Sign In

By signing in or creating an account, you agree with Associated Broadcasting Company's Terms & Conditions and Privacy Policy.

PSL 2025: ಪಾಕಿಸ್ತಾನ್ ಸೂಪರ್ ಲೀಗ್​ನ ವಿದೇಶಿ ಆಟಗಾರರ ಪಟ್ಟಿ ಪ್ರಕಟ

PSL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಅನೇಕರು ಆಟಗಾರರು ಅನ್​ಸೋಲ್ಡ್ ಆಗಿದ್ದರು. ಹೀಗೆ ಬಿಕರಿಯಾಗದೇ ಉಳಿದ ಕೆಲ ಸ್ಟಾರ್ ಆಟಗಾರರು ಇದೀಗ  ಪಾಕಿಸ್ತಾನ್ ಸೂಪರ್ ಲೀಗ್​ನತ್ತ ಮುಖ ಮಾಡಿದ್ದಾರೆ.

PSL 2025: ಪಾಕಿಸ್ತಾನ್ ಸೂಪರ್ ಲೀಗ್​ನ ವಿದೇಶಿ ಆಟಗಾರರ ಪಟ್ಟಿ ಪ್ರಕಟ
Psl 2025
Follow us
ಝಾಹಿರ್ ಯೂಸುಫ್
|

Updated on:Apr 08, 2025 | 6:59 AM

ಪಾಕಿಸ್ತಾನ್ ಸೂಪರ್ ಲೀಗ್ (PSL 2025)​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಏಪ್ರಿಲ್ 11 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿಯಲಿವೆ. ಈ ಐದು ತಂಡಗಳಲ್ಲಿರುವ ವಿದೇಶಿ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಐಪಿಎಲ್​ನಲ್ಲಿ (IPL 2025) ಅವಕಾಶ ವಂಚಿತರಾಗಿರುವ ಬಹುತೇಕರು ಈ ಬಾರಿಯ ಪಿಎಸ್​ಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದರಲ್ಲೂ ಕಳೆದ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಡೇವಿಡ್ ವಾರ್ನರ್ ಈ ಬಾರಿ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ ಕೂಡ ಕರಾಚಿ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕಣಕ್ಕಿಳಿಯಲಿರುವ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

ಇಸ್ಲಾಮಾಬಾದ್ ಯುನೈಟೆಡ್ ತಂಡ: ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ), ರಿಲೆ ಮೆರೆಡಿತ್ (ಆಸ್ಟ್ರೇಲಿಯಾ), ಬೆನ್ ಡ್ವಾರ್ಹುಯಿಸ್; ಕಾಲಿನ್ ಮನ್ರೋ (ನ್ಯೂಝಿಲೆಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಸೌತ್ ಆಫ್ರಿಕಾ), ಆಂಡ್ರೀಸ್ ಗೌಸ್ (ಯುಎಸ್​ಎ), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್).

ಇದನ್ನೂ ಓದಿ
Image
ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ
Image
VIDEO: ವಿರಾಟ್ ಕೊಹ್ಲಿಗೆ ಬೌಲಿಂಗ್: ಭಾವುಕರಾಗಿ ಅರ್ಧದಲ್ಲೇ ನಿಂತ ಸಿರಾಜ್
Image
11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
Image
MS Dhoni: ಕೇವಲ 3 ರನ್​: ಗ್ರೇಟ್​ ಫಿನಿಶರ್ ಫಿನಿಶ್..!

ಕರಾಚಿ ಕಿಂಗ್ಸ್ ತಂಡ: ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್) ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಲಿಟ್ಟನ್ ದಾಸ್ (ಬಾಂಗ್ಲಾದೇಶ್), ಜೇಮ್ಸ್ ವಿನ್ಸ್ (ಇಂಗ್ಲೆಂಡ್), ಟಿಮ್ ಸೈಫರ್ಟ್ (ನ್ಯೂಝಿಲೆಂಡ್), ಆಡಮ್ ಮಿಲ್ನ್ (ನ್ಯೂಝಿಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್).

ಲಾಹೋರ್ ಖಲಂದರ್ಸ್ ತಂಡ: ರಿಶಾದ್ ಹೊಸೈನ್ (ಬಾಂಗ್ಲಾದೇಶ್), ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಟಾಮ್ ಕರನ್ (ಇಂಗ್ಲೆಂಡ್), ಡೇವಿಡ್ ವೀಝ (ನಮೀಬಿಯಾ), ಕುಸಾಲ್ ಪೆರೆರಾ (ಶ್ರೀಲಂಕಾ), ಡೆರಿಲ್ ಮಿಚೆಲ್ (ನ್ಯೂಝಿಲೆಂಡ್), ಸಿಕಂದರ್ ರಾಝ (ಝಿಂಬಾಬ್ವೆ).

ಮುಲ್ತಾನ್ ಸುಲ್ತಾನ್ಸ್ ತಂಡ: ಡೇವಿಡ್ ವಿಲ್ಲಿ (ಇಂಗ್ಲೆಂಡ್), ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್), ಮೈಕೆಲ್ ಬ್ರೇಸ್‌ವೆಲ್ (ನ್ಯೂಝಿಲೆಂಡ್), ಗುಡಕೇಶ್ ಮೋಟೀ (ವೆಸ್ಟ್ ಇಂಡೀಸ್), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಶೈ ಹೋಪ್ (ವೆಸ್ಟ್ ಇಂಡೀಸ್), ಜೋಶ್ ಲಿಟಲ್ (ಐರ್ಲೆಂಡ್).

ಪೇಶಾವರ್ ಝಲ್ಮಿ ತಂಡ: ನಜೀಬುಲ್ಲಾ ಝದ್ರಾನ್ (ಅಫ್ಘಾನಿಸ್ತಾನ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ) ನಹಿದ್ ರಾಣಾ (ಬಾಂಗ್ಲಾದೇಶ್), ಟಾಮ್ ಕೊಹ್ಲರ್-ಕ್ಯಾಡ್ಮೋರ್ (ಇಂಗ್ಲೆಂಡ್), ಲಿಝಾಡ್ ವಿಲಿಯಮ್ಸ್ (ಸೌತ್ ಆಫ್ರಿಕಾ), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್).

ಇದನ್ನೂ ಓದಿ: ಡಾಟ್​ ಬಾಲ್​ನಲ್ಲೇ ಅರ್ಧಶತಕ: ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್

ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ: ಫಿನ್ ಅಲೆನ್ (ನ್ಯೂಝಿಲೆಂಡ್), ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಕೈಲ್ ಜೇಮಿಸನ್, (ನ್ಯೂಝಿಲೆಂಡ್), ರೈಲಿ ರೊಸ್ಸೌ (ಸೌತ್ ಆಫ್ರಿಕಾ), ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್).

Published On - 11:56 am, Mon, 7 April 25