Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ನಾಟೌಟ್ ಆಗಿದ್ದರೂ ಧೋನಿ ಔಟ್: ಅಂಪೈರ್ ವಿವಾದಾತ್ಮಕ ತೀರ್ಪು

IPL 2025 CSK vs KKR: ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಮೂರನೇ ಬಾರಿ ಸೋಲನುಭವಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ಕೇವಲ 103 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಗುರಿಯನ್ನು ಕೆಕೆಆರ್ 10.1 ಓವರ್​ಗಳಲ್ಲಿ ಚೇಸ್ ಮಾಡಿದೆ.

VIDEO: ನಾಟೌಟ್ ಆಗಿದ್ದರೂ ಧೋನಿ ಔಟ್: ಅಂಪೈರ್ ವಿವಾದಾತ್ಮಕ ತೀರ್ಪು
Ms Dhoni
Follow us
ಝಾಹಿರ್ ಯೂಸುಫ್
|

Updated on: Apr 12, 2025 | 8:03 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 25ನೇ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪುವೊಂದು ಇದೀಗ ವಿವಾದಕ್ಕೀಡಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಸಿಎಸ್​ಕೆ ತಂಡವು 72 ರನ್​ ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಸುನಿಲ್ ನರೈನ್ ಎಸೆತದಲ್ಲಿ ಎಲ್​ಬಿ ಆದರು. ಇತ್ತ ಧೋನಿ ಎಲ್​ಬಿ ಆಗುತ್ತಿದ್ದಂತೆ ಕೆಕೆಆರ್ ಆಟಗಾರರು ಅಪೀಲ್ ಮಾಡಿದರು.

ಇದನ್ನೂ ಓದಿ
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
PSL​ನಲ್ಲಿ ಕಣಕ್ಕಿಳಿಯಲಿರುವ ವಿದೇಶಿ ಆಟಗಾರರ ಪಟ್ಟಿ ಪ್ರಕಟ
Image
ಮುಂಬೈ ಇಂಡಿಯನ್ಸ್ ಬಳಗಕ್ಕೆ ಕ್ವಿಂಟನ್ ಡಿಕಾಕ್ ಎಂಟ್ರಿ

ಧೋನಿ ವಿಕೆಟ್ ವಿಡಿಯೋ:

ಈ ಮನವಿಗೆ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಇದರ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ರಿವ್ಯೂ ತೆಗೆದುಕೊಂಡಿದ್ದಾರೆ. ರಿವ್ಯೂ ವೇಳೆ ಚೆಂಡು ಧೋನಿಯ ಬ್ಯಾಟ್ ಸವರಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇದರಿಂದ ಅಲ್ಟ್ರಾಎಡ್ಜ್​ ಮೀಟರ್​ನಲ್ಲೂ ಸ್ಪೈಕ್​ಗಳು ಕಾಣಿಸಿಕೊಂಡಿದೆ.

ಚೆಂಡು ಧೋನಿ ಬ್ಯಾಟ್​ಗೆ ತಾಗಿರುವುದಕ್ಕೆ ಸಾಕ್ಷಿ:

ಆದರೆ ಇದನ್ನು ಸರಿಯಾಗಿ ಪರಿಶೀಲಿಸದೇ ಮೂರನೇ ಅಂಪೈರ್ ಧೋನಿಯನ್ನು ಎಲ್​ಬಿಡಬ್ಲ್ಯೂ ಎಂದು ಔಟ್ ನೀಡಿದ್ದಾರೆ. ಇತ್ತ ನಿರಾಸೆಯಿಂದಲೇ ಮಹೇಂದ್ರ ಸಿಂಗ್ ಧೋನಿ (1) ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.

ಧೋನಿ ಬ್ಯಾಟ್​ಗೆ ಚೆಂಡು ತಾಗಿರುವುದು:

ಇದೀಗ ಮಹೇಂದ್ರ ಸಿಂಗ್ ಧೋನಿ ನಾಟೌಟ್ ಆಗಿದ್ದರೂ ಔಟ್ ತೀರ್ಪು ನೀಡಿರುವ ಅಂಪೈರ್ ನಿರ್ಧಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ. ಅದರಲ್ಲೂ ಧೋನಿ ಬ್ಯಾಟ್​ಗೆ ಚೆಂಡು ತಾಗಿರುವ ಫೋಟೋಗಳನ್ನು ತಳಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಂಪೈರ್ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ.

ಈ ಫೋಟೋಗಳು ಹಾಗೂ ವಿಡಿಯೋವನ್ನು ಪರಿಶೀಲಿಸಿದರೆ, ಮೇಲ್ನೋಟಕ್ಕೆ ನಾಟೌಟ್ ಎಂದು ಗೊತ್ತಾಗುತ್ತಿದ್ದರೂ, ಮೂರನೇ ಅಂಪೈರ್ ಔಟ್ ನೀಡಿದ್ದೇಕೆ ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.

ಒಟ್ಟಿನಲ್ಲಿ ಧೋನಿಯ ಈ ವಿಕೆಟ್​ನೊಂದಿಗೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್​ಗಳಲ್ಲಿ 103 ರನ್​​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ಸತತ ಸೋಲಿನೊಂದಿಗೆ CSK ಹಿಸ್ಟರಿ

104 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 10.1 ಓವರ್​ಗಳಲ್ಲಿ 107 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.