Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮಿಷ್ಟದ ಋತುಮಾನದಿಂಲೂ ತಿಳಿಯಬಹುದಂತೆ ನಿಮ್ಮ ವ್ಯಕ್ತಿತ್ವ, ಸ್ವಭಾವ ಹೇಗಿದೆಯೆಂದು

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅದರ ಮುಖಾಂತರ ನೀವು ಕೂಡಾ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಕಣ್ಣಿನ ಬಣ್ಣ, ಪಾದಗಳ ಆಕಾರ, ಮೂಗಿನ ಆಕಾರ ಸೇರಿದಂತೆ ದೇಹಾಕಾರದ ಮೂಲಕ ನಿಗೂಢ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ ಬೇಸಿಗೆ ಕಾಲ, ಚಳಿಗಾಲ, ಮಳೆಗಾಲ ಇವುಗಳಲ್ಲಿ ನಿಮಗ್ಯಾವ ಋತುಮಾನ ಇಷ್ಟ ಎಂಬ ಆಧಾರದ ಮೇಲೂ ನಿಮ್ಮ ಗುಣ ಸ್ವಭಾವವನ್ನು ಪರೀಕ್ಷಿಸಬಹುದು. ನೀವು ಬೇಸಿಗೆ ಕಾಲವನ್ನು ಇಷ್ಟ ಪಡುತ್ತಿದ್ದರೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ತಿಳಿಯಿರಿ.

Personality Test: ನಿಮ್ಮಿಷ್ಟದ  ಋತುಮಾನದಿಂಲೂ ತಿಳಿಯಬಹುದಂತೆ ನಿಮ್ಮ ವ್ಯಕ್ತಿತ್ವ, ಸ್ವಭಾವ ಹೇಗಿದೆಯೆಂದು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2025 | 3:08 PM

ಬೇಸಿಗೆಕಾಲ (summer), ಮಳೆಗಾಲ (rainy season), ಚಳಿಗಾಲ (winter) ಹೀಗೆ ಪ್ರತಿ ವರ್ಷ ಕೂಡಾ ಋತುಮಾನ (season) ಬದಲಾಗುತ್ತಿರುತ್ತವೆ. ಈ ಋತುಮಾನ ಬದಲಾದ ಹಾಗೆ ವಾತಾವರಣವೂ ಕೂಡಾ ಬದಲಾಗುತ್ತದೆ. ಹೀಗೆ ವಾತಾವರಣ ಬದಲಾದಂತೆ ಈ ಮಳೆಗಾಲ, ಬೇಸಿಗೆ ಕಾಲ ಯಾಕಾದರೂ ಬಂತಾದರೂ ಎಂದು ಗೊಣಗಿದರೆ, ಇನ್ನೂ ಕೆಲವರು ಇನ್ನಿಷ್ಟದ ಮಳೆಗಾಲ ಬಂದೇ ಬಿಡ್ತಲ್ಲಪ್ಪಾ ಎಂದು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಕೆಲವರು ಮಳೆಗಾಲವನ್ನು ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಬೇಸಿಗೆ ಕಾಲ ಇಷ್ಟವಾಗುತ್ತದೆ, ಮತ್ತೊಂದಷ್ಟು ಜನ ಚಳಿಗಾಲವನ್ನು ಇಷ್ಟಪಡುತ್ತಾರೆ. ಇದರಲ್ಲಿ ನಿಮಗ್ಯಾವ ಋತುಮಾನ ಇಷ್ಟ ಹೇಳಿ, ಅದರ ಮೂಲಕ ವ್ಯಕ್ತಿತ್ವ (personality) ಪರೀಕ್ಷಿಸಿ.  ನಿಮ್ಮಿಷ್ಟದ ಬಟ್ಟೆಯ ಪ್ರಕಾರ, ಪಾನೀಯದ ಮೂಲಕವೆಲ್ಲಾ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ ನಿಮ್ಮ ಫೇವರೆಟ್‌ ಋತುಮಾನವನ್ನು ಆಯ್ಕೆ ಮಾಡುವ ಮೂಲಕವೂ ನೀವು ನಿಮ್ಮ ಸ್ವಭಾವವನ್ನು ಪರೀಕ್ಷಿಸಬಹುದು.

ನಿಮ್ಮಿಷ್ಟದ ಋತುಮಾನವನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿ

ಬೇಸಿಗೆ ಕಾಲ:

ಕೆಲವರಿಗೆ ಬೇಸಿಗೆ ಕಾಲ ಅಂದ್ರೆ ತುಂಬಾ ಇಷ್ಟ. ಈ ಬೇಸಿಗೆಯಲ್ಲಿ ಉಷ್ಣತೆ, ಬಿಸಿಲು ಏರಿಕೆಯಾದಂತೆ ಬೇಸಿಗೆಯನ್ನು ಇಷ್ಟಪಡುವ ಜನರ ಉತ್ಸಾಹ ಯಾವಾಗಲೂ ಉತ್ಸಾಹದಿಂದ ಕೂಡಿರುತ್ತಾರೆ. ಇವರು ಸೂರ್ಯನ ಶಾಖದಂತೆ ಸದಾ ಶಕ್ತಿವಂತರಾಗಿರುತ್ತಾರೆ. ಆಶಾವಾದಿ ಚಿಂತನೆಗಳೊಂದಿಗೆ ಜೀವಿಸುವ ಇವರು ಯಾವಾಗಲೂ ಸಂತೋಷವಾಗಿರಲು ಇಷ್ಟಪಡುತ್ತಾರೆ.

 ಮಳೆಗಾಲ:

ಬಹುತೇಕ ಹೆಚ್ಚಿನವರಿಗೆ ಮಳೆಗಾಲ ಅಂದ್ರೆ ತುಂಬಾ ಇಷ್ಟ. ಈ ಮಳೆಗಾಲವನ್ನು ಇಷ್ಟಪಡುವ ಜನರು ಎಂತಹ ಪರಿಸ್ಥಿತಿಗೂ ಹೊಂದಿಕೊಳ್ಳುವವರಾಗಿರುತ್ತಾರೆ. ಮತ್ತು ಜೀವನದಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಗಳನ್ನು ಸುಲಭವಾಗಿ ಸ್ವೀಕರಿಸುವವರಾಗಿರುತ್ತಾರೆ. ಮಳೆಗಾಲದಲ್ಲಿ ವಾತಾವರನ ಹಚ್ಚ ಹಸಿರಾಗಿರುವಂತೆ, ಈ ಋತುವನ್ನು ಇಷ್ಟಪಡುವ ಜನರ ಜೀವನ ಕೂಡಾ ಸೃಜನಶೀಲತೆಯಿಂದ ತುಂಬಿರುತ್ತದೆ. ಸಹಾನುಭೂತಿಯನ್ನು ಹೊಂದಿರುವ ಇವರು ಸಣ್ಣ ಸಣ್ಣ ವಿಷಯಗಳಲ್ಲೂ ಸಂತೋಷವನ್ನು ಕಂಡುಕೊಳ್ಳುತ್ತಾರೆ.

ಇದನ್ನೂ ಓದಿ
Image
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
Image
ಮಹಾವೀರ ಜಯಂತಿ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಯಿರಿ
Image
ಕಣ್ಣಿಗೆ ಮನೆಯಲ್ಲಿ ತಯಾರಿಸಿದ ಈ ಈ ಕೆಮಿಕಲ್‌ ಫ್ರೀ ಕಾಡಿಗೆ ಹಚ್ಚಿ
Image
ಹಾಸಿಗೆಯ ಮೇಲೆ ಕುಳಿತು ಊಟ ಮಾಡಬೇಡಿ

ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

 ಚಳಿಗಾಲ:

ತಂಪಾದ ವಾತಾವರಣದಿಂದ ಚಳಿಗಾಲವೆಂದ್ರೆ ಕೆಲವರಿಗೆ ಅಚ್ಚುಮೆಚ್ಚು. ನಿವೇನಾದ್ರೂ ಚಳಿಗಾಲವನ್ನು ಇಷ್ಟಪಡುವವರಾಗಿದ್ದರೆ ನೀವು ಅಂತರ್ಮುಖಿಗಳಾಗಿರುತ್ತೀರಿ. ಸಹಿಷ್ಣುತ ಮನೋಭಾವವನ್ನು ಹೊಂದಿರುವ ಈ ಜನ ಜನದಟ್ಟಣೆಯ ಸ್ಥಳಗಳಿಗೆ ಹೋಗಲು ಇಷ್ಟಡುವುದಿಲ್ಲ. ಬದಲಾಗಿ ಇವರು ಒಂಟಿತನವನ್ನು ಇಷ್ಟಪಡುತ್ತಾರೆ.

ವಸಂತ ಕಾಲ

ಗಿಡ ಮರಗಳು ಚಿಗುರೊಡೆಯುವ ವಸಂತ ಕಾಲ ಅಂದ್ರೆ ಹೆಚ್ಚಿನವರಿಗೆ ಅಚ್ಚುಮೆಚ್ಚು. ಈ ವಸಂತ ಕಾಲವನ್ನು ಇಷ್ಟಪಡುವವರು ತುಂಬಾ ಆಶಾವಾದಿಗಳಾಗಿರುತ್ತಾರೆ. ತಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಾರೆ. ಸವಾಲು ಎಷ್ಟೇ ಕಠಿಣವಾಗಿದ್ದರೂ, ಅದನ್ನು ಸಾಧಿಸುವವರೆಗೂ ಅವರು ಹಿಂದೆ ಸರಿಯುವುದಿಲ್ಲ.  ಅಲ್ಲದೆ ಇವರು ಸಮಸ್ಯೆಗಳಿಂದ ಚಿಂತೆಗೀಡಾಗುವ ಬದಲು, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನ ಹರಿಸುತ್ತಾರೆ. ಅಷ್ಟೇ ಅಲ್ಲದೆ ಇವರು ಜೀವನದ ಸುಂದರ ಕನಸು ಕಾಣಲು ಇಷ್ಟಪಡುವವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ