AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Walking: ವಾಕಿಂಗ್ ಈ ರೀತಿ ಮಾಡಿದರೆ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

 ಡಾ.ಸುಧೀರ್ ಕುಮಾರ್ ಅವರು ಹೇಳುವ ಪ್ರಕಾರ, ವಾಕಿಂಗ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆ, ಮೂಳೆ ಸಾಂದ್ರತೆಯನ್ನು ಸುಧಾರಿಸುತ್ತದೆ, ಅಲ್ಲದೆ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ವಾಕಿಂಗ್ ಪರಿಣಾಮಕಾರಿ ಮಾರ್ಗವಾಗಿದೆ.

Walking: ವಾಕಿಂಗ್ ಈ ರೀತಿ ಮಾಡಿದರೆ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jun 17, 2024 | 3:02 PM

Share

ಇಂದಿನ ಒತ್ತಡದ ಬದುಕಿನಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗಾಗಿ ನಡಿಗೆ ಕಡೆ ಜನ ವಾಲುತ್ತಿದ್ದಾರೆ. ನಡಿಗೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಇದೊಂದು ಸಾಮಾನ್ಯ ದೈಹಿಕ ಚಟುವಟಿಕೆಯಾಗಿದ್ದರೂ ಕೂಡ ನರ ಅಥವಾ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಸಹ ಇದನ್ನು ಸುಲಭವಾಗಿ ಮಾಡಬಹುದಾಗಿದೆ. ಡಾ.ಸುಧೀರ್ ಕುಮಾರ್ ಅವರು ಹೇಳುವ ಪ್ರಕಾರ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆ, ಮೂಳೆ ಸಾಂದ್ರತೆಯನ್ನು ಸುಧಾರಿಸುತ್ತದೆ, ಅಲ್ಲದೆ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ವಾಕಿಂಗ್ ಪರಿಣಾಮಕಾರಿ ಮಾರ್ಗವಾಗಿದೆ.

ವಾಕಿಂಗ್ ಮತ್ತಷ್ಟು ಪರಿಣಾಮಕಾರಿಯಾಗಲು ಯಾವ ವಿಧಾನಗಳನ್ನು ಅನುಸರಿಸಬೇಕು?

1. ಉದ್ದ ಹೆಜ್ಜೆಗಳನ್ನು ಇಡಿ: ನಡೆಯುವಾಗ ಉದ್ದವಾದ ಹೆಜ್ಜೆಗಳನ್ನು ಹಾಕಿ ಅಂದರೆ ಒಂದು ಹೆಜ್ಜೆಯ ನಂತರ ಸ್ವಲ್ಪ ಅಂತರವಿಟ್ಟು ಇನ್ನೊಂದು ಹೆಜ್ಜೆ ಇಡಿ. ಈ ರೀತಿ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಜೊತೆಗೆ ಆರೋಗ್ಯ ಪ್ರಯೋಜನಗಳು ಸಿಗುತ್ತದೆ.

2. ಹಿಂದಕ್ಕೆ ನಡೆಯಿರಿ: ಮುಂದೆ ನಡೆಯುವುದಕ್ಕಿಂತ ಹಿಂದೆ ಹೆಜ್ಜೆಗಳನ್ನಿಟ್ಟು ನಡೆಯುವುದು ಒಂದು ರೀತಿಯ ಖುಷಿ ಕೊಡುವುದಲ್ಲದೆ ನಿಮ್ಮನ್ನು ಆರೋಗ್ಯಕರವಾಗಿರುತ್ತದೆ. ಹಿಂದಕ್ಕೆ ನಡೆಯುವುದರಿಂದ ವಿವಿಧ ಸ್ನಾಯುಗಳು ಸಕ್ರಿಯಗೊಳ್ಳುವುದಲ್ಲದೆ ಅವು ಬಲಗೊಳ್ಳುತ್ತದೆ. ಕೆಲವರಿಗೆ ದೇಹ ವಾಲುತ್ತದೆ, ಬೀಳುವಂತೆ ಅನಿಸುತ್ತದೆ. ಇಂತಹ ಅನುಭವ ಆಗುತ್ತಿದ್ದರೆ ಹಿಂದಕ್ಕೆ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಜೊತೆಗೆ ಕೀಲು ನೋವಿಗೂ ಒಳ್ಳೆಯದು.

3. ಹಸಿರಾಗಿರುವ ಪ್ರದೇಶದಲ್ಲಿ ನಡಿಗೆ ಮಾಡಿ: ಹಸಿರಾಗಿರುವ ಅಂಗಳ ಅಥವಾ ಉದ್ಯಾನವನಗಳಲ್ಲಿ ನಡೆಯುವುದು ವ್ಯಾಯಾಮದಿಂದ ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದಲ್ಲದೆ ಹಸಿರು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4. ಚುರುಕಿನ ಅಥವಾ ವೇಗದ ನಡಿಗೆ ಮಾಡಿ: ವಾಕಿಂಗ್ ಪ್ರಯೋಜನಕಾರಿ ಅದರಲ್ಲಿಯೂ ವೇಗವಾಗಿ ಅಂದರೆ ಚುರುಕಿನ ನಡಿಗೆ ಹೆಚ್ಚು ಪ್ರಯೋಜನಕಾರಿ. ನಡಿಗೆಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಗಂಟೆಗೆ 3 ಕಿ. ಮೀ. ನಡೆಯಲು ಪ್ರಯತ್ನ ಮಾಡಿ.

5. ಹೆಚ್ಚು ನಡೆಯಿರಿ: ಸಾಮಾನ್ಯವಾಗಿ ನಡಿಗೆ ಹೆಚ್ಚಾದಂತೆ ಪ್ರಯೋಜನಗಳು ಹೆಚ್ಚುತ್ತದೆ. ನಡೆಯಲು ಹೆಚ್ಚು ಪರಿಣಿತಿ ಇದ್ದರೆ ಅಂತವರಿಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಈಗಷ್ಟೇ ವಾಕಿಂಗ್ ಪ್ರಾರಂಭಿಸುತ್ತಿರುವವರು, ಅಥವಾ ಹೃದಯ ಅಥವಾ ಕೀಲು ಸಂಬಂಧಿತ ಕಾಯಿಲೆಗಳಿ ರುವವರು, ನಡಿಗೆ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು.

ಇದನ್ನೂ ಓದಿ: ಮುಟ್ಟಿನ ಸೆಳೆತ ಕಡಿಮೆಯಾಗಲು ಈ ಆಹಾರಗಳನ್ನು ಸೇವಿಸಿ

6. ಊಟದ ನಂತರ ನಡೆಯುವ ಅಭ್ಯಾಸ ಒಳ್ಳೆಯದು: ಊಟದ ನಂತರ ಸಣ್ಣ ನಡಿಗೆ (5-10 ನಿಮಿಷಗಳು) ಮಾಡುವುದು ತುಂಬಾ ಒಳ್ಳೆಯದು. ಇದು ಸಕ್ಕರೆ ನಿಯಂತ್ರಣ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

7. ಕಚೇರಿ ಸಮಯದಲ್ಲಿ ವಾಕಿಂಗ್ ವಿರಾಮ ತೆಗೆದುಕೊಳ್ಳಿ: ದೀರ್ಘಕಾಲ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಧೂಮಪಾನ ಮಾಡಿದಷ್ಟೇ ಅಪಾಯಕಾರಿ. ಸಂಶೋಧನೆಯ ಪ್ರಕಾರ, ಪ್ರತಿ 30 ನಿಮಿಷಗಳಿಗೆ ಐದು ನಿಮಿಷಗಳ ಲಘು ನಡಿಗೆ ಮಾಡುವುದು ಒಳ್ಳೆಯದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ