Betel Leaves: ಈ ರೋಗಕ್ಕೆ ವೀಳ್ಯದೆಲೆಯೇ ಮದ್ದು

ಊಟ ಮಾಡಿದ ಮೇಲೆ ಎಲೆ, ಅಡಿಕೆ ಹಾಕುವುದು ವಾಡಿಕೆ. ಇದನ್ನು ನಾವು ಕೆಲವು ಭಾಗಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಹಿಂದಿನ ತಲೆಮಾರಿಗೆ ಹೋಲಿಸಿದರೆ ಈ ಪದ್ಧತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರಬಹುದು ಆದರೆ ನಿಯಮಿತವಾಗಿ ತಿನ್ನುವವರಿದ್ದಾರೆ. ಆಯುರ್ವೇದದಲ್ಲಿಯೂ ಇದನ್ನು ಕೇವಲ ಬಾಯಿಯನ್ನು ಸ್ವಚ್ಛಗೊಳಿಸುವುದಕ್ಕೆ ಮಾತ್ರವಲ್ಲ ಅನೇಕ ರೀತಿಯ ದೈಹಿಕ ಸಮಸ್ಯೆಗಳನ್ನು ಸಹ ನಿವಾರಣೆ ಮಾಡಲು ಬಳಸಲಾಗುತ್ತದೆ.

Betel Leaves: ಈ ರೋಗಕ್ಕೆ ವೀಳ್ಯದೆಲೆಯೇ ಮದ್ದು
ವೀಳ್ಯದೆಲೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 26, 2024 | 2:29 PM

ಒಂದು ಒಳ್ಳೆ ಊಟ ಮಾಡಿದ ಮೇಲೆ ಎಲೆ, ಅಡಿಕೆ ಹಾಕುವುದು ವಾಡಿಕೆ. ಇದನ್ನು ನಾವು ಕೆಲವು ಭಾಗಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಹಿಂದಿನ ತಲೆಮಾರಿಗೆ ಹೋಲಿಸಿದರೆ ಈ ಪದ್ಧತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರಬಹುದು ಆದರೆ ನಿಯಮಿತವಾಗಿ ತಿನ್ನುವವರಿದ್ದಾರೆ. ಆಯುರ್ವೇದದಲ್ಲಿಯೂ ಇದನ್ನು ಕೇವಲ ಬಾಯಿಯನ್ನು ಸ್ವಚ್ಛಗೊಳಿಸುವುದಕ್ಕೆ ಮಾತ್ರವಲ್ಲ ಅನೇಕ ರೀತಿಯ ದೈಹಿಕ ಸಮಸ್ಯೆಗಳನ್ನು ಸಹ ನಿವಾರಣೆ ಮಾಡಲು ಬಳಸಲಾಗುತ್ತದೆ.

ಚರ್ಮದ ಸಮಸ್ಯೆಗಳಿಗೆ ದಿವ್ಯಔಷಧ

ಮೂಗಿನಿಂದ ರಕ್ತಸ್ರಾವವಾಗುವುದನ್ನು ತಡೆಯಲು ವೀಳ್ಯದೆಲೆ ತುಂಬಾ ಪರಿಣಾಮಕಾರಿಯಾಗಿದೆ. ರಕ್ತವನ್ನು ಬೇಗ ಹೆಪ್ಪುಗಟ್ಟಿಸುವ ಸಾಮರ್ಥ್ಯ ಇದರಲ್ಲಿದೆ. ಅದೂ ಅಲ್ಲದೆ ವೀಳ್ಯದೆಲೆ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಹಾಗಾಗಿ ಮೊಡವೆ ಮತ್ತು ದದ್ದುಗಳಂತಹ ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಬಹುದು

ಸಂಧಿವಾತವನ್ನು ಕಡಿಮೆ ಮಾಡಲು ವೀಳ್ಯದೆಲೆ ಪರಿಣಾಮಕಾರಿ ಮದ್ದಾಗಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ತಿನ್ನುವುದರಿಂದ ಸಂಧಿವಾತವನ್ನು ಗುಣಪಡಿಸಬಹುದು. ನಿಯಮಿತವಾಗಿ ವೀಳ್ಯದೆಲೆಯನ್ನು ತಿನ್ನುವುದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಸುಲಭವಾಗಿ ತೂಕ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಶೀತದಿಂದ ತಕ್ಷಣ ಪರಿಹಾರ ಸಿಗುತ್ತದೆ

ವೀಳ್ಯದೆಲೆ ಪಾನೀಯವು ಶೀತದಿಂದ ತಕ್ಷಣ ಪರಿಹಾರ ನೀಡುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಕುಡಿದರೆ ಶೀತದಿಂದ ಮುಕ್ತಿ ಸಿಗುತ್ತದೆ.

ಗ್ಯಾಸ್ ಸಮಸ್ಯೆ ಇರುವುದಿಲ್ಲ

ವೀಳ್ಯದೆಲೆಯ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಎದೆಯುರಿಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: