ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಇಂದು(ಬುಧವಾರ) ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಪಟ್ಟಣದ ನಿವಾಸಿ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ಗೆ ಅರ್ಜಿ ನೀಡಿ, ‘ನಾನು ಕೃಷಿಕ ಕುಟುಂಬಕ್ಕೆ ಸೇರಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದೇನೆ. ಆದ್ರೆ, ಇಲ್ಲಿವರಗೆ ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ, ಜೂ.26: ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ ಎಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಯುವಕನೊಬ್ಬ ಮನವಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ. ಇಂದು(ಬುಧವಾರ) ಕನಕಗಿರಿ ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಟ್ಟಣದ ನಿವಾಸಿ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ಗೆ ಅರ್ಜಿ ನೀಡಿ, ‘ನಾನು ಕೃಷಿಕ ಕುಟುಂಬಕ್ಕೆ ಸೇರಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದೇನೆ. ಆದ್ರೆ, ಇಲ್ಲಿವರಗೆ ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಹೀಗಾಗಿ ಸರ್ಕಾರದಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ ಮೂಲಕ ರೈತರ ಮಕ್ಕಳ ಬಾಳು ಬೆಳಗಲು ನೆರವಾಗಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಯುವಕನ ಮನವಿ ಕೇಳಿ ಶಾಕ್ ಆದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದು ಹೇಳಿ ಅರ್ಜಿ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ