AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಚೀನ ಗಿಡಮೂಲಿಕೆ ಎಲ್ಡರ್​ಬೆರಿ ಬಗ್ಗೆ ಅಚ್ಚರಿಯ ಮಾಹಿತಿ ಇಲ್ಲಿದೆ

ಗೊಂಚಲು ಗೊಂಚಲಾಗಿ ಬಿಡುವ ಎಲ್ಡರ್‌ಬೆರಿ ಹಣ್ಣುಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಎಲ್ಡರ್ಬೆರಿಗಳಲ್ಲಿ ಉತ್ಕರ್ಷಣ ನಿರೋಧಕ ಹೇರಳವಾಗಿದೆ. ಎಲ್ಡರ್‌ಬೆರಿಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಉರಿಯೂತ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಪ್ರಾಚೀನ ಗಿಡಮೂಲಿಕೆ ಎಲ್ಡರ್​ಬೆರಿ ಬಗ್ಗೆ ಅಚ್ಚರಿಯ ಮಾಹಿತಿ ಇಲ್ಲಿದೆ
ಎಲ್ಡರ್​ಬೆರಿ Image Credit source: iStock
ಸುಷ್ಮಾ ಚಕ್ರೆ
|

Updated on: Oct 03, 2023 | 10:33 PM

Share

ಎಲ್ಡರ್‌ಬೆರಿಯನ್ನು ಶತಮಾನಗಳಿಂದ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ವಿಶೇಷವಾಗಿ ಗ್ರೀಸ್, ಸ್ಕ್ಯಾಂಡಿನೇವಿಯಾ, ಪೋರ್ಚುಗಲ್ ಮತ್ತು ಮೊರಾಕೊದಲ್ಲಿ ಇದನ್ನು ಹೇರಳವಾಗಿ ಬಳಸಲಾಗುತ್ತದೆ. ಇದು ವಿಶ್ವದ ಅತ್ಯಂತ ಸಾಮಾನ್ಯವಾದ ಔಷಧೀಯ ಸಸ್ಯಗಳಲ್ಲಿ ಒಂದಾಗಿದೆ. ಜ್ವರ, ಸಂಧಿವಾತ, ಸಿಯಾಟಿಕಾ, ಸೋಂಕುಗಳಿಗೆ ಚಿಕಿತ್ಸೆ ನೀಡಲು ಪುರಾತನ ಕಾಲದಿಂದಲೂ ಆಯುರ್ವೇದ ಔಷಧದಲ್ಲಿ ಇದನ್ನು ಬಳಸಲಾಗುತ್ತಿದೆ.

ಗೊಂಚಲು ಗೊಂಚಲಾಗಿ ಬಿಡುವ ಎಲ್ಡರ್‌ಬೆರಿ ಹಣ್ಣುಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಎಲ್ಡರ್ಬೆರಿಗಳಲ್ಲಿ ಉತ್ಕರ್ಷಣ ನಿರೋಧಕ ಹೇರಳವಾಗಿದೆ. ಇದು ಇನ್ಫ್ಲುಯೆನ್ಸ್​ ರೋಗಲಕ್ಷಣಗಳನ್ನು ಒಳಗೊಂಡಂತೆ ನೋವು ಮತ್ತು ಅನಾರೋಗ್ಯವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಎಲ್ಡರ್‌ಬೆರಿ ಹೆಚ್ಚಿಸುತ್ತದೆ.

ಇದನ್ನೂ ಓದಿ: ಅತಿಯಾದ ಗೆಣಸು ಸೇವನೆಯಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಾ?

ಎಲ್ಡರ್‌ಬೆರಿಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಒಂದು ಕಪ್ ಎಲ್ಡರ್ಬೆರಿಯು 52.2 ಮಿಲಿಗ್ರಾಂ ವಿಟಮಿನ್ ಸಿಯನ್ನು ಒದಗಿಸುತ್ತದೆ. ಇದು ಅನಾರೋಗ್ಯವನ್ನು ತಡೆಯುತ್ತದೆ ಮತ್ತು ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆ.

ಎಲ್ಡರ್‌ಬೆರಿಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಉರಿಯೂತ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಉಸಿರಾಟ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಇದರಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ರಾತ್ರಿ ಊಟ ಬಿಟ್ಟರೆ ತೆಳ್ಳಗಾಗೋದು ನಿಜಾನಾ?

ಎಲ್ಡರ್‌ಬೆರಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಗಂಟಲು ನೋವು ಮತ್ತು ಕೆಮ್ಮನ್ನು ನಿವಾರಿಸುತ್ತದೆ. ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಹೀಗಾಗಿ, ಎಲ್ಡರ್‌ಬೆರಿ ಹಣ್ಣುಗಳನ್ನು ಮತ್ತು ಇದರ ಮರದ ತೊಗಟೆಯನ್ನು ಬಳಸಿದರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ