ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಿಗೆ ಎದುರಾದ ತಾಪತ್ರಯ

ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಿಗೆ ಎದುರಾದ ತಾಪತ್ರಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2024 | 11:19 AM

ಮಳೆ ಎಲ್ಲೇ ಅದರೂ, ವರುಣ ಧರೆಗಿಳಿಯುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಮಾನ್ಸೂನ್ ರಾಜ್ಯವನ್ನು ಪ್ರವೇಶಿಸಿ ಎರಡು ವಾರ ಮೇಲಾಗಿದೆ. ರಾಜ್ಯದ ನಾನಾಭಾಗಗಳಲ್ಲಿ ಮಳೆಯಾಗುತ್ತಿದೆ ಮತ್ತು ಬಿತ್ತನೆ ಕಾರ್ಯ ಹೆಚ್ಚು ಕಡಿಮೆ ಪೂರ್ಣಗೊಂಡಿದೆ. ಬೆಂಗಳೂರಲ್ಲೂ ಇಂದು ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದೆಯಾದರೂ ಮಳೆಯಾಗಿಲ್ಲ.

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಮೈಸೂರಲ್ಲಿ (Mysuru) ಇಂದು ಬೆಳಗ್ಗೆಯೇ ಮಳೆ ಸುರಿಯಲಾರಂಭಿಸಿತು. ತಾಪಮಾನ ಏಕ್ದಂ ಕುಸಿದು ನಗರದೆಲ್ಲೆಡೆ ತಂಪು ವಾತಾ ರನಣ ಮಳೆಯಿಂದಾಗಿ ಸೃಷ್ಟಿಯಾಗಿದೆ. ಅದರೆ, ಶಾಲಾ ಕಾಲೇಜುಗಳು (school, colleges) ಪುನರಾರಂಭಗೊಂಡಿರುವುದರಿಂದ ಮಕ್ಕಳು ಮನೆಯಿಂದ ಹೊರ ಬೀಳಲು ತಾಪತ್ರಯ ಎದುರಿಸಿದರು. ಬೆಳೆದ ಮಕ್ಕಳಾದರೆ ಓಕೆ, ಜರ್ಕಿನ್ ಮತ್ತು ಕೊಡೆಗಳನ್ನು ಹಿಡಿದು ಶಾಲಾ ಕಾಲೇಜುಗಳಿಗೆ ಹೋದಾರು, ಆದರೆ ಎಲ್ ಕೆಜಿ, ಯುಕೆಜಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು (parents) ತಮ್ಮ ಕಂದಮ್ಮಗಳನ್ನು ಶಾಲೆಗಳಿಗೆ ಕಳಿಸಲು ಹೆಣಗಾಡಬೇಕಾಯಿತು. ಮನೆಗಳವರೆಗೆ ಶಾಲಾ ವಾಹನಗಳು ಬರುತ್ತವೆ, ಮಕ್ಕಳ ಟ್ರಾನ್ಸ್​ಪೋರ್ಟ್ ಗೆ ಹೆಚ್ಚುವರಿ ಫೀಸು ಕಟ್ಟುವ ಪೋಷಕರು ಮನೆಯಿಂದ ಮುಖ್ಯರಸ್ತೆವರೆಗೆ ಮಕ್ಕಳನ್ನು ಎತ್ತಿಕೊಂಡು ಬಂದು ಸ್ಕೂಲ್ ಬಸ್​ಗಳಲ್ಲಿ ಅವರನ್ನು ಶಾಲೆಗೆ ಕಳಿಸಬಹುದು. ಅದರೆ ಸ್ಕೂಲ್ ಬಸ್ ವ್ಯವಸ್ಥೆ ಇಲ್ಲದವರು, ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳ ತಂದೆತಾಯಿಗಳು ಪಡಿಪಾಟಲು ಅನುಭವಿಸಬೇಕಾಯಿತು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  IND vs ENG: ಭಾರತ ಇಂಗ್ಲೆಂಡ್ ಸೆಮಿಫೈನಲ್​ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಫೈನಲ್​ಗೆ ಯಾರು? ಮೀಸಲು ದಿನ ಇದೆಯೇ? ಇಲ್ಲಿದೆ ಉತ್ತರ