ನೇರಳೆ ಹಣ್ಣುಗಳಷ್ಟೇ ಅಲ್ಲ.. ನೇರಳೆ ಎಲೆಗಳಿಂದಲೂ ಹಲವಾರು ಆರೋಗ್ಯ ಪ್ರಯೋಜನಗಳಿವೆ!
Jamun Leaves and health ನೇರಳೆ ಎಲೆಗಳನ್ನು ಚಹಾ ಮಾಡಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಅಥವಾ ಅಗಿಯಬಹುದು. ಆದಾಗ್ಯೂ, ಕಡಿಮೆ ರಕ್ತದ ಮಟ್ಟವನ್ನು ಹೊಂದಿರುವವರು ಅಥವಾ ಔಷಧಿ ಸೇವಿಸುವವರು ನೇರಳೆ ಎಲೆಗಳನ್ನು ಸೇವಿಸಬಾರದು.
ಈಗ ನೇರಳೆ ಹಣ್ಣುಗಳ ಸೀಸನ್… ಬೇಸಿಗೆ ಕಾಲ ಅಂತ್ಯಗೊಂಡು ಆಷಾಢ ಮಾಸದವರೆಗೂ ಮಾರುಕಟ್ಟೆಯಲ್ಲಿ ಕಣ್ಣಿಗೆ ರಾಚುವ ನೇರಳೆ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಅದರಲ್ಲೂ ಡಯಾಬಿಟೀಸ್ ರೋಗಕ್ಕೆ ರಾಮಬಾಣವಾಗಿದೆ. ಉತ್ತಮ ರುಚಿಯನ್ನು ಹೊಂದಿರುವ ನೇರಳೆ ಹಣ್ಣುಗಳನ್ನು ಮಕ್ಕಳು ಮತ್ತು ದೊಡ್ಡವರು ಇಷ್ಟಪಡುತ್ತಾರೆ. ಇದು ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಕೇವಲ ಹಣ್ಣುಗಳು ಮಾತ್ರವಲ್ಲ, ಅಮೂಲ್ಯ ನೇರಳೆ ಮರವು ಮನುಷ್ಯನಿಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ನೇರಳೆ ಎಲೆಗಳು ಕೂಡ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಈ ನೇರಳೆ ಎಲೆಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೇರಳೆ ಎಲೆಗಳಲ್ಲಿ ಕಬ್ಬಿಣ, ನಾರಿನಂಶ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳೂ ಹೇರಳವಾಗಿವೆ. ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಇಂದು ನೇರಳೆ ಎಲೆಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
Jamun Leaves – ಸಾಕಷ್ಟು ಆ್ಯಂಟಿ ಹೈಪರ್ಗ್ಲೈಮೆಸಿಕ್:
ನೇರಳೆ ಎಲೆಗಳು ಮಧುಮೇಹ ರೋಗಿಗಳಿಗೆ ಉತ್ತಮ ಔಷಧವಾಗಿದೆ. ಅಧಿಕ ರಕ್ತದ ಸಕ್ಕರೆ ಇರುವವರಿಗೆ ನೇರಳೆ ಎಲೆಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇವುಗಳಲ್ಲಿರುವ ಆಂಟಿ-ಹೈಪರ್ ಗ್ಲೈಸೆಮಿಕ್ ಗುಣಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೇರಳೆ ಎಲೆಗಳನ್ನು ಚಹಾ ಮಾಡಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಅಥವಾ ಅಗಿಯಬಹುದು.
ಆದಾಗ್ಯೂ, ಕಡಿಮೆ ರಕ್ತದ ಮಟ್ಟವನ್ನು ಹೊಂದಿರುವವರು ಅಥವಾ ಔಷಧಿ ಸೇವಿಸುವವರು ನೇರಳೆ ಎಲೆಗಳನ್ನು ಸೇವಿಸಬಾರದು.
Also Read: ನಮ್ಮ ದೇಶದಲ್ಲಿ ಈ ನಗರಗಳು ಸಂಪೂರ್ಣ ಸಸ್ಯಾಹಾರಿ ನಗರಗಳು, ವಿಶ್ವದ ಮೊದಲ ಸಸ್ಯಾಹಾರಿ ನಗರವೂ ಭಾರತದಲ್ಲೇ ಇರುವುದು!
Jamun Leaves – ಹೃದಯಕ್ಕೆ ಪ್ರಯೋಜನಕಾರಿ:
ನೇರಳೆ ಎಲೆಗಳನ್ನು ಸೇವಿಸುವುದರಿಂದ ಹೃದಯವನ್ನು ಆರೋಗ್ಯವಾಗಿಡುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಆದ್ದರಿಂದ ನೇರಳೆ ಎಲೆಗಳನ್ನು ಜಗಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
Jamun Leaves – ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ:
ಹಲ್ಲು, ವಸಡಿನ ಸಮಸ್ಯೆ, ಬಾಯಿ ದುರ್ವಾಸನೆ, ಹುಣ್ಣು ಇತ್ಯಾದಿಗಳಿಗೆ ನೇರಳೆ ಎಲೆಗಳನ್ನು ತಿನ್ನುವುದು ಒಳ್ಳೆಯದು. ಬಾಯಿ ಹುಣ್ಣಿನಿಂದ ಬಳಲುತ್ತಿರುವವರು ಎಳೆ ನೇರಳೆ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ, ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನ ಪಡೆಯಬಹುದು.
Jamun Leaves – ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಪದೇ ಪದೇ ಅಜೀರ್ಣದಿಂದ ಬಳಲುತ್ತಿದ್ದರೆ.. ನೇರಳೆ ಎಲೆಗಳನ್ನು ಸೇವಿಸುವುದು ಪ್ರಯೋಜನಕಾರಿ. ಇದರ ಔಷಧೀಯ ಗುಣಗಳು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ಅಜೀರ್ಣ, ಅತಿಸಾರ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.
(ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಟಿವಿ9 ಕನ್ನಡ.ಕಾಮ್ ಇದರಿಂದ ಉಂಟಾಗುವ ಯಾವುದೇ ಆರೋಗ್ಯ ವೈಪರೀತ್ಯಗಳಿಗೆ ಜವಾಬ್ದಾರವಾಗುವುದಿಲ್ಲ)
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..