AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಧೋನಿ ನಾಯಕತ್ವದಲ್ಲಿ ಇನ್ನಷ್ಟು ಹಳ್ಳ ಹಿಡಿದ ಸಿಎಸ್​ಕೆ ಪ್ರದರ್ಶನ; ಸತತ 5ನೇ ಸೋಲು

Dhoni's Return Fails to Turn CSK's Fortune: 683 ದಿನಗಳ ನಂತರ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಮರಳಿದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅದೃಷ್ಟ ಬದಲಾಗಲಿಲ್ಲ. ಸಿಎಸ್​ಕೆ ತಂಡ ತನ್ನ ತವರಿನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಕೇವಲ 103 ರನ್ ಗಳಿಸಿತು. ಇದಕ್ಕುತ್ತರವಾಗಿ ಕೆಕೆಆರ್ 10 ಓವರ್‌ಗಳಲ್ಲಿ ಗುರಿ ತಲುಪಿತು.

IPL 2025: ಧೋನಿ ನಾಯಕತ್ವದಲ್ಲಿ ಇನ್ನಷ್ಟು ಹಳ್ಳ ಹಿಡಿದ ಸಿಎಸ್​ಕೆ ಪ್ರದರ್ಶನ; ಸತತ 5ನೇ ಸೋಲು
Csk
Follow us
ಪೃಥ್ವಿಶಂಕರ
|

Updated on:Apr 11, 2025 | 10:55 PM

683 ದಿನಗಳ ನಂತರ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕನಾಗಿ ಮರಳಿದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಈ ಆವೃತ್ತಿಯಲ್ಲಿ ಈಗಾಗಲೇ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಚೆನ್ನೈ ತಂಡ, ಈಗ ಐದನೇ ಪಂದ್ಯದಲ್ಲೂ ಸೋಲನ್ನು ಎದುರಿಸಿದೆ. ಚೆನ್ನೈ ತಂಡವು ತನ್ನ ತವರು ನೆಲವಾದ ಚೆಪಾಕ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ, ಧೋನಿ ಸೇರಿದಂತೆ ಚೆನ್ನೈ ತಂಡದ ಇಡೀ ಬ್ಯಾಟಿಂಗ್ ಘಟಕವು ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಕೇವಲ 103 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 10 ಓವರ್‌ಗಳಲ್ಲಿ ಈ ಗುರಿ ಸಾಧಿಸಿ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಧೋನಿ ನಾಯಕತ್ವವಹಿಸಿಕೊಂಡ ಬಳಿಕ ತಮ್ಮ ತಂಡದ ಆಟ ಬದಲಾಗುತ್ತದೆ ಮತ್ತು ಗೆಲುವಿನ ಹಾದಿಗೆ ಮರಳುತ್ತದೆ ಎಂದು ಚೆನ್ನೈ ಅಭಿಮಾನಿಗಳು ಆಶಿಸಿದ್ದರು. ಇದಕ್ಕೆ ಕಾರಣವೆಂದರೆ, ಕಳೆದ 17 ವರ್ಷಗಳಲ್ಲಿ ತಂಡಕ್ಕಾಗಿ ಹಲವು ಬಾರಿ ಅಂತಹ ಮ್ಯಾಜಿಕ್ ತೋರಿಸಿದ್ದ ಧೋನಿಯ ಹೆಗಲಿಗೆ ನಾಯಕತ್ವದ ಜವಬ್ದಾರಿ ಹೊರಿಸಲಾಗಿತ್ತು. ಆದರೆ 43 ವರ್ಷ ವಯಸ್ಸಿನ ಧೋನಿಯ ಬಳಿ ತಂಡದ ಪ್ರದರ್ಶನವನ್ನು ಬದಲಾಯಿಸುವ ಮ್ಯಾಜಿಕ್ ಉಳಿದಿಲ್ಲ ಎಂಬುದು ಮೊದಲ ಪಂದ್ಯದಲ್ಲೇ ಸಾಭೀತಾಯಿತು.

ಚೆಪಾಕ್‌ನಲ್ಲಿ ಅತ್ಯಂತ ಕಡಿಮೆ ರನ್

ಈ ಸೀಸನ್​ನ ಆರಂಭದಿಂದಲೂ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಸಿಎಸ್​ಕೆ ಆಡಿದ ಮೊದಲ ಐದು ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವ ಅವಕಾಶ ಪಡೆದಾಗಲೂ ಬ್ಯಾಟಿಂಗ್‌ ವಿಭಾಗ ವೈಫಲ್ಯ ಅನುಭವಿಸಿತ್ತು. ಇದೀಗ ಕೆಕೆಆರ್ ವಿರುದ್ಧ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದ ಚೆನ್ನೈ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಈ ಪಂದ್ಯದಲ್ಲೂ ಬದಲಾಗಲಿಲ್ಲ. ಇಡೀ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 103 ರನ್ ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ
Image
ಗಾಯದ ಬಳಿಕ 2 ಪಂದ್ಯಗಳನ್ನಾಡಿದ್ದ ರುತುರಾಜ್ ಟೂರ್ನಿಯಿಂದ ಔಟ್..!
Image
ಅತ್ಯಂತ ಹಿರಿಯ, ಅನ್‌ಕ್ಯಾಪ್ಡ್ ನಾಯಕ ಎಂಎಸ್ ಧೋನಿ
Image
ಧೋನಿ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಸಿಎಸ್​ಕೆ ಫ್ರಾಂಚೈಸಿ
Image
ರುತುರಾಜ್ ಗಾಯಕ್ವಾಡ್ ಐಪಿಎಲ್​ನಿಂದ ಔಟ್

ಒಂದು ಹಂತದಲ್ಲಿ ಚೆನ್ನೈ ತಂಡದ ಸ್ಥಿತಿ ಇದಕ್ಕಿಂತಲೂ ಕೆಟ್ಟದಾಗಿತ್ತು. ಕೇವಲ 79 ರನ್‌ಗಳಿಗೆ ತಂಡದ 9 ವಿಕೆಟ್‌ಗಳು ಪತನಗೊಂಡಿದ್ದವು. ಆದರೆ ಕೊನೆಯಲ್ಲಿ ಶಿವಂ ದುಬೆ ಕೆಲವು ದೊಡ್ಡ ಹೊಡೆತಗಳನ್ನು ಹೊಡೆದು ತಂಡವನ್ನು 100 ರನ್​ಗಳ ದಾಟಿಸಿದರು. ಆದಾಗ್ಯೂ ಚೆಪಾಕ್‌ನಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿದ ಬೇಡದ ದಾಖಲೆಗೆ ಸಿಎಸ್​ಕೆ ಕೊರಳೊಡ್ಡಿತು. ಕೋಲ್ಕತ್ತಾದ ಸ್ಪಿನ್ ತ್ರಯರು 9 ವಿಕೆಟ್‌ಗಳಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಸುನಿಲ್ ನರೈನ್ 3, ವರುಣ್ ಚಕ್ರವರ್ತಿ 2 ಮತ್ತು ಮೊಯೀನ್ ಅಲಿ 1 ವಿಕೆಟ್ ಪಡೆದರು.

CSK vs KKR Highlights, IPL 2025: ಸಿಎಸ್​ಕೆ ವಿರುದ್ಧ 8 ವಿಕೆಟ್​ಗಳಿಂದ ಗೆದ್ದ ಕೆಕೆಆರ್​

ನರೈನ್ ಆಲ್​ರೌಂಡರ್ ಆಟ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ತಂಡದ ಇನ್ನಿಂಗ್ಸ್ ನೋಡಿದ ನಂತರ, ಪಿಚ್ ನಿಧಾನವಾಗಿದ್ದು, ಕೆಕೆಆರ್ ತಂಡಕ್ಕೂ ಬ್ಯಾಟಿಂಗ್ ಕಷ್ಟಕರವಾಗಬಹುದು ಎಂದು ಎಲ್ಲರು ಊಹಿಸಿದ್ದರು. ಆದರೆ ಕೋಲ್ಕತ್ತಾದ ಆರಂಭಿಕರು ಎಲ್ಲರ ಊಹೆಗೂ ಮೀರಿದ ಪ್ರದರ್ಶನ ನೀಡಿದರು. ಕ್ವಿಂಟನ್ ಡಿ ಕಾಕ್ (23) ಮತ್ತು ಸುನಿಲ್ ನರೈನ್ ಅದ್ಭುತ ಆರಂಭ ನೀಡಿ ಕೇವಲ ನಾಲ್ಕು ಓವರ್‌ಗಳಲ್ಲಿ 46 ರನ್ ಸೇರಿಸಿದರು. ಸಿಎಸ್‌ಕೆ ಪರ ಮೊದಲ ಪಂದ್ಯ ಆಡುತ್ತಿರುವ ವೇಗದ ಬೌಲರ್ ಅನ್ಶುಲ್ ಕಾಂಬೋಜ್, ಡಿ ಕಾಕ್ ಅವರನ್ನು ಔಟ್ ಮಾಡಿ ಸಿಎಸ್​ಕೆಗೆ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ಬ್ಯಾಟಿಂಗ್​ಗೆ ಬಂದ ನಾಯಕ ಅಜಿಂಕ್ಯ ರಹಾನೆ (ಅಜೇಯ 20) ನರೈನ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದರು. ಈ ಹಂತದಲ್ಲಿ ನರೈನ್ (44) ಅರ್ಧಶತಕ ತಲುಪುವ ಮೊದಲೇ ಔಟಾದರು. ಆದರೆ ರಿಂಕು ಸಿಂಗ್ (15 ನಾಟೌಟ್) ಮತ್ತು ರಹಾನೆ ತಂಡವನ್ನು ಕೇವಲ 10.1 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 pm, Fri, 11 April 25

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ