Health Tips: ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯವನ್ನು ಹೇಳುತ್ತದೆ, ಅದು ಹೇಗೆ?

ನಾಲಿಗೆ ಬಣ್ಣ ಬದಲಾದರೆ ನಿಮ್ಮ ದೇಹದ ಆರೋಗ್ಯ ಏರುಪೇರಾಗಿದೆ ಎಂದು ತಿಳಿದುಕೊಳ್ಳಬಹುದು. ನಾಲಿಗೆಯ ಬಣ್ಣ, ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಯಾವ ಬಣ್ಣದಲ್ಲಿರುತ್ತದೆ? ಬಣ್ಣ ಬದಲಾಗುವುದಕ್ಕೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Health Tips: ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯವನ್ನು ಹೇಳುತ್ತದೆ, ಅದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2024 | 4:12 PM

ನಮ್ಮ ದೇಹದಲ್ಲಿ ಏನೇ ಬದಲಾವಣೆಗಳಾದರೂ ಪಂಚೇಂದ್ರಿಯಗಳು ಅದರ ಲಕ್ಷಣಗಳನ್ನು ತೋರಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಉದಾಹರಣೆಗೆ ದೇಹದಲ್ಲಿ ಅತಿಯಾದ ಉಷ್ಣಾಂಶವಾದರೆ ಕಣ್ಣು ಉರಿಯುತ್ತದೆ ಕೆಲವೊಮ್ಮೆ ಕೆಂಪಗಾಗುತ್ತದೆ, ಸೇವಿಸಿದ ಆಹಾರ ಅಲರ್ಜಿಯಾದರೆ ಚರ್ಮದ ಮೇಲೆ ದದ್ದುಗಳು ಉಂಟಾಗುತ್ತವೆ. ಅದೇ ರೀತಿ ನಾಲಿಗೆ ಬಣ್ಣ ಬದಲಾದರೆ ನಿಮ್ಮ ದೇಹದ ಆರೋಗ್ಯ ಏರುಪೇರಾಗಿದೆ ಎಂದು ತಿಳಿದುಕೊಳ್ಳಬಹುದು. ನಾಲಿಗೆಯ ಬಣ್ಣ, ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಯಾವ ಬಣ್ಣದಲ್ಲಿರುತ್ತದೆ? ಬಣ್ಣ ಬದಲಾಗುವುದಕ್ಕೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಗುಲಾಬಿ ಬಣ್ಣ: ಆರೋಗ್ಯವಂತರ ನಾಲಿಗೆ ಗುಲಾಬಿಯಾಗಿರಬೇಕು. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿದ್ದರೆ ನಿಮ್ಮ ನಾಲಿಗೆ ಗುಲಾಬಿ ಬಣ್ಣದಲ್ಲಿರುತ್ತದೆ.

ಬಿಳಿ ಬಣ್ಣ: ನಾಲಿಗೆ ಬಿಳಿ ಬಣ್ಣಕ್ಕೆ ತಿರುಗಿದರೆ ದೇಹ ಸೋಂಕಿಗೆ ಒಳಗಾಗಿದೆ ಎಂದು ತಿಳಿದುಕೊಳ್ಳಬಹುದು. ಕೆಲವೊಮ್ಮೆ ಕಫ ಇದ್ದಾಗಲೂ ಸಹ ಬಿಳಿ ಬಣ್ಣಕ್ಕೆ ತಿರುಗುತ್ತದೆ ಜೊತೆಗೆ ನಾಲಿಗೆ ಹೆಚ್ಚು ದ್ರವದಿಂದ ಕೂಡಿರುತ್ತದೆ. ಮತ್ತೆ ಕೆಲವರಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಕೂಡ ಈ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ನಾಲಿಗೆ ಸ್ವಚ್ಚತೆ ಮತ್ತು ಆರೋಗ್ಯವನ್ನು ಆಗಾಗ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಕೆಂಪು ಬಣ್ಣ: ದೇಹದಲ್ಲಿ ಅಲರ್ಜಿಯಾದರೆ ನಾಲಿಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ‘ಫೋಲಿಕ್ ಆಮ್ಲ’ ಅಥವಾ ‘ವಿಟಮಿನ್ ಬಿ12’ ಕೊರತೆಯು ನಾಲಿಗೆ ಕೆಂಪಾಗಲು ಕಾರಣವಾಗುತ್ತದೆ.

ಹಳದಿ ಬಣ್ಣ: ಬ್ಯಾಕ್ಟೀರಿಯಾ ಅಥವಾ ವಾತ ದೋಷದಲ್ಲಿ ವ್ಯತ್ಯಾಸವಾದರೆ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಮಲಬದ್ಧತೆ, ಅಧಿಕ ರಕ್ತದೊತ್ತಡ, ಸಂಧಿವಾತ, ಇತರ ಹೊಟ್ಟೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಕೆಲವೊಮ್ಮೆ ಹೆಚ್ಚು ಔಷಧಿಗಳನ್ನು ತೆಗೆದುಕೊಂಡಾಗಲು ನಾಲಿಗೆಯ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳಬಹುದು.

ನೀಲಿ ಬಣ್ಣ: ದೇಹದಲ್ಲಿ ಪಿತ್ತ ಜಾಸ್ತಿಯಾ್ದಾರೆ ನಾಲಿಗೆ ನೀಲಿ ಬಣ್ಣಕ್ಕೆ ಬರುತ್ತದೆ. ಜೊತೆಗೆ ಆಮ್ಲಜನಕದ ಕೊರತೆಯಾದರೂ ಕೂಡ ನಾಲಿಗೆ ಈ ಬಣ್ಣಕ್ಕೆ ತಿರುಗುತ್ತದೆ.

ಇದನ್ನೂ ಓದಿ: ವಾಕಿಂಗ್ ಈ ರೀತಿ ಮಾಡಿದರೆ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

ನೇರಳೆ ಬಣ್ಣ: ತೀವ್ರ ಹೃದಯ ಸಮಸ್ಯೆಗಳಿರುವವರ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗಬಹುದು. ಅಂದರೆ, ನಿಮ್ಮ ಹೃದಯವು ಸಾಕಷ್ಟು ರಕ್ತವನ್ನು ನೀಡಲು ಸಾಧ್ಯವಾಗಿರುವುದಿಲ್ಲ.

ಬೂದು ಬಣ್ಣ: ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಆಗಿದ್ದರೆ ನಾಲಿಗೆ ಬೂದು ಬಣ್ಣಕ್ಕೆ ತಿರುಗುತ್ತದೆ.

ಕಪ್ಪು ಬಣ್ಣ: ಕೆರಾಟಿನ್ ಸಮಸ್ಯೆ ತುಂಬಾ ಜಾಸ್ತಿಯಾದಲ್ಲಿ ನಿಮ್ಮ ನಾಲಿಗೆ ಕಪ್ಪು ಬಣ್ಣವಾಗುತ್ತದೆ. ಹಾಗಾಗಿ ನಿಮ್ಮ ಆರೋಗ್ಯವನ್ನು ಆಗಾಗ ಪರೀಕ್ಷಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ