ಮೂವರು ಡಿಸಿಎಂಗಳ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ, ವಿಧಾನ ಪರಿಷತ್ ಸದಸ್ಯ

ಮೂವರು ಡಿಸಿಎಂಗಳ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ, ವಿಧಾನ ಪರಿಷತ್ ಸದಸ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2024 | 12:07 PM

ಹೆಚ್ಚುವರಿ ಡಿಸಿಎಂಗಳ ಬಗ್ಗೆ ಪದೇಪದೆ ಪ್ರಸ್ತಾಪ ಮಾಡುತ್ತಾ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ವಿರೋಧ ಪಕ್ಷಗಳ ನಾಯಕರು ಟೀಕಿಸಲು ಮೇವು ಒದಗಿಸುತ್ತಿದ್ದಾರೆ. ವಿಷಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಪಕ್ಷದ ವಿರುದ್ಧ ಕೇಳೊಬರುತ್ತಿರುವ ಟೀಕೆಗಳು ಇವರಿಎಗ ಸಮಸ್ಯೆ ಎನಿಸುತ್ತಿಲ್ಲ!

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ (MLC) ಸಿಟಿ ರವಿ (CT Ravi) ಅವರು, ರಾಜ್ಯದಲ್ಲಿ ಮೂರು ಡಿಸಿಎಂ ಗಳ ಬಗ್ಗೆ ಎದ್ದಿರುವ ಕೂಗಿಗೆ ಪ್ರತಿಕ್ರಿಯೆ ನೀಡುತ್ತಾ ಮೂರು ಡಿಸಿಎಂಗಳ ಬೇಡಿಕೆ ಅಸಲಿಗೆ ಈಗಿರುವ ಡಿಸಿಎಂಗೆ ಮೂಗುದಾರ ಹಾಕಲು ನಡೆಯುತ್ತಿರುವ ಹುನ್ನಾರವೆಂದು ಹೇಳಿದರು. ಸಿಎಂ ಕುರ್ಚಿಯ ಮೇಲೆ ಯಾರ ಕಣ್ಣಿದೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಡಿಕೆ ಶಿವಕುಮಾರ್ (DK Shivakumar) ಅವರೇ ಹಲವಾರು ಬಾರಿ ಹೇಳಿದ್ದಾರೆ. ಹೈಕಮಾಂಡ್ ಜೊತೆ ನಡೆದ ಚರ್ಚೆ ಏನು ಅಂತ ತನಗೆ ಮತ್ತು ಸಿದ್ದರಾಮಯ್ಯನವರಿಗೆ ಮಾತ್ರ ಗೊತ್ತು, ಅದರ ಬಗ್ಗೆ ಯಾರೂ ಮಾತಾಡಬಾರದು ಎಂದು ಹೇಳಿದ್ದ ಅವರು ಈಗ ತಾವೇ ತಮ್ಮ ಡಿಸಿಎಂ ಪಟ್ಟ ಉಳಿಸಿಕೊಳ್ಳಲು ಒದ್ದಾಡುತ್ತಿರುವುದು ಶೋಚನೀಯ ಎಂದು ರವಿ ಹೇಳಿದರು. ಡಿಸಿಎಂ ಶಿವಕುಮಾರ್ ಅವರ ಅಸಾಹಯಕತೆ ಆಶ್ಚರ್ಯ ಮೂಡಿಸುತ್ತದೆ, ಹೆಚ್ಚುವರಿ ಡಿಸಿಎಂಗಳು ಯಾರಾದರೂ ಮಾತಾಡಿದರೆ ಹುಷಾರ್ ಎಂದಿದ್ದ ಅವರ ಮಾತನ್ನು ಈಗ ಯಾರೆಂದರೆ ಯಾರೂ ಕೇಳುತ್ತಿಲ್ಲ ಎಂದು ರವಿ ಗೇಲಿ ಮಾಡಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್​ಗೆ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದವರ್ಯಾರು?: ಸಿಟಿ ರವಿ ಪ್ರಶ್ನೆ