‘ದರ್ಶನ್ ತೂಗುದೀಪ ಇರುವ ಫ್ಲೋರ್ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ದರ್ಶನ್ಗಾಗಿ ನಾಲ್ಕು ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ವಾಸು, ಮುಂಚೆ ದರ್ಶನ್ ಹೇಗಿದ್ದರು ಎಂಬ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಇಡುತ್ತಿದ್ದ ಬೇಡಿಕೆಗಳು, ಸಹ ನಟ-ನಟಿಯರೊಟ್ಟಿಗೆ ಅವರು ವರ್ತಿಸುತ್ತಿದ್ದ ರೀತಿ ಇತರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಬಗ್ಗೆ ಅವರ ಹಳೆಯ ಗೆಳೆಯರು, ಹಿತೈಷಿಗಳು ತಮ್ಮ-ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ಮುಂಚೆ ಹೇಗಿದ್ದರು ಈಗ ಹೇಗಾದರು ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ದರ್ಶನ್ ನಟಿಸಿರುವ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಎಚ್ ವಾಸು, ದರ್ಶನ್ ತಮ್ಮೊಟ್ಟಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅವರ ವರ್ತನೆ ಹೇಗಿರುತ್ತಿತ್ತು ಎಂಬ ಬಗ್ಗೆ ಮಾತನಾಡುತ್ತಾ, ದರ್ಶನ್ಗೆ ಹೋಟೆಲ್ ರೂಂ ಬುಕ್ ಮಾಡಿದಾಗ ಅವರೇ ಹೇಳಿಬಿಡುತ್ತಿದ್ದರು, ನನಗೆ ರೂಂ ನೀಡಲಾಗಿರುವ ಫ್ಲೋರ್ನಲ್ಲಿ ಯಾವುದೇ ನಟಿಯರಿಗೆ ರೂಂ ಕೊಡಬೇಡಿ, ನಾವು ಗೆಳೆಯರು, ಲೈಟ್ ಬಾಯ್, ಅಸಿಸ್ಟೆಂಟ್ಗಳೆಲ್ಲ ಸೇರಿ ತಡ ರಾತ್ರಿ ವರೆಗೆ ಎದ್ದಿರತ್ತೇವೆ ಪಾರ್ಟಿ ಮಾಡುತ್ತೇವೆ, ಅದರಿಂದ ಮಹಿಳೆಯರಿಗೆ ಸಮಸ್ಯೆ ಆಗುವುದು ಬೇಡ ಹಾಗಾಗಿ ನಾನಿರುವ ಫ್ಲೋರ್ನಲ್ಲಿ ಅವರಿಗೆ ರೂಂ ಕೊಡಬೇಡಿ ಎನ್ನುತ್ತಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 26, 2024 03:52 PM
Latest Videos