Health Tips: ಈ ಸಮಸ್ಯೆ ಇರುವವರು ಅರಿಶಿನ ಮಿಶ್ರಿತ ಹಾಲು ಕುಡಿಯಬಾರದು! ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 29, 2022 | 7:00 AM

ಅರಿಶಿನವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಔಷಧವೆಂದು ಗುರುತಿಸಲಾಗಿದೆ. ಅರಿಶಿನದ ಔಷಧೀಯ ಗುಣಗಳನ್ನು ವಿವಿಧ ಚಿಕಿತ್ಸೆಗಳಲ್ಲಿ ರಾಮಬಾಣವಾಗಿ ಬಳಸಲಾಗುತ್ತದೆ. 

Health Tips: ಈ ಸಮಸ್ಯೆ ಇರುವವರು ಅರಿಶಿನ ಮಿಶ್ರಿತ ಹಾಲು ಕುಡಿಯಬಾರದು! ಇಲ್ಲಿದೆ ಮಾಹಿತಿ
ಅರಿಶಿನ ಮಿಶ್ರಿತ ಹಾಲು (ಸಂಗ್ರಹ ಚಿತ್ರ)
Follow us on

ಹಸುವಿನ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ನಮಗೆಲ್ಲರಿಗೂ ಗೊತ್ತು. ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇರುವವರು ಪ್ರತಿದಿನ ಅರಿಶಿನದ ಹಾಲನ್ನು ಕುಡಿಯಬೇಕು. ಇದು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಅರಿಶಿನದ ಹಾಲನ್ನು ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ಆದರೆ ಅದೇ ಸಮಯದಲ್ಲಿ, ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಅರಿಶಿನ ಹಾಲನ್ನು ಕುಡಿಯಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅರಿಶಿನವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಔಷಧವೆಂದು ಗುರುತಿಸಲಾಗಿದೆ. ಅರಿಶಿನದ ಔಷಧೀಯ ಗುಣಗಳನ್ನು ವಿವಿಧ ಚಿಕಿತ್ಸೆಗಳಲ್ಲಿ ರಾಮಬಾಣವಾಗಿ ಬಳಸಲಾಗುತ್ತದೆ.

ಅದಕ್ಕಾಗಿಯೇ ಅನೇಕರು ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಅರಿಶಿನ ಮತ್ತು ಹಾಲು ಎರಡರಲ್ಲೂ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳಿವೆ. ಅರಿಶಿನ ಹಾಲು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಆದರೆ ಕೆಲವು ಸಂದರ್ಭಗಳಲ್ಲಿ ಅದನ್ನು ಸೇವಿಸದಿರುವುದು ಉತ್ತಮ.

ಇದನ್ನೂ ಓದಿ: Height Increase Tips: ನಿಮ್ಮ ಮಕ್ಕಳು ಕುಳ್ಳಗಿದ್ದೀರಾ? ಹಾಗಾದರೆ ಈ ಟಿಪ್ಸ್​ ಫಾಲೋ ಮಾಡಿ, ಎತ್ತರ ಗ್ಯಾರಂಟಿ!

ಹೈಪೊಗ್ಲಿಸಿಮಿಯಾ:

ಕಡಿಮೆ ರಕ್ತದ ಸಕ್ಕರೆ ಹೊಂದಿರುವ ಜನರು ವೈದ್ಯರ ಸಲಹೆಯಂತೆ ಅರಿಶಿನ ಹಾಲನ್ನು ಸೇವಿಸಬೇಕು. ಅರಿಶಿನವು ಕರ್ಕ್ಯುಮಿನ್​ನ್ನು ಹೊಂದಿರುತ್ತದೆ. ಹೈಪೊಗ್ಲಿಸಿಮಿಯಾ ಹೊಂದಿರುವ ರೋಗಿಗಳು ಅರಿಶಿನ ಹಾಲನ್ನು ಸೇವಿಸುವ ಮೂಲಕ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಅಜೀರ್ಣ:

ಅಜೀರ್ಣದಿಂದ ಬಳಲುತ್ತಿರುವವರು ಮಲಬದ್ಧತೆ, ಗ್ಯಾಸ್, ಉಬ್ಬುವುದು, ಎದೆಯುರಿ, ಆಸಿಡ್ ರಿಫ್ಲಕ್ಸ್, ಅಜೀರ್ಣದಿಂದ ಬಳಲುತ್ತಿರುವವರು ಸಹ ಅರಿಶಿನ ಹಾಲನ್ನು ಸೇವಿಸಬಾರದು. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಅರಿಶಿನದ ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯಕಾರಿ.

ರಕ್ತದಲ್ಲಿ ಕಬ್ಬಿಣದ ಕೊರತೆಯಿದ್ದರೆ ಅರಿಶಿನದ ಹಾಲನ್ನು ಸೇವಿಸಬಾರದು. ಇದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಕಿಡ್ನಿ ಡಿಸಾರ್ಡರ್ಸ್ ಕಿಡ್ನಿ ಸಂಬಂಧಿ ಯಾವುದೇ ಸಮಸ್ಯೆ ಇದ್ದಲ್ಲಿ ಅರಿಶಿನ ಹಾಲು ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಾಗ ಅರಿಶಿನದ ಹಾಲನ್ನು ಸೇವಿಸಬಾರದು. ಅರಿಶಿನವು ಆಕ್ಸಲೇಟ್​ನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನದ ಹಾಲನ್ನು ಕುಡಿಯುವುದನ್ನು ತಪ್ಪಿಸಬೇಕು.

ಅರಿಶಿನವನ್ನು ಎಷ್ಟು ಸೇರಿಸಬೇಕು ಅರಿಶಿನವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಅರಿಶಿನವು ತಾಪದ ಗುಣಗಳನ್ನು ಹೊಂದಿದೆ. ಒಂದು ಚಿಟಿಕೆ ಅರಿಶಿನವನ್ನು ಹಾಲಿನಲ್ಲಿ ಬೆರೆಸುವುದು ಒಳ್ಳೆಯದು. ಅವುಗಳ ಜೊತೆ ಒಂದು ಲೋಟ ಹಾಲಿಗೆ ಚಿಟಿಕೆ ಸಕ್ಕರೆ ಹಾಕಿದರೆ ಸಾಕು ಎನ್ನುತ್ತಾರೆ ತಜ್ಞರು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.