬೇಕು, ಜೀವನದಲ್ಲಿ ಯಶಸ್ಸನ್ನು (success) ಸಾಧಿಸಬೇಕೆಂದರೆ ಏನು ಮಾಡಬೇಕು ಹೀಗೆ ಒಂದಷ್ಟು ವಿಚಾರಗಳ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಸಂಬಂಧಿಕರ (relatives) ಮುಂದೆ ಹೇಗೆ ಬೆಳೆದು ನಿಲ್ಲಬೇಕು ಎಂಬುದನ್ನು ಕೂಡಾ ಹೇಳಿಕೊಟ್ಟಿದ್ದಾರೆ. ಯಾವಗಲೂ ಅಷ್ಟೆ ಸಂಬಂಧಿಕರು ನಮ್ಮ ಒಳ್ಳೆಯದನ್ನು ಬಯಸುವುದಕ್ಕಿಂತ ನಮಗೆ ಕೆಟ್ಟದ್ದನ್ನು ಬಯಸುವುದೇ ಹೆಚ್ಚು, ಸಹಾಯಕ್ಕೆ ಬಾರದೆ ಚುಚ್ಚಿ ಮಾತನಾಡುವುದೇ ಹೆಚ್ಚು. ನಿಮಗೂ ಇಂತಹ ಆಡಿಕೊಳ್ಳುವ ಸಂಬಂಧಿಕರಿದ್ದಾರೆಯೇ, ಇಂತಹವರ ಮುಂದೆ ಬೆಳೆದು ನಿಲ್ಲಬೇಕು ಅಂದ್ರೆ ಚಾಣಕ್ಯರ ಈ ನೀತಿಗಳನ್ನು ಪಾಲಿಸಿ.
ಸಂಬಂಧಿಕರ ಮುಂದೆ ಬೆಳೆಯಬೇಕು ಅಂದ್ರೆ ಚಾಣಕ್ಯನ ಈ ಸಲಹೆ ಪಾಲಿಸಿ:
ಕೆಲ ಸಂಬಂಧಿಕರು ನಮ್ಮ ಕಷ್ಟ ಕಾಲದಲ್ಲಿ ನಿಲ್ಲುವ ಬದಲು, ಉಪಕಾರವನ್ನು ಮಾಡುವ ಬದಲು ನಮ್ಮ ಸ್ಥಿತಿಯನ್ನು ಕಂಡು ಆಡಿಕೊಳ್ಳುವುದೇ ಹೆಚ್ಚು. ಅಂತಹ ಸಂಬಂಧಿಕರ ಮುಂದೆ ಬೆಳೆದು ನಿಲ್ಲಲು ಚಾಣಕ್ಯರ ಈ ನೀತಿಗಳನ್ನು ಪಾಲಿಸಿ.
ನಿಯಂತ್ರಣವನ್ನು ಅಭ್ಯಾಸ ಮಾಡಿ:
ತನ್ನ ಆಸೆಗಳನ್ನು ನಿಯಂತ್ರಿಸುವ ಮತ್ತು ಗುರಿಯತ್ತ ಗಮನ ಹರಿಸುವ ವ್ಯಕ್ತಿ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ಚಾಣಕ್ಯ ಹೇಳುತ್ತಾರೆ. ಚಾಣಕ್ಯರ ಪ್ರಕಾರ, ನಿಮ್ಮ ಗಮನ ಯಾವಾಗಲೂ ಗುರಿಯ ಕಡೆಗೆ ಇರಬೇಕು. ಮೋಜು ಮಸ್ತಿಗಳನ್ನು ನಿಯಂತ್ರಿಸಿ ಗಮನವನ್ನು ಗುರಿಗಳ ಕಡೆಗೆ ಕೇಂದ್ರೀಕರಿಸಿ, ಹೀಗೆ ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು, ಆಡಿಕೊಂಡವರ ಮುಂದೆ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲಬಹುದು.
ಇದನ್ನೂ ಓದಿ: ಈ ಪ್ರಾಣಿಗಳನ್ನು ಸಾಕುವುದರಿಂದ ಸಂತೋಷದ ಜೊತೆ ಅದೃಷ್ಟ ಮನೆ ಬಾಗಿಲಿಗೆ ಬರುತ್ತಂತೆ
ಶಿಸ್ತು ಬಹಳ ಮುಖ್ಯ:
ಶಿಸ್ತಿಲ್ಲದವರು ಯಶಸ್ವಿಯಾಗಲಾರರು ಹಾಗಾಗಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ. ಕೆಲವೊಮ್ಮೆ ಶಿಸ್ತು ನಮ್ಮನ್ನು ಗೆಲ್ಲಿಸುತ್ತದೆ ಹಾಗಾಗಿ ಸಂಬಂಧಿಕರ ಮುಂದೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಶಿಸ್ತಿನ ಜೊತೆಗೆ ಗಮನವನ್ನು ಕೇಂದ್ರೀಕರಿಸುವುದು ಅತ್ಯಗತ್ಯ.
ಜ್ಞಾನವಂತರಾಗಿರಬೇಕು:
ಮೊದಲಿಗೆ ಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಜ್ಞಾನವೆಂಬ ಸಂಪತ್ತು ನಮ್ಮೊಂದಿಗಿದ್ದರೆ, ಬುದ್ಧಿವಂತಿಕೆಯಿಂದಲೇ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬಹುದು. ಜ್ಞಾನ, ಅನುಭವ ಇಲ್ಲದ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುವುದು ಕಷ್ಟ ಎನ್ನುತ್ತಾರೆ ಚಾಣಕ್ಯ.
ಒಮ್ಮೆ ನಿಮಗೆ ದ್ರೋಹ ಮಾಡಿದ ಸಂಬಂಧಿಯನ್ನು ಎಂದಿಗೂ ನಂಬಬೇಡಿ:
ಬಹು ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ಒಮ್ಮೆ ನಿಮ್ಮ ನಂಬಿಕೆಗೆ ದ್ರೋಹ ಬಗೆದ ಸಂಬಂಧಿಯನ್ನು ಎಂದಿಗೂ ನಂಬಬೇಡಿ ಹಾಗೂ ಇಂತಹವರಿಗೆ ನಿಮ್ಮ ಮುಂದಿನ ಹೆಜ್ಜೆಯ ಬಗ್ಗೆ ಹೇಳಲೇಬೇಡಿ. ಇಂತಹವರು ನಿಮ್ಮ ಸಾಧನೆಗೆ ಅಡ್ಡಗಾಲು ಹಾಕುವ ಸಾಧ್ಯತೆ ಇರುತ್ತದೆ.
ಆದಾಯ ಮತ್ತು ವೆಚ್ಚದ ಬಗ್ಗೆ ಜ್ಞಾನವಿರಲಿ:
ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಹಣವಂತರಾಗಬೇಕು, ಸಂಬಂಧಿಕರ ಮುಂದೆ ಬೆಳೆದು ನಿಲ್ಲಬೇಕು ಎಂದರೆ ನೀವು ಮೊದಲು ನಿಮ್ಮ ಆದಾಯ ಮತ್ತು ವೆಚ್ಚದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರಬೇಕು. ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಮತ್ತು ಸರಿಯಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡಬೇಕು.
ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ:
ಸಮಯಕ್ಕೆ ಯಾವಾಗಲೂ ಒತ್ತು ನೀಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಸರಿಯಾದ ಸಮಯ ನಿರ್ವಹಣೆಯು ಯಶಸ್ಸಿನ ದೊಡ್ಡ ಕೊಡುಗೆಯಾಗಿದ್ದು, ಈ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡದೆ, ಸಿಕ್ಕ ಅವಕಾಶ ಮತ್ತು ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
ಸಂಬಂಧಿಕರ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ:
ವಿಶೇಷವಾಗಿ ಸಂಬಂಧಿಕರು ಕಷ್ಟ ಕಾಲ ಮಾತ್ರವಲ್ಲದೆ, ಯಶಸ್ಸು ಸಾಧನೆ ವೇಳೆ ಕೂಡಾ ಚುಚ್ಚು ಮಾತುಗಳನ್ನು ಆಡುತ್ತಾ, ಟೀಕಿಸುತ್ತಿರುತ್ತಾರೆ. ಇಂತಹ ಟೀಕೆಗಳಿಗೆ ತಲೆ ಕಡೆಸಿಕೊಂಡು ಕೂರದೆ, ಟೀಕೆಯ ಮಾತುಗಳಿಗೆ ಜಗ್ಗದೆ ಗಟ್ಟಿಯಾಗಿ ನಿಂತು ಅಂದುಕೊಂಡ ಗುರಿಯನ್ನು ತಲುಪುವ ಮೂಲಕ ಟೀಕಿಸಿದ ಸಂಬಂಧಿಕರ ಮುಂದೆ ತಲೆ ಎತ್ತಿ ನಿಲ್ಲಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ