Health Tips: ಯಾರೆಲ್ಲಾ ಕಾಲೇಜಿಗೆ ಹೋಗುವ ಮೊದಲು ತಿಂಡಿ ಮಾಡಲ್ಲಾ? ಒಮ್ಮೆ ಇಲ್ಲಿ ಗಮನಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 18, 2024 | 9:47 AM

ಶಾಲೆ- ಕಾಲೇಜುಗಳಿಗೆ ಹೋಗುವ ಮಕ್ಕಳು ಬೆಳಗಿನ ಉಪಹಾರ ಮಾಡುವುದಿಲ್ಲ. ಇದರ ಪರಿಣಾಮ ಹೇಗಿರಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಬಿಸಿ ರಕ್ತ, ಬೇಕಾದಷ್ಟು ಶಕ್ತಿ ಇರುತ್ತದೆ. ತಿಂಡಿ ಮಿಸ್ ಆದರೆ ಏನ್ ತೊಂದರೆ ಎಂದು ಕೊಳ್ಳುತ್ತಾರೆ. ನೀವು ಕೂಡ ಇಂತಹ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಾದರೆ ಇದರಿಂದ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ? ಆರೋಗ್ಯಕ್ಕೆ ಯಾವ ರೀತಿಯಲ್ಲಿ ಹಾನಿ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Health Tips: ಯಾರೆಲ್ಲಾ ಕಾಲೇಜಿಗೆ ಹೋಗುವ ಮೊದಲು ತಿಂಡಿ ಮಾಡಲ್ಲಾ? ಒಮ್ಮೆ ಇಲ್ಲಿ ಗಮನಿಸಿ
ಸಾಂದರ್ಭಿಕ ಚಿತ್ರ
Follow us on

ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವುದು ಅವಶ್ಯಕ. ಆದರೆ ಕೆಲವರು ಮಧ್ಯಾಹ್ನ ಒಂದೇ ಸರಿ ಊಟ ಮಾಡಿದರಾಯಿತು ಎಂದುಕೊಳ್ಳುತ್ತಾರೆ. ಅದರಲ್ಲಿಯೂ ಶಾಲೆ- ಕಾಲೇಜುಗಳಿಗೆ ಹೋಗುವ ಮಕ್ಕಳು ಬೆಳಗಿನ ಉಪಹಾರ ಮಾಡುವುದಿಲ್ಲ. ಇದರ ಪರಿಣಾಮ ಹೇಗಿರಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಬಿಸಿ ರಕ್ತ, ಬೇಕಾದಷ್ಟು ಶಕ್ತಿ ಇರುತ್ತದೆ. ತಿಂಡಿ ಮಿಸ್ ಆದರೆ ಏನ್ ತೊಂದರೆ ಎಂದು ಕೊಳ್ಳುತ್ತಾರೆ. ನೀವು ಕೂಡ ಇಂತಹ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಾದರೆ ಇದರಿಂದ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ? ಆರೋಗ್ಯಕ್ಕೆ ಯಾವ ರೀತಿಯಲ್ಲಿ ಹಾನಿ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಸಮತೋಲನ ಆಹಾರ ಪದ್ಧತಿಯನ್ನು ಅನುಸರಿಸಿದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ನಮಗೆ ಸುಲಭವಾಗಿ ಸಿಗುತ್ತವೆ. ಆದರೆ ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ಇವೆಲ್ಲವೂ ನಮಗೆ ಸಿಗುವುದಿಲ್ಲ. ಇದರಿಂದ ನಮ್ಮ ಶುಗರ್ ಲೆವೆಲ್ ತುಂಬಾ ಕಡಿಮೆಯಾಗಿ ಬಿಡುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ದೇಹಕ್ಕೆ ಯಾವುದೇ ರೀತಿಯ ವಿಟಮಿನ್ ಮತ್ತು ಖನಿಜಾಂಶಗಳು ಸರಿಯಾಗಿ ಸಿಗುವುದಿಲ್ಲ.

ಇದನ್ನೂ ಓದಿ: ಮೊಳಕೆಯೊಡೆದ ಗೋಧಿಯಿಂದ ಇದೆ ಹತ್ತಾರು ಆರೋಗ್ಯ ಲಾಭಗಳು! ಅದನ್ನ ತಯಾರಿಸುವುದು ಹೇಗೆ?

ಪರಿಣಾಮವೇನು?

ಬೆಳಿಗ್ಗೆ ತಿಂಡಿ ಮಾಡದಿದ್ದರೆ ಅಂತವರ ಮೆದುಳು ನಿಧಾನವಾಗಿ ಹಾನಿಯಾಗುತ್ತದೆ. ಈ ರೀತಿ ಅಭ್ಯಾಸವನ್ನು ದೀರ್ಘ ಕಾಲದವರೆಗೆ ಮುಂದುವರೆಸಿಕೊಂಡು ಹೋದರೆ ಮೆದುಳು ಕೆಲಸ ಮಾಡುವ ವೇಗ ಮತ್ತು ಸಾಮರ್ಥ್ಯ ಕಡಿಮೆ ಆಗುತ್ತದೆ. ಇದರಿಂದ ಮೆಮೊರಿ ಲಾಸ್ ನಂತಹ ಗಂಭೀರ ಸಮಸ್ಯೆ ಕೂಡ ಬರುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ನೀವು ಬೆಳಗ್ಗಿನ ಉಪಹಾರ ಸೇವನೆ ಮಾಡುತ್ತಿಲ್ಲವಾದರೆ ಅದನ್ನು ಇಂದೇ ಬಿಟ್ಟು ಬಿಡಿ. ತೂಕ ಕಡಿಮೆ ಮಾಡಬೇಕಾದರೆ ಆರೋಗ್ಯಕರವಾದ ಆಹಾರ ಸೇವನೆ ಮಾಡಿ. ಇದರಿಂದ ಮೆಟಬಾಲಿಸಂ ಚೆನ್ನಾಗಿ ನಡೆಯುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: