ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು!
ನಂತರ ಸಿದ್ದರಾಮಯ್ಯ ರವಿಯವರ ಕಿವಿಹಿಂಡಿ ಜೋಕ್ ಕಟ್ ಮಾಡುತ್ತಾರೆ. ಸಿದ್ದರಾಮಯ್ಯರನ್ನು ಅತಿಹೆಚ್ಚು ಟೀಕಿಸುವ ಬಿಜೆಪಿ ನಾಯರಕರಲ್ಲಿ ರವಿ ಅಗ್ರಗಣ್ಯರು ಅಂತ ಕನ್ನಡಿಗರಿಗೆಲ್ಲ ಗೊತ್ತು ಅದರೆ ಅವರಿಬ್ಬರ ನಡುವೆ ಅಷ್ಟೇ ಗೌರವಾದರಗಳಿರೋದು ಕೂಡ ಸತ್ಯ.
ಬೆಂಗಳೂರು: ವಿರೋಧ ಪಕ್ಷಗಳ ನಾಯಕರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಎಷ್ಟೇ ಕಟುವಾಗಿ ಟೀಕಿಸಿದರೂ ಅವರ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ. ಇದಕ್ಕೆ ಇಂದು ವಿಧಾನಸೌಧದ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ (MLC) ಪ್ರಮಾಣ ವಚನ ಸ್ವೀಕರಿಸಿದ ಹಿರಿಯ ಬಿಜೆಪಿ ನಾಯಕ ಸಿಟಿ ರವಿಯವರ (CT Ravi) ವರ್ತನೆಯೇ ಸಾಕ್ಷಿ. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನ ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರವಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹೋಗಿ ಅವರ ಕಾಲಿಗೆ ನಮಸ್ಕರಿಸಿದರು. ಬೋಕೆಯೊಂದನ್ನು ನೀಡಿ ರವಿಯವರನ್ನು ವಿಧಾನಸಭೆಯ ಮೇಲ್ಮನೆಗೆ ಸ್ವಾಗತಿಸುವ ಸಿದ್ದರಾಮಯ್ಯ ಬಿಜೆಪಿ ಧುರೀಣನ ಬೆನ್ನುತಟ್ಟಿ ಅಭಿನಂದಿಸಿದರು. ನಂತರ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ ಅವರು ರವಿಯವರಿಗೆ ಸಾಂಪ್ರದಾಯಿಕ ಬ್ರೀಫ್ ಕೇಸ್ ನೀಡಿ ಸ್ವಾಗತ ಕೋರುತ್ತಾರೆ. ಅದನ್ನು ನೀಡುವಾಗ ಹೊರಟ್ಟಿಯವರು ಸಿದ್ದರಾಮಯ್ಯರ ಕಿವಿಯಲ್ಲಿ ಏನೋ ಹೇಳುತ್ತಾರೆ. ನಂತರ ಸಿದ್ದರಾಮಯ್ಯ ರವಿಯವರ ಕಿವಿಹಿಂಡಿ ಜೋಕ್ ಕಟ್ ಮಾಡುತ್ತಾರೆ. ಸಿದ್ದರಾಮಯ್ಯರನ್ನು ಅತಿಹೆಚ್ಚು ಟೀಕಿಸುವ ಬಿಜೆಪಿ ನಾಯರಕರಲ್ಲಿ ರವಿ ಅಗ್ರಗಣ್ಯರು ಅಂತ ಕನ್ನಡಿಗರಿಗೆಲ್ಲ ಗೊತ್ತು ಅದರೆ ಅವರಿಬ್ಬರ ನಡುವೆ ಅಷ್ಟೇ ಗೌರವಾದರಗಳಿರೋದು ಕೂಡ ಸತ್ಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸರ್ಕಾರದ ವಿರುದ್ಧ ಸಿಟಿ ರವಿ ಪ್ರತಿಭಟನೆ