ಹೊಟ್ಟೆನೋವನ್ನು ನಿರ್ಲಕ್ಷ್ಯಿಸಬೇಡಿ; ಅದು ಎಚ್ಚರಿಕೆ ಗಂಟೆಯೂ ಆಗಿರಬಹುದು!

|

Updated on: Dec 07, 2023 | 2:08 PM

ಇದ್ದಕ್ಕಿದ್ದಂತೆ ನಿಮಗೆ ಹೊಟ್ಟೆನೋವು ಕಾಣಿಸಿಕೊಂಡರೆ ಮೊದಲು ನಿಮ್ಮ ಮನಸಿಗೆ ಬರುವುದು ಇದು ಗ್ಯಾಸ್ಟ್ರಿಕ್​ನಿಂದ ಉಂಟಾದ ಹೊಟ್ಟೆನೋವೆಂಬುದು. ಆದರೆ, ಎಲ್ಲ ಸಂದರ್ಭದಲ್ಲೂ ಹೊಟ್ಟೆನೋವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೊಟ್ಟೆನೋವು ಕೆಲವೊಮ್ಮೆ ನಿಮ್ಮ ದೇಹದ ರೋಗದ ಸೂಚನೆ ಕೂಡ ಆಗಿರಬಹುದು.

ಹೊಟ್ಟೆನೋವನ್ನು ನಿರ್ಲಕ್ಷ್ಯಿಸಬೇಡಿ; ಅದು ಎಚ್ಚರಿಕೆ ಗಂಟೆಯೂ ಆಗಿರಬಹುದು!
ಹೊಟ್ಟೆ ನೋವು
Image Credit source: iStock
Follow us on

ನಿಮ್ಮ ಹೊಟ್ಟೆಯಲ್ಲಿ ಹಠಾತ್ ನೋವು ಏನಾದರೂ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡುತ್ತೀರಾ? ಹಲವಾರು ಅಂಶಗಳು ಹೊಟ್ಟೆ ನೋವಿಗೆ ಕಾರಣವಾಗಬಹುದು. ಗ್ಯಾಸ್, ಅಜೀರ್ಣ ಮತ್ತು ಎಳೆದ ಸ್ನಾಯುಗಳನ್ನು ಒಳಗೊಂಡಿರುವ ಸಾಮಾನ್ಯ ಕಾರಣಗಳು ಸಾಮಾನ್ಯವಾಗಿ ಜೀವಕ್ಕೆ ಅಪಾಯಕಾರಿಯಾಗಿರುವುದಿಲ್ಲ. ಆದರೆ ಕೆಲವೊಮ್ಮೆ ಹೊಟ್ಟೆನೋವಿನಿಂದಲೂ ಅಪಾಯ ಉಂಟಾಗುತ್ತದೆ. ಕೆಲವೊಮ್ಮೆ ಹೊಟ್ಟೆ ನೋವು ನಿಗೂಢವಾಗಿರಬಹುದು. ಹೊಟ್ಟೆ ನೋವು ಯಾವ ಆರೋಗ್ಯ ಸಮಸ್ಯೆಯ ಸಂಕೇತ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಫುಡ್ ಪಾಯ್ಸನಿಂಗ್:

ನೀವು ಕೆಲವು ಸಲ ಬೀದಿ ಬದಿಯ ಆಹಾರಗಳನ್ನು ಸೇವಿಸಿದಾಗ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಉಂಟಾಗಬಹುದು. ವಾಕರಿಕೆ, ಅತಿಸಾರ, ವಾಂತಿ, ಹೊಟ್ಟೆ ಸೆಳೆತ ಮತ್ತು ಜ್ವರದಂತಹ ರೋಗಲಕ್ಷಣಗಳು ಕೂಡ ಉಂಟಾಗಬಹುದು. ಇದು ಸಾಮಾನ್ಯವಾಗಿ ಒಂದು ವಾರದೊಳಗೆ ಕಡಿಮೆಯಾದರೂ ಇದು ಫುಡ್ ಪಾಯ್ಸನ್​ನಿಂದ ಆದ ಸಮಸ್ಯೆಯಾದ್ದರಿಂದ ಹೆಚ್ಚಿನ ಕಾಳಜಿ ಅಗತ್ಯ.

ಇದನ್ನೂ ಓದಿ: ಅಜೀರ್ಣ ಸಮಸ್ಯೆ ನಿವಾರಣೆಗೆ ಲವಂಗ ತಿನ್ನಿ

ಲಿವರ್​​ನ ಸಮಸ್ಯೆ:

ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಲಿವರ್​ಗೆ ಸಂಬಂಧಿಸಿದ ತೊಂದರೆಯಾಗಿದೆ. ವಿಶೇಷವಾಗಿ ಹೆಚ್ಚಿನ ತೂಕವನ್ನು ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಇದರ ಆರಂಭಿಕ ಪತ್ತೆಗಾಗಿ ನಿಯಮಿತ ಆರೋಗ್ಯ ತಪಾಸಣೆಗಳು ಅಗತ್ಯ. ಪರಿಶೀಲಿಸದೆ ಬಿಟ್ಟರೆ ಇದು ತೀವ್ರವಾದ ಪಿತ್ತಜನಕಾಂಗದ ಹಾನಿಗೆ ಕಾರಣವಾಗಬಹುದು. ಹಾಗೇ, ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸಬಹುದು.

ಅಪೆಂಡಿಸೈಟಿಸ್:

ಅಪೆಂಡಿಕ್ಸ್​ ನಿಮ್ಮ ಹೊಟ್ಟೆಯ ಮಧ್ಯದಲ್ಲಿ ಸಣ್ಣ ಮತ್ತು ಹಠಾತ್ ನೋವಿನಿಂದ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ತೀವ್ರಗೊಳ್ಳುತ್ತದೆ. ಆಗಾಗ ಕಿಬ್ಬೊಟ್ಟೆಯ ಕೆಳಗಿನ ಬಲಭಾಗದಲ್ಲಿ ನೋವು ಹೆಚ್ಚಾಗುತ್ತದೆ. ಒತ್ತುವುದು, ಕೆಮ್ಮುವುದು ಅಥವಾ ನಡೆಯುವುದರಿಂದ ಆ ನೋವು ಹೆಚ್ಚಾಗುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಲವಂಗ ಜಗಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಕಿಡ್ನಿ ಸ್ಟೋನ್:

ಸಣ್ಣ ಕಿಡ್ನಿ ಸ್ಟೋನ್​ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ, ದೊಡ್ಡ ಕಿಡ್ನಿ ಸ್ಟೋನ್ ತೀವ್ರವಾದ ನೋವು, ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ