AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lucky Pet: ಈ ಪ್ರಾಣಿಗಳನ್ನು ಸಾಕುವುದರಿಂದ ಸಂತೋಷದ ಜೊತೆ ಅದೃಷ್ಟ ಮನೆ ಬಾಗಿಲಿಗೆ ಬರುತ್ತಂತೆ

ಸಾಕು ಪ್ರಾಣಿಗಳೆಂದರೆ ಅನೇಕರಿಗೆ ಬಹಳ ಇಷ್ಟ. ಕೆಲವರು ತಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕಿದ್ರೆ, ಕೆಲವರು ಶ್ವಾನಗಳನ್ನು ಸಾಕಲು ಇಷ್ಟಪಡ್ತಾರೆ. ಇನ್ನೂ ಕೆಲವರು ಹಸುಗಳನ್ನು ಸಾಕುತ್ತಾರೆ. ಹೀಗೆ ಜನ ತಮ್ಮಿಷ್ಟದ ಪ್ರಾಣಿಗಳನ್ನು ಸಾಕ್ತಾರೆ. ಆದ್ರೆ ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದ್ರೆ ಉತ್ತಮ ಗೊತ್ತಾ? ಯಾವ ಪ್ರಾಣಿಯನ್ನು ಸಾಕುವುದರಿಂದ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Lucky Pet: ಈ ಪ್ರಾಣಿಗಳನ್ನು ಸಾಕುವುದರಿಂದ ಸಂತೋಷದ ಜೊತೆ ಅದೃಷ್ಟ ಮನೆ ಬಾಗಿಲಿಗೆ ಬರುತ್ತಂತೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2025 | 5:53 PM

ಈ ಭೂಮಿಯ ಮೇಲೆ ಮಾನವರು (humans) ಮತ್ತು ಪ್ರಾಣಿಗಳ (animals) ನಡುವೆ ಒಂದು ರೀತಿಯ ಸಂಬಂಧವಿದೆ. ಇದೇ ಕಾರಣಕ್ಕೆ ಮನುಷ್ಯನು ನಾಯಿ (dog), ಬೆಕ್ಕು (cat), ಹಸು (cow), ಕೋಳಿ, ಕುರಿ ಅಂತೆಲ್ಲಾ ತನ್ನಿಷ್ಟದ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾನೆ. ನೀವು ಕೂಡಾ ನಾಯಿ, ಬೆಕ್ಕು, ಹಸುಗಳನ್ನು ಮನೆಯಲ್ಲಿ ಸಾಕಿರುತ್ತೀರಿ ಅಲ್ವಾ. ನಾವು ಸಾಕುವ ಪ್ರಾಣಿಗಳು (pet animals) ಕೂಡಾ ನಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿದ್ದು, ಅವುಗಳ ಆಹಾರದಿಂದ ಆರೋಗ್ಯದವರೆಗೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಪ್ರಾಣಿಗಳನ್ನು ಸಾಕಿದರೆ ಸಾಲದು, ಅವುಗಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂಬ ಅರಿವನ್ನು ಎಲ್ಲರಿಗೆ ಮುಡಿಸಲು ಪ್ರತಿವರ್ಷ ಏಪ್ರಿಲ್‌ 07 ರಂದು ರಾಷ್ಟ್ರೀಯ ಸಾಕು ಪ್ರಾಣಿ  (National Pet Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಉತ್ತಮ, ಯಾವ ಪ್ರಾಣಿಗಳನ್ನು ಸಾಕುವುದರಿಂದ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ ಎಂಬ ಕುತೂಹಲಕಾರಿ ಸಂಗತಿಯನ್ನು ತಿಳಿಯಿರಿ.

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಬೆಸ್ಟ್:‌

ನಾಯಿ:

ನಾಯಿಯನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಹೇಳ್ತಾರೆ. ಅಲ್ಲದೆ ಬಹಳಷ್ಟು ಜನಕ್ಕೆ ನಾಯಿ ಅಂದ್ರೆ ಪಂಚಪ್ರಾಣ. ನಾಯಿ ಅಂದ್ರೆ ತುಂಬಾ ಇಷ್ಟ ಹಾಗೂ ಶ್ವಾನ ಮನೆಯ ರಕ್ಷಣೆ ಮಾಡುತ್ತದೆ ಎಂಬ ಕಾರಣಕ್ಕೆ ಹಲವರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಇದಲ್ಲದೆ ಶಾಸ್ತ್ರಗಳ ಪ್ರಕಾರ ನಾಯಿಯನ್ನು ಸಾಕುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತದೆಯಂತೆ. ಶ್ವಾನಗಳನ್ನು ಸಾಕುವುದರಿಂದ ಮನೆ ಸುರಕ್ಷಿತವಾಗಿರುವುದ ಜೊತೆಗೆ ಈ ಶ್ವಾನಗಳು ಮನೆಯಿಂದ ನಕರಾತ್ಮಕ ಶಕ್ತಿಗಳನ್ನು ಹೋಗಲಾಡಿಸಲು ಸಹಕಾರಿಯಂತೆ.

ಮೊಲ:

ಮನೆಯಲ್ಲಿ ಮುದ್ದು ಮುದ್ದಾಗಿರುವ ಮೊಲಗಳನ್ನು ಸಾಕುವುದು ಕೂಡ ಉತ್ತಮ.  ನಿಮ್ಮ ಮನೆಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಓಡಾಡುವಂತೆ ಭಾಸವಾಗುತ್ತಿದ್ದರೆ, ಕುಟುಂಬ ಸದಸ್ಯರ ನಡುವಿನ ಸಂಬಂಧಗಳು ಹದಗೆಡುತ್ತಿದ್ದರೆ, ನೀವು ಮನೆಯಲ್ಲಿ ಮೊಲವನ್ನು ಸಾಕಬೇಕು.  ಇದು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದು ಹಾಕಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಮೊಲವನ್ನು ಸಾಕುವುದರಿಂದ ಮನೆಗೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ
Image
ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಲೇ ಬಾರದು?
Image
ಈ ಬೇಸಿಗೆಯಲ್ಲಿ ಟಿಫಿನ್ ಪ್ಯಾಕ್ ಮಾಡುವಾಗ ಈ ವಿಷಯ ನೆನಪಿರಲಿ
Image
ಈ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರಂತೆ
Image
ನಿಮ್ಮಿಷ್ಟದ ಋತುಮಾನದಿಂಲೂ ತಿಳಿಯಬಹುದಂತೆ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು

ಹಸು:

ಹಿಂದೂ ಧರ್ಮದಲ್ಲಿ ಹಸುಗಳನ್ನು ಗೋಮಾತೆಯಂದು ಪೂಜಿಸಲಾಗುತ್ತದೆ. ಹಳ್ಳಿಗಳಲ್ಲಿ ಇಂದಿಗೂ ಕೂಡಾ ಹಸುಗಳನ್ನು ಸಾಕುತ್ತಿದ್ದಾರೆ. ಹಸುಗಳನ್ನು ಮನೆಯಲ್ಲಿ ಸಾಕುವುದು ಕೂಡಾ ತುಂಬಾನೇ ಒಳ್ಳೆಯದು. ಇದು ಕುಟುಂಬದ ಬಾಂಧವ್ಯವನ್ನು ಸುದಾರಿಸುವುದರ ಜೊತೆಗೆ ಮನೆಯಿಂದ ನಕರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ.

ಇದನ್ನೂ ಓದಿ: ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಲೇ ಬಾರದು?

ಕುದುರೆ:

ನಾಯಿ, ಬೆಕ್ಕುಗಳಂತೆ ಮನೆಯಲ್ಲಿ ಶಕ್ತಿ ಮತ್ತು ಪ್ರತಿಷ್ಠೆಯ ಸಂಕೇತವಾಗಿರುವ  ಕುದುರೆಯನ್ನು ಸಾಕುವುದು ಸಹ ಶುಭವೆಂದು ಪರಿಗಣಿಸಲಾಗಿದೆ. ಇದು ಉತ್ತಮ ಸಾಕುಪ್ರಾಣಿ ಮಾತ್ರವಲ್ಲದೆ ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿಯೂ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಕುದುರೆಗಳಿಗೆ ಚೆನ್ನಾಗಿ ಆಹಾರ ನೀಡುತ್ತಾ,  ಪ್ರತಿದಿನ ಸ್ವಲ್ಪ ಸಮಯದವರೆಗೆ ಅದನ್ನು ಹೊರಾಂಗಣದಲ್ಲಿ ಸುತ್ತಾಡಿಸುತ್ತ ಅದರೊಂದಿಗೆ ಕಾಲ ಕಳೆಯುವುದರಿಂದ ನಿಮ್ಮ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆಯಾಗುತ್ತದೆ.

ಬೆಕ್ಕು:

ಅನೇಕರಿಗೆ ಬೆಕ್ಕುಗಳು ಅಂದ್ರೆ ಪಂಚಪ್ರಾಣ. ಒಂದು ಬೆಕ್ಕು ಅಂದ್ರೆ ಇಷ್ಟ ಎಂಬ ಕಾರಣಕ್ಕೆ ಹಾಗೂ ಇನ್ನೊಂದು ಈ ಬೆಕ್ಕುಗಳು ಇಲಿ, ಹೆಗ್ಗಣ, ಹಳ್ಳಿ, ಜಿರಳೆಗಳನ್ನು ಹಿಡಿದು ಸಾಯಿಸಿ ಮನೆಯನ್ನು ಸುರಕ್ಷಿತವಾಗಿಡುತ್ತದೆ ಎಂಬ ಕಾರಣಕ್ಕೆ ಬೆಕ್ಕನ್ನು ಸಾಕುತ್ತಾರೆ. ಇದಲ್ಲದೆ ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೆಕ್ಕು ಸಾಕುವುದು ಶುಭದ ಸಂಕೇತವಾಗಿದೆ. ಇವುಗಳು ನಮ್ಮ ಮನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.

ಮೀನು:

ಅನೇಕ ಜನರು ಮನೆಯಲ್ಲಿ  ಅಕ್ವೇರಿಯಂ ಇಟ್ಟು ಅದರಲ್ಲಿ ಸಾಕಷ್ಟು ಮೀನುಗಳನ್ನು  ಸಾಕುತ್ತಾರೆ. ಮೀನುಗಳು ಆರೋಗ್ಯ ಮತ್ತು ಯೋಗಕ್ಷೇಮವನ್ನು ವೃದ್ಧಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಶಾಸ್ತ್ರಗಳಲ್ಲಿಯೂ ಮೀನುಗಳನ್ನು ಸಾಕುವುದು ಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಮೀನು ಮನೆಗೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆಯಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ