ನಿಮ್ಮ ಮಗುವಿನ ನಿದ್ರೆಯ ಸಮಯದ ಬಗ್ಗೆ ಎಚ್ಚರ ವಹಿಸದಿದ್ದರೆ ಏನಾಗುತ್ತೆ?

ಆರೋಗ್ಯಕರ ನಿದ್ರೆಯು ನಾವು ಎಚ್ಚರವಾಗಿರುವಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸಾಕಷ್ಟು ನಿದ್ರೆ ಪಡೆಯುವುದರಿಂದ ಮಗುವಿಗೆ ತನ್ನ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಹೀಗಾಗಿ, ಬಾಲ್ಯದಿಂದಲೇ ಮಕ್ಕಳ ನಿದ್ರೆಯ ಸಮಯದ ಬಗ್ಗೆ ಪೋಷಕರು ಎಚ್ಚರ ವಹಿಸುವುದು ಅಗತ್ಯ.

ನಿಮ್ಮ ಮಗುವಿನ ನಿದ್ರೆಯ ಸಮಯದ ಬಗ್ಗೆ ಎಚ್ಚರ ವಹಿಸದಿದ್ದರೆ ಏನಾಗುತ್ತೆ?
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 09, 2023 | 2:06 PM

ನಿಮ್ಮ ಮಗು ಆರೋಗ್ಯವಾಗಿರಬೇಕೆಂದರೆ ಮಗುವಿಗೆ ನೀವು ಯಾವ ರೀತಿಯ ಆಹಾರ ಕೊಡುತ್ತೀರ, ಎಷ್ಟು ಆಹಾರ ಕೊಡುತ್ತೀರ ಎಂಬುದು ಎಷ್ಟು ಮುಖ್ಯವೋ ಮಗುವಿನ ನಿದ್ರೆಯ ಬಗ್ಗೆ ಗಮನ ಹರಿಸುವುದು ಕೂಡ ಅಷ್ಟೇ ಮುಖ್ಯ. ಮಗುವಿನ ಮೆದುಳು ನಿದ್ರೆಯ ಸಮಯದಲ್ಲೇ ಹೆಚ್ಚು ಬೆಳವಣಿಗೆ ಆಗುತ್ತದೆ. ಹೀಗಾಗಿ, 6 ತಿಂಗಳೊಳಗಿನ ಮಕ್ಕಳು ಎಷ್ಟು ಹೊತ್ತು ಮಲಗುತ್ತಾರೋ ಅಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಮಗುವಿನ ನಿದ್ರೆಯ ಸಮಯವನ್ನು ನೀವು ಈಗಿನಿಂದಲೇ ಸರಿ ಮಾಡದಿದ್ದರೆ ಮುಂದೆ ಮಗುವಿನ ದಿನಚರಿಯನ್ನು ಸರಿಮಾಡಲು ಕಷ್ಟವಾಗುತ್ತದೆ.

BMC ಪಬ್ಲಿಕ್ ಹೆಲ್ತ್ ನಡೆಸಿದ ಇತ್ತೀಚಿನ ಅಧ್ಯಯನ ಪ್ರಕಾರ, ತಮ್ಮ ಮಕ್ಕಳಿಗೆ ಮಲಗುವ ಸಮಯದ ನಿಯಮಗಳನ್ನು ಸರಿಯಾಗಿ ಜಾರಿಗೊಳಿಸುವ ಪೋಷಕರಿಂದ ಮಕ್ಕಳು ಉತ್ತಮ ನಿದ್ರೆ ಪಡೆಯುತ್ತಾರೆ. ಮಕ್ಕಳಲ್ಲಿ ನಿದ್ರೆಯ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಮೇಲೆ ಪರಿಣಾಮ ಬೀರುವುದು, ಜನರೊಂದಿಗೆ ಬೆರೆಯದೆ ಇರುವುದು, ಕಿರಿಕಿರಿ ಅನುಭವಿಸುತ್ತಾರೆ. ತೀವ್ರ ನಿದ್ರಾಹೀನತೆ ಉಂಟಾದರೆ ಮಕ್ಕಳಲ್ಲಿ ಖಿನ್ನತೆ ಕೂಡ ಉಂಟಾಗಬಹುದು.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ಇದಲ್ಲದೆ, ನಿರ್ದಿಷ್ಟ ಸಮಯದಲ್ಲಿ ಮಲಗಲು ತಮ್ಮ ಮಗುವಿಗೆ ಅಭ್ಯಾಸ ಮಾಡಿಸುವ ಪೋಷಕರು ತಮ್ಮ ಮಕ್ಕಳ ದಿನಚರಿಯಲ್ಲಾಗುವ ಬದಲಾವಣೆಗಳನ್ನು ಗಮನಿಸಿದ್ದಾರೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ (ಎನ್‌ಎಸ್‌ಎಫ್) ಪ್ರಕಾರ, 3ರಿಂದ 5 ವರ್ಷ ವಯಸ್ಸಿನ ಮಕ್ಕಳು ಪ್ರತಿ ರಾತ್ರಿ ಕನಿಷ್ಠ 10ರಿಂದ 13 ಗಂಟೆಗಳ ನಿದ್ದೆ ಮಾಡಬೇಕು. 6ರಿಂದ 13 ವರ್ಷ ವಯಸ್ಸಿನ ಮಕ್ಕಳು ಕನಿಷ್ಠ 9ರಿಂದ 11 ಗಂಟೆಗಳ ಕಾಲ ನಿದ್ರಿಸಬೇಕು. 14ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಿಗೆ 8ರಿಂದ 10 ಗಂಟೆಗಳ ವಿಶ್ರಾಂತಿಯ ಅಗತ್ಯವಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಯುವಕ-ಯುವತಿಯರಿಗೆ 7ರಿಂದ 9 ಗಂಟೆಗಳ ಕಾಲ ನಿದ್ರೆ ಅಗತ್ಯ.

ಇದನ್ನೂ ಓದಿ: ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರ ಸೇವಿಸಿ

ಆರೋಗ್ಯಕರ ನಿದ್ರೆಯು ನಾವು ಎಚ್ಚರವಾಗಿರುವಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸಾಕಷ್ಟು ನಿದ್ರೆ ಪಡೆಯುವುದರಿಂದ ಮಗುವಿಗೆ ತನ್ನ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಇದು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗೇ, ಉತ್ತಮ ಹೃದಯದ ಕಾರ್ಯನಿರ್ವಹಣೆ ಮತ್ತು ಒಟ್ಟಾರೆ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ