ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ: ಅವಿವಾಹಿತ, ಅನೈತಿಕ ಗರ್ಭಧರಿಸಿದವರೇ ಟಾರ್ಗೆಟ್
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗೊಲ್ಲಹಳ್ಳಿ, ದಾವಣಗೆರೆ, ಮಂಡ್ಯ ಸೇರಿ ಹಲವೆಡೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ಯಾಂಗ್ ಎಂಥ ಖತರ್ನಾಕ್ ಅಂದರೆ, ಅವಿವಾಹಿತ ಗರ್ಭಧರಿಸಿದ ಮಹಿಳೆಯರು, ಅಕ್ರಮ ಸಂಬಂಧದಿಂದ ಪಡೆದ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು.
ತುಮಕೂರು, ಜೂನ್ 26: ಮಗುವಿನ ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ (Children’s Trafficking network) ಪತ್ತೆ ಆಗಿದೆ. ಸದ್ಯ ಆರು ಜನರನ್ನು ಪೊಲೀಸರು (police) ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತೆ ಶಾಕ್ ಎದುರಾಗಿತ್ತು. ಬಡವರ ಮಕ್ಕಳು ಸೇರಿದಂತೆ ಗರ್ಭಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭಧರಿಸಿದವರಿಂದ ಈ ಗ್ಯಾಂಗ್ ಮಕ್ಕಳನ್ನು ಖರೀದಿಸುತ್ತಿದ್ದರು. ಇನ್ನು ಬಂಧಿತರಲ್ಲಿ ಇಬ್ಬರು ಆರೋಪಿಗಳು ಜಾತ್ರೆಗಳಲ್ಲಿ ಟ್ಯಾಟೂ ಹಾಕುತ್ತಿದ್ದರು ಎಂಬ ಸಂಗತಿ ಬಯಲಾಗಿದೆ.
ನರ್ಸ್ಗಳಾದ ಎನ್.ಪೂರ್ಣಿಮಾ, ಸೌಜನ್ಯ, ಯು.ಡಿ.ಮಹೇಶ್, ಮಹಬೂಬ್ ಪಾಷಾ, ಕೆ.ಎನ್.ರಾಮಕೃಷ್ಣ, ಹನುಮಂತರಾಜು, ಮುಬಾರಕ್ ಪಾಷಾ ಬಂಧಿತರು. ಬಂಧಿತರಿಂದ 1 ಕಾರು, 50 ಸಾವಿರ ನಗದು, 4 ಮೊಬೈಲ್ಗಳು ಜಪ್ತಿ ಮಾಡಲಾಗಿದೆ.
ಇದನ್ನು ಓದಿ: ಗೃಹ ಸಚಿವರ ತವರು ಕ್ಷೇತ್ರ ತುಮಕೂರಿನಲ್ಲೇ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ
ಮೆಹಬೂಬ್ ಪಾಷಾ ಎಂಬಾತನ ಹುಳಿಯಾರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊಳ್ಳುವವರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು ಅವರಿಗೆ ಹುಟ್ಟಿದ ಮಗುವೆಂದು ಸರ್ಟಿಫಿಕೇಟ್ ನೀಡುತ್ತಿದ್ದರು. ಆರೋಪಿ ಸೌಜನ್ಯ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಬೆಳಗಾವಿ ಮಕ್ಕಳ ಮಾರಾಟ ಪ್ರಕರಣ: ಆರೋಪಿ ಅಬ್ದುಲ್ನಿಂದ ಭ್ರೂಣಹತ್ಯೆ, ತನಿಖೆಯಲ್ಲಿ ಬಯಲು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗೊಲ್ಲಹಳ್ಳಿ, ದಾವಣಗೆರೆ, ಮಂಡ್ಯ ಸೇರಿ ಹಲವೆಡೆ ಮಕ್ಕಳನ್ನು ಆರೋಪಿಗಳು ಮಾರಾಟ ಮಾಡಿದ್ದರು. ಮಕ್ಕಳನ್ನು 2-3 ಲಕ್ಷ ರೂ. ಗ್ಯಾಂಗ್ ಮಾರಾಟ ಮಾಡಲಾಗುತ್ತಿತ್ತು. ಗುಬ್ಬಿಯಲ್ಲಿ 11 ತಿಂಗಳ ಮಗವನ್ನು ಗ್ಯಾಂಗ್ ಅಪಹರಿಸಿತ್ತು. ಪೊಲೀಸರು ಪ್ರಕರಣದ ತನಿಖೆ ವೇಳೆ ಮಕ್ಕಳ ಮಾರಾಟದ ಜಾಲ ಪತ್ತೆ ಆಗಿದೆ. ಅಪಹರಿಸಿ ಮಾರಾಟವಾಗಿದ್ದ 5 ಮಕ್ಕಳನ್ನು ರಕ್ಷಿಸಲಾಗಿದೆ. 1 ಮಗು ಸಾವನ್ನಪ್ಪಿದ್ದು, 3 ಮಕ್ಕಳಿಗಾಗಿ ಶೋಧ ಕಾರ್ಯ ನಡೆದಿದೆ.
ಇನ್ನು ಇತ್ತೀಚೆಗೆ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆ ಆಗಿತ್ತು. ಆರೋಪಿಗನ್ನು ಖೆಡ್ಡಾಗೆ ಬೀಳಿಸಿದ್ದ ಪೊಲೀಸರು ಕರಾಳ ದಂಧೆಯ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದರು. ಒಂದು ಲಕ್ಷದ ನಲವತ್ತು ಸಾವಿರ ರೂ. ಮಗು ಮಾರಾಟ ಮಾಡಲು ಯತ್ನಿಸಿ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರ ಕೈಗೆ ಈ ಟೀಮ್ ತಗ್ಲಾಕ್ಕೊಂಡಿತ್ತು. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಕಿಂಗ್ ಪಿನ್ ಸೇರಿ ಐದು ಜನರನ್ನ ಪೊಲೀಸರು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.