ದೇಹದಲ್ಲಿ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಬೇಕೇಬೇಕು. ಹಾಗಿರುವಾಗ ಪೌಷ್ಟಿಕ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಅದರಲ್ಲಿಯೂ ಮಳೆಗಾಲದ ಸಮಯದಲ್ಲಿ ಶೀತ, ನೆಗಡಿಯಯಂತಹ ಸಮಸ್ಯೆಗಳು ಕಂಡು ಬರುಯತ್ತವೆ. ಅವುಗಳಿಗೆ ಪರಿಹಾರವಾಗಿ ಈ ಕೆಲವು ಆರೋಗ್ಯಕ್ಕೆ ಹಿತಕರವಾಗಿರುವ ಪಾನೀಯಗಳನ್ನು ಸೇವಿಸಿ.
ಈ ಮೂರು ರೀತಿಯ ಪಾನೀಯಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲ ಪಡಿಸಲು ಸಹಾಯ ಮಾಡುತ್ತವೆ. ಇವುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಜೀರಿಗೆ ಮತ್ತು ಬೆಲ್ಲದ ನೀರು
ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜೀರಿಗೆ ಮತ್ತು ಬೆಲ್ಲದ ನೀರು ಸಹಾಯಕವಾಗಿದೆ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಕಂಡು ಬರುತ್ತವೆ. ಜೀರಿಗೆ ನೀರು ದಣಿದವರಿಗೆ ಬಹುಬೇಗ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜತೆಗೆ ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಬಿಸಿ ಇರುವಾಗಲೇ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದಕ್ಕೆ ರುಚಿಯಾಗುವಷ್ಟು ಬೆಲ್ಲವನ್ನೂ ಸಹ ಸೇರಿಸಿಕೊಳ್ಳಬಹುದು.
ಅರಿಶಿಣ ಹಾಲು
ಅರಿಶಿಣ ನಂಜು ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಮೈಕ್ರೋಬಿಯಲ್ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಅರಿಶಿಣ ಹಾಲನ್ನು ಪ್ರತಿದಿನ ಮಲಗುವ ವೇಳೆ ಸೇವಿಸಿದರೆ ಅದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ತುಳಸಿ ಚಹಾ
ತುಳಸಿ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಒಂದು ಲೋಟ ನೀರಿನಲ್ಲಿ ಸುಮಾರು 8 ತುಳಸಿ ಎಲೆಗಳನ್ನು ಸೇರಿಸಿ, ಚೆನ್ನಾಗಿ ಕುದಿಸಿ. ಅದಕ್ಕೆ ಕರಿಮೆಣಸು, ಶುಂಠಿ, ಅರಿಶಿಣವನ್ನೂ ಸಹ ಸೇರಿಸಬಹುದು. ಬಳಿಕ ಫಿಲ್ಟರ್ ಮಾಡಿ ಆ ನೀರನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ಲಿಂಬೆರಸವನ್ನೂ ಸಹ ಸೇರಿಸಿಕೊಳ್ಳಬಹುದು. ಆರೋಗ್ಯಕ್ಕೂ ಉತ್ತಮ ಜತೆಗೆ ರುಚಿಯನ್ನೂ ಸಹ ನೀಡುತ್ತದೆ. ಈ ಪಾನೀಯವನ್ನು ವಾರಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!
Health Tips: ನೀವು ಆರೋಗ್ಯವಾಗಿರಲು ಈ ಒಳ್ಳೆಯ ಅಭ್ಯಾಸಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಿ
(Health Tips: These 3 healthy drinks are help to protect your health healthy check in kannada)