ಸಂತ್ರಸ್ತೆಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ: ಪ್ರಜ್ವಲ್​​, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್​​ ಮಾಡಿರುವ ಆರೋಪದ ಮೇಲೆ ಮಾಜಿ ಸಚಿವ ಹೆಚ್​ಡಿ ರೇವಣ್ಣ ಪುತ್ರ, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಇವರ ಆಪ್ತರಾದ ಕಿರಣ, ಶರತ್ ವಿರುದ್ಧ ಬೆಂಗಳೂರು ಸೈಬರ್​ ಕ್ರೈಂ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಸಂತ್ರಸ್ತೆಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ: ಪ್ರಜ್ವಲ್​​, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​
ಪ್ರಜ್ವಲ್​ ರೇವಣ್ಣ, ಪ್ರೀತಂ ಗೌಡ
Follow us
| Updated By: ವಿವೇಕ ಬಿರಾದಾರ

Updated on:Jun 25, 2024 | 2:40 PM

ಬೆಂಗಳೂರು, ಜೂನ್​ 25: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್​​ ಮಾಡಿರುವ ಆರೋಪದ ಮೇಲೆ ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಪುತ್ರ, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna), ಬಿಜೆಪಿ ನಾಯಕ ಪ್ರೀತಂ ಗೌಡ (Preetham Gowda) ಮತ್ತು ಇವರ ಆಪ್ತರಾದ ಕಿರಣ, ಶರತ್ ವಿರುದ್ಧ ಬೆಂಗಳೂರು ಸೈಬರ್​ ಕ್ರೈಂ ಠಾಣೆಯಲ್ಲಿ (Cyber Crime Police Station) ಎಫ್​ಐಆರ್​ ದಾಖಲಾಗಿದೆ. ಈ ಪ್ರಕರಣ ಕೂಡ ಪ್ರಜ್ವಲ್ ರೇವಣ್ಣ ಅವರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.

ಐಪಿಸಿ ಸೆಕ್ಷನ್​ 354(A) ಲೈಗಿಂಕ ಕಿರುಕುಳ, 354(D) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(B) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು‌ ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆ್ಯಕ್ಟ್​​ ಅಡಿಯಲ್ಲಿ ನಾಲ್ವರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ.

ಇದನ್ನೂ ಓದಿ: ಎರಡೇ ತಿಂಗಳಲ್ಲಿ ನಾಲ್ವರು ವಿಐಪಿಗಳ ಬಂಧನ; ಕರ್ನಾಟಕಕ್ಕೆ ಶಾಕ್ ನೀಡಿದ ಘಟನೆಗಳಿವು

ಮಹಿಳೆಯರ ಖಾಸಗಿ ದೃಶ್ಯಗಳ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಬಹಿರಂಗ ಪಡಿಸಿದಕ್ಕೆ ಐಟಿ ಕಾಯಿದೆ ಸೆಕ್ಷನ್‌ 66ಇ ಎಫ್​ಐಆರ್​​ನಲ್ಲಿ ಸೇರಿಸಲಾಗಿದೆ. ಪ್ರಕರಣದಲ್ಲಿ ಪ್ರೀತಂ ಗೌಡ ಎ4 ಆಗಿದ್ದಾರೆ. ಪ್ರೀತಂ ಗೌಡ ವಿರುದ್ಧ ಪೆನ್ ಡ್ರೈವ್ ಖರೀದಿ ಮಾಡಿಸಿದ ಬಳಿಕ ಹಂಚಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೀತಂ ಗೌಡ ಅವರಿಗೆ ಎಸ್​ಐಟಿ  ಯಾವುದೇ ಕ್ಷಣದಲ್ಲಾದರೂ ನೋಟಿಸ್ ನೀಡುವ ಸಾಧ್ಯತೆ ಇದೆ.

ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ಮತ್ತೆ ನಾಲ್ಕು ದಿನಗಳ‌ ಕಾಲ ಎಸ್ಐಟಿ ಕಸ್ಟಡಿಗೆ ಪಡೆದುಕೊಂಡಿದೆ. ಜೂನ್ 29ರವರೆಗೂ ಪ್ರಜ್ವಲ್ ರೇವಣ್ಣ ಅವರನ್ನು ಎಸ್​ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Tue, 25 June 24

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ