Health Tips: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಬಾಯಿಹುಣ್ಣು ವಿಪರೀತ ನೋವನ್ನು ಉಂಟು ಮಾಡುತ್ತದೆ. ಏನನ್ನು ತಿನ್ನಲೂ ಸಾಧ್ಯವಾಗದಷ್ಟು ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇದರಿಂದ ಒಮ್ಮೆ ಮುಕ್ತಿ ಸಿಕ್ಕರೆ ಸಾಕು ಎನಿಸುವುದು ಸುಳ್ಳಲ್ಲ. ಆದರೆ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಬೇಗ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಬಾಯಿಹುಣ್ಣು ಕಡಿಮೆ ಮಾಡುವ ಮನೆಮದ್ದುಗಳಾವವು? ಇಲ್ಲಿದೆ ಮಾಹಿತಿ.

Health Tips: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 26, 2024 | 10:58 AM

ಬಾಯಿಹುಣ್ಣು, ಸಾಮಾನ್ಯವಾಗಿ ಎಲ್ಲರನ್ನೂ ಕಾಡಿರುತ್ತದೆ. ಆಹಾರ ಸೇವನೆಯಲ್ಲಿ ಬದಲಾವಣೆ, ಜೀವನಶೈಲಿಯಲ್ಲಿ ವ್ಯತ್ಯಾಸ, ದೇಹದಲ್ಲಿ ಉಷ್ಣತೆಯಾದರೆ ಬಾಯಿ, ತುಟಿಯ ಒಳಗೆ ಗುಳ್ಳೆಗಳಾಗುತ್ತವೆ. ಇದು ವಿಪರೀತ ನೋವು ಮತ್ತು ಹಿಂಸೆ ಉಂಟು ಮಾಡುತ್ತದೆ. ಏನನ್ನು ತಿನ್ನಲೂ ಸಾಧ್ಯವಾಗದಷ್ಟು ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇದರಿಂದ ಒಮ್ಮೆ ಮುಕ್ತಿ ಸಿಕ್ಕರೆ ಸಾಕು ಎನಿಸುವುದು ಸುಳ್ಳಲ್ಲ. ಆದರೆ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಬೇಗ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಬಾಯಿಹುಣ್ಣು ಕಡಿಮೆ ಮಾಡುವ ಮನೆಮದ್ದುಗಳಾವವು? ಇಲ್ಲಿದೆ ಮಾಹಿತಿ.

*ಬಾಯಿಯ ಹುಣ್ಣಿಗೆ ಪೇರಳೆ ಎಲೆ ರಾಮಬಾಣವಾಗಿದೆ. ಈ ಎಲೆಯ ಚಿಗುರನ್ನು ನೀರಿನಲ್ಲಿ ಕುದಿಸಿ, ಕಷಾಯದ ರೀತಿಯಲ್ಲಿ ಸೇವನೆ ಮಾಡಬಹುದು ಅಥವಾ ಆ ಚಿಗುರನ್ನು ಅಗೆದು ತಿನ್ನುವುದರಿಂದಲೂ ಬಾಯಿಹುಣ್ಣಿನಿಂದ ಒಂದೇ ದಿನದಲ್ಲಿ ಮುಕ್ತಿ ಸಿಗುತ್ತದೆ.

*ಬಾಯಿ ಹುಣ್ಣನ್ನು ನಿವಾರಿಸಲು ತುಪ್ಪ ಮತ್ತು ಉಪ್ಪಿನ ಸೇವನೆ ಒಳ್ಳೆಯದು. ಆಹಾರದಲ್ಲಿ ತುಪ್ಪವನ್ನು ಸೇವನೆ ಮಾಡುವುದಿರಬಹುದು ಅಥವಾ ಆ ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚುವುದರಿಂದಲೂ ಹುಣ್ಣು ಕಡಿಮೆಯಾಗುತ್ತದೆ. ಇನ್ನು ಉಪ್ಪು ಮತ್ತು ತುಪ್ಪವನ್ನು ಸೇರಿಸಿ ಹುಣ್ಣಿನ ಮೇಲೆ ಇಡುವುದರಿಂದ ಒಂದೇ ದಿನದಲ್ಲಿ ನೋವಿನ ಜೊತೆಗೆ ಬಾಯಿಯ ಹುಣ್ಣು ಕೂಡ ಮಾಯವಾಗುತ್ತದೆ.

*ಉಪ್ಪು ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸುವುದರಿಂದಲೂ ಹುಣ್ಣು ಕಡಿಮೆಯಾಗುತ್ತದೆ. ಆದರೆ ಇದು ವಾಸಿಯಾಗಲು ಸಮಯ ತೆಗೆದುಕೊಳ್ಳಬಹುದು.

*ಬಾಯಿ ಹುಣ್ಣಿಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಲವಂಗ. ಪ್ರತಿದಿನ ಒಂದೆರಡು ಲವಂಗವನ್ನು ಜಗಿದು, ಅದರ ರಸವನ್ನು ಹುಣ್ಣುಗಳಿಗೆ ತಾಗುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಬಹಳ ಬೇಗ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಕುಳಿತಿರುವುದಕ್ಕಿಂತ ಕೆಟ್ಟ ಅಭ್ಯಾಸ ಮತ್ತೊಂದಿಲ್ಲ; ಡಾ. ದೇವಿ ಪ್ರಸಾದ್ ಶೆಟ್ಟಿ

*ಬಾಯಿಹುಣ್ಣು ಅಥವಾ ಅಲ್ಸರ್‌‌ನಂತಹ ಸಮಸ್ಯೆ ಇರುವವರು ಪ್ರತಿದಿನ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ