ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿದ್ದರಾಮಯ್ಯ ಇಂದು ಹೆಚ್ಚಳ ಸಮರ್ಥಿಸಿಕೊಂಡರು!
ನಿನ್ನೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಹಾಲಿನ ದರ ಹೆಚ್ಚು ಮಾಡಿದ್ದು ಕೆಎಂಎಫ್, ಸರ್ಕಾರವಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅದನ್ನು ಸಮರ್ಥನೆ ಮಾಡಿಕೊಂಡಿದ್ದು ಆಶ್ಚರ್ಯ ಹುಟ್ಟಿಸುತ್ತದೆ. ಹೋಟೆಲ್ ಉದ್ಯಮದವರು ಅದನ್ನು ಸ್ವಾಗತ ಮಾಡಿದ್ದು ನಿಜವಾದರೂ ಜನಸಾಮಾನ್ಯನಿಗೆ ಬೆಲೆ ಹೆಚ್ಚಳ ಹೊರೆಯೆನಿಸುತ್ತದೆ.
ಬೆಂಗಳೂರು: ನಗರದಲ್ಲಿಂದು ಹಾಲಿನ ಬೆಲೆ ಲೀಟರ್ ಗೆ ರೂ 2ರಷ್ಟು ಹೆಚ್ಚು (Milk price hike) ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆಅ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಹಾಲಿನ ದರವನ್ನು ಹೆಚ್ಚಿಸಿಲ್ಲ, ಹಾಲಿನ ಪ್ಯಾಕೆಟ್ ಗಳಲ್ಲಿ ಹೆಚ್ಚುವರಿ ಹಾಲನ್ನು (additional milk) ನೀಡಲಾಗುತ್ತಿದೆ, ಅರ್ಧ ಲೀಟರ್ ಪ್ಯಾಕೆಟ್ ನಲ್ಲಿ 50 ಎಂಎಲ್ ಮತ್ತು ಒಂದು ಲೀಟರ್ ಪ್ಯಾಕೆಟ್ ನಲ್ಲಿ 100 ಮಿ ಲೀ ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದ್ದು ಈ ಹೆಚ್ಚುವರಿ ಹಾಲಿಗೆ ರೂ. 1 ಮತ್ತು ರೂ 2 ಹೆಚ್ಚು ನೀಡುವಂತೆ ಬಳಕೆದಾರರನ್ನು ಕೇಳಲಾಗುತ್ತಿದೆ ಎಂದು ಹೇಳಿದರು. ಜನ ನಮಗೆ ಹೆಚ್ಚುವರಿ ಹಾಲು ಬೇಕಿಲ್ಲ ಎನ್ನುತ್ತಿದ್ದಾರೆ ಅಂತ ಪತ್ರಕರ್ತರೊಬ್ಬರು ಕೇಳಿದ್ದಕ್ಕೆ ರೇಗಿದ ಸಿದ್ದರಾಮಯ್ಯ, ಅಂದರೆ ಹೆಚ್ಚು ಉತ್ಪಾದನೆ ಆಗಿರುವ ಹಾಲನ್ನು ಒಯ್ದು ಚೆಲ್ಲಬೇಕಾ? ಎಂದು ಕೇಳಿದರು. ಬಿಜೆಪಿ ಆಡಳಿತಾವಧಿಯಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತಿತ್ತು ಈಗ 99 ಲಕ್ಷ ಹಾಲು ಮಾರಾಟಕ್ಕೆ ಲಭ್ಯವಾಗುತ್ತಿದೆ, ಬಿಜೆಪಿಯವರು ಏನೋ ಹೇಳ್ತಾರೆ ಅಂದಾಕ್ಷಣ ಅದನ್ನೇ ನಂಬಿ ಬರೆದುಬಿಡಬೇಡಿ, ಕೊಂಚ ವಿವೇಚನೆ ಬಳಸಿ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್; ಈ ಬಗ್ಗೆ ಚರ್ಚೆ ಮಾಡ್ತೀನಿ -ಸಿಎಂ ಸಿದ್ದರಾಮಯ್ಯ