Height Increase Tips: ನಿಮ್ಮ ಮಕ್ಕಳು ಕುಳ್ಳಗಿದ್ದೀರಾ? ಹಾಗಾದರೆ ಈ ಟಿಪ್ಸ್​ ಫಾಲೋ ಮಾಡಿ, ಎತ್ತರ ಗ್ಯಾರಂಟಿ!

ಪೋಷಣೆಯ ಕೊರತೆ ಕೂಡ ಕಾರಣವೆಂದು ಪರಿಗಣಿಸಲಾಗಿದೆ. ಹುಡುಗಿಯರು ಸರಾಸರಿ ಎತ್ತರವನ್ನು ಹೊಂದಲು ಬಯಸುತ್ತಾರೆ. ಇದರಿಂದ ಅವರು ಸುಂದರವಾಗಿ ಕಾಣುತ್ತಾರೆ ಕೂಡ.

Height Increase Tips: ನಿಮ್ಮ ಮಕ್ಕಳು ಕುಳ್ಳಗಿದ್ದೀರಾ? ಹಾಗಾದರೆ ಈ ಟಿಪ್ಸ್​ ಫಾಲೋ ಮಾಡಿ, ಎತ್ತರ ಗ್ಯಾರಂಟಿ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2022 | 8:00 AM

ಪಾಲಕರು ತಮ್ಮ ಮಗುವಿನ ಉತ್ತಮ ಬೆಳವಣಿಗೆಗೆ ಸಕಲ ಪ್ರಯತ್ನಗಳನ್ನು ಮಾಡುತ್ತಾರೆ. 13 ರಿಂದ 17 ವರ್ಷ ವಯಸ್ಸಿನಲ್ಲಿ ಮಕ್ಕಳ ಎತ್ತರವು (Height) ವೇಗವಾಗಿ ಹೆಚ್ಚಾಗುತ್ತದೆ. ಆದರೆ ಕೆಲವು ಮಕ್ಕಳು ತಮ್ಮ ಮನಸ್ಸಿಗೆ ಅನುಗುಣವಾಗಿ ಎತ್ತರವನ್ನು ಹೊಂದಲು  ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಹೆಣ್ಣುಮಕ್ಕಳ ಎತ್ತರ ಹೆಚ್ಚಾಗದಿರುವುದು ಭಾರತದಲ್ಲಿ ಸಮಸ್ಯೆಯಾಗಿದೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ಪೋಷಣೆಯ ಕೊರತೆ ಕೂಡ ಕಾರಣವೆಂದು ಪರಿಗಣಿಸಲಾಗಿದೆ. ಹುಡುಗಿಯರು ಸರಾಸರಿ ಎತ್ತರವನ್ನು ಹೊಂದಲು ಬಯಸುತ್ತಾರೆ. ಇದರಿಂದ ಅವರು ಸುಂದರವಾಗಿ ಕಾಣುತ್ತಾರೆ ಕೂಡ. ಸ್ವಾಭಾವಿಕವಾಗಿ ಉದ್ದವಿದ್ದರು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತಷ್ಟು ಹೆಚ್ಚಿಸಬಹುದು. ಅಂದಹಾಗೆ, ಈ ರೀತಿಯ ಸಮಸ್ಯೆ ನಿಮ್ಮಲ್ಲೂ ಇದ್ದರೆ ಚಿಂತಿಸಬೇಡಿ. ಇಲ್ಲಿ ನಾವು ಕೆಲವು ಯೋಗಾಸನಗಳ ಬಗ್ಗೆ ಹೇಳಲಿದ್ದೇವೆ, ಅದು ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದೆ ಓದಿ.

ಸೂರ್ಯ ನಮಸ್ಕಾರ:

ಯೋಗ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ಭಾರತ ಮಾತ್ರವಲ್ಲ, ಇಡೀ ಜಗತ್ತಿಗೆ ತಿಳಿದಿದೆ. ಎತ್ತರ ಹೆಚ್ಚಾಗದ ಮಕ್ಕಳು ಯೋಗಾಸನವನ್ನು ರೂಢಿಸಿಕೊಳ್ಳಬೇಕು. ನಿಮ್ಮ ಮಗಳನ್ನು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವಂತೆ ಮಾಡಿ, ಏಕೆಂದರೆ ಇದರಿಂದ ಎತ್ತರವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಯೋಗವನ್ನು ಮಾಡುವುದರಿಂದ ಪ್ರಮುಖ ಹಾರ್ಮೋನ್ ಹೆಚ್ಚುತ್ತದೆ, ಇದು ಎತ್ತರವನ್ನು ಹೆಚ್ಚಿಸಲು ಉಪಯುಕ್ತವಾಗಿದೆ.

ಇದನ್ನೂ ಓದಿ: Love Breakup: ಲವ್ ಬ್ರೇಕ್​ ಅಪ್ ನೋವಿನಿಂದ ಹೊರಬರುವುದು ಹೇಗೆ? ಇಲ್ಲಿದೆ ಕೆಲವು ಸಲಹೆ

ತಾಡಾಸನ:

ಈ ಆಸನವನ್ನು ಮಾಡುವುದರಿಂದ ಸ್ನಾಯುಗಳು ಹಿಗ್ಗುತ್ತವೆ ಮತ್ತು ಎತ್ತರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಬೆಳಿಗ್ಗೆ ಇದನ್ನು ಮಾಡಲು ಉತ್ತಮ ಸಮಯವಾದರೂ, ನೀವು ಅಥವಾ ನಿಮ್ಮ ಮಗು ಯಾವುದೇ ಸಮಯದಲ್ಲಿ ಇದನ್ನು ಮಾಡಬಹುದು. ಕೆಲವು ತಿಂಗಳುಗಳ ನಂತರ, ಮಗುವಿನ ಎತ್ತರದಲ್ಲಿನ ವ್ಯತ್ಯಾಸವನ್ನು ನೀವು ಗಮನಿಸಬಹುದು.

ವೃಕ್ಷಾಸನ:

ಎತ್ತರವನ್ನು ಹೆಚ್ಚಿಸುವ ಆಸನಗಳಲ್ಲಿ ಈ ವೃಕ್ಷಾಸನ ಕೂಡ ಒಂದು. ತಜ್ಞರ ಪ್ರಕಾರ, ಈ ಆಸನವು ಎತ್ತರವನ್ನು ಹೆಚ್ಚಿಸುವ ಹಾರ್ಮೋನುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಆಸನವನ್ನು 2 ಅಥವಾ 3 ಸೆಟ್‌ಗಳಲ್ಲಿ ಮಾಡಿ ಮತ್ತು ದಿನಕ್ಕೆ ಒಮ್ಮೆ ಮಾಡಿ. ಎತ್ತರವು ಇದಕ್ಕಿಂತ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ