AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Precautions for Diabetes: ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಮಧುಮೇಹ ಬಾ ಅಂದ್ರೂ ಬರುವುದಿಲ್ಲ!

Bad Lifestyle leads to Diabetes: ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆಯಿಂದ 90 ಪ್ರತಿಶತದಷ್ಟು ಮಧುಮೇಹ ಬರುವ ಸಾಧ್ಯತೆಗಳಿವೆ. ಇವುಗಳು ಹೆಚ್ಚಾಗಿ ಕೊಬ್ಬು, ಸಕ್ಕರೆ ಮತ್ತು ಎಣ್ಣೆಯನ್ನು ಹೊಂದಿರುತ್ತವೆ. ಅವೆಲ್ಲಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿಬಿಡುತ್ತವೆ.

Follow us
ಸಾಧು ಶ್ರೀನಾಥ್​
|

Updated on: Jun 22, 2024 | 6:06 AM

ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ಮಹಾಮಾರಿ ಎಲ್ಲರ ಮನೆಗಳಲ್ಲೂ ಪ್ರವೇಶಿಸಿಯಾಗಿದೆ. ಷುಗರ್​ ಬಂದರೆ ಜ್ವರ ಬಂದಂತೆ ಎಂದು ಭಾವಿಸುತ್ತಾರೆ ಜನ. ಆದರೆ ಬಂದ ನಂತರ, ಈ ರೋಗವನ್ನು ಕಡಿಮೆ ಮಾಡಲು ವಿಪರೀತ ಪ್ರಯತ್ನಗಳನ್ನು ಮಾಡಬೇಕಾಗಿದೆ. ಜೀವನ ಪರ್ಯಂತ ಔಷಧಗಳನ್ನು ಸೇವಿಸಬೇಕು. ಯಾವ ಆಹಾರವನ್ನೂ ಸರಿಯಾಗಿ ತಿನ್ನಲು ಆಗುವುದಿಲ್ಲ. ನಿಮ್ಮ ಆಹಾರಕ್ರಮವನ್ನು ಕಡ್ಡಾಯವಾಗಿ ಪಾಲಿಸಲೇಬೆಕು. ಅಲ್ಲೊಂದು ಇಲ್ಲೊಂದು ತುಸು ತಿಂದರೆ… ಜೀವ ಬಾಯಿಗೆ ಬರುತ್ತದೆ. ಮಧುಮೇಹವು ಹಠಾತ್ ರೋಗವಲ್ಲ. ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಯ (Lifestyle) ಬದಲಾವಣೆಗಳು ಮಧುಮೇಹಕ್ಕೆ ಕಾರಣವಾಗಬಹುದು. ಮಧುಮೇಹದ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹಾಗಿದ್ದಲ್ಲಿ, ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯ. ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಆದರೆ ಈಗ ಮಧುಮೇಹ ಬರದಂತೆ ತಡೆಯಲು ಏನು ಮುಂಜಾಗ್ರತೆ ವಹಿಸಬೇಕು ಎಂದು ನೋಡೋಣ (Precautions for Diabetes).

Precautions for Diabetes -ಮಧುಮೇಹದ ಲಕ್ಷಣಗಳು ಹೀಗಿವೆ:

ಹೆಚ್ಚಿದ ಹಸಿವು, ಮೂತ್ರದ ಸಮಸ್ಯೆ, ಸುಸ್ತು, ಬಳಲಿಕೆ, ಅತಿಯಾದ ಬಾಯಾರಿಕೆ, ಎಷ್ಟು ತಿಂದರೂ ಹಸಿವಾಗುವುದು, ಕಾಲು ಕೈ ಜೋಮು ಹಿಡಿಯುವುದು, ಮನೈಯೆಲ್ಲಾ ಆಗಾಗ ಕರೆಂಟ್ ಪಾಸಾದಂತಹ ಕೆಟ್ಟ ಅನುಭವ, ಗಾಯಗೊಂಡರೆ ಬೇಗನೆ ವಾಸಿಯಾಗದು ಇವೇ ಮುಂತಾದ ಸಮಸ್ಯೆಗಳು ಮಧುಮೇಹಕ್ಕೆ ಅಂಟಿಕೊಂಡಿರುತ್ತವೆ.

Also Read: ವಾಯುಮಾಲಿನ್ಯಕ್ಕೂ ಮಧುಮೇಹ ಹೆಚ್ಚಳಕ್ಕೂ ಇದೆ ನೇರ ಸಂಬಂಧ, ವೈದ್ಯರು ಏನು ಹೇಳ್ತಾರೆ ಗೊತ್ತಾ?

Precautions for Diabetes -ತೂಕವನ್ನು ನಿಯಂತ್ರಣದಲ್ಲಿಡಿ:

ಮಧುಮೇಹಕ್ಕೆ ತೂಕವೂ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ತೂಕ ಹೆಚ್ಚಾಗುವುದರಿಂದ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಜೊತೆಗೆ ಜಂಕ್ ಫುಡ್ ಗಳನ್ನು ಹೆಚ್ಚು ತಿನ್ನಬೇಕು ಅನ್ನಿಸುತ್ತದೆ. ಹಾಗಾಗಿ ತೂಕವನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಿ.

Precautions for Diabetes -ನಿದ್ರೆ:

ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಮಧುಮೇಹ ಬರುವ ಸಾಧ್ಯತೆಗಳು ತುಂಬಾ ಹೆಚ್ಚು. ಇಂದಿನ ದಿನಗಳಲ್ಲಿ ಅನೇಕರು ರಾತ್ರಿ ಬೇಗ ಮಲಗುವುದಿಲ್ಲ. ಅವರು ಮಧ್ಯರಾತ್ರಿವರೆಗೂ ಮೊಬೈಲ್ ಫೋನ್ ಮತ್ತು ಟಿವಿಯನ್ನು ನೋಡುತ್ತಾ ಎದ್ದಿರುತ್ತಾರೆ. ರಾತ್ರಿ 9 ಅಥವಾ 10 ಗಂಟೆಯ ಮೊದಲು ಮಲಗುವವರಿಗೆ ಮಧುಮೇಹ ಬರುವ ಅಪಾಯ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

Also Read: ಕಾಳ ಸರ್ಪ ದೋಷಗಳು ಎಷ್ಟಿವೆ? ಯಾರದೇ ಜಾತಕದಲ್ಲಿನ ಅಪಾಯಕಾರಿ ದೋಷ ಯಾವುದು, ಪರಿಹಾರವೇನು?

Precautions for Diabetes -ಜಂಕ್ ಫುಡ್:

ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆಯಿಂದ 90 ಪ್ರತಿಶತದಷ್ಟು ಮಧುಮೇಹ ಬರುವ ಸಾಧ್ಯತೆಗಳಿವೆ. ಇವುಗಳು ಹೆಚ್ಚಾಗಿ ಕೊಬ್ಬು, ಸಕ್ಕರೆ ಮತ್ತು ಎಣ್ಣೆಯನ್ನು ಹೊಂದಿರುತ್ತವೆ. ಅವೆಲ್ಲಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿಬಿಡುತ್ತವೆ.

(ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಟಿವಿ9 ಕನ್ನಡ.ಕಾಮ್ ಇದರಿಂದ ಉಂಟಾಗುವ ಯಾವುದೇ ಆರೋಗ್ಯ ವೈಪರೀತ್ಯಗಳಿಗೆ ಜವಾಬ್ದಾರವಾಗುವುದಿಲ್ಲ)

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ