Health Tips: ನೀವು ಆರೋಗ್ಯವಾಗಿರಲು ಈ ಒಳ್ಳೆಯ ಅಭ್ಯಾಸಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಿ

ದೈಹಿಕ ಆರೋಗ್ಯ ಮತ್ತು ಮಾನಸಿಕವಾದ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಲೇ ಬೇಕು. ನೀವು ಮಾನಸಿಕವಾಗಿ ಆರೋಗ್ಯವಾಗರಿಬೇಕಾದರೆ ಯಾವ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಬೇಕು? ಎಂಬ ಮಾಹಿತಿ ಇಲ್ಲಿದೆ.

Health Tips: ನೀವು ಆರೋಗ್ಯವಾಗಿರಲು ಈ ಒಳ್ಳೆಯ ಅಭ್ಯಾಸಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on: Sep 21, 2021 | 8:19 AM

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಹೊಂದುವುದು ಬಹಳ ಮುಖ್ಯ. ಇದಕ್ಕಾಗಿ ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವ ಅವಶ್ಯಕತೆ ಇದೆ. ಈ ಒಳ್ಳೆಯ ಅಭ್ಯಾಸಗಳನ್ನು ನಿಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳುವುದರ ಜತೆಗೆ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕವಾದ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಲೇ ಬೇಕು. ನೀವು ಮಾನಸಿಕವಾಗಿ ಆರೋಗ್ಯವಾಗರಿಬೇಕಾದರೆ ಯಾವ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಬೇಕು? ಹಾಗೂ ದೈಹಿಕವಾಗಿ ಸದೃಢವಾಗಿರಲು ಯಾವ ಅಭ್ಯಾಸಗಳು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಮುಂಜಾನೆ ಬೆಳಿಗ್ಗೆ ಬೇಗ ಏಳುವುದರಿಂದ ಅನೇಕ ಅರೋಗ್ಯ ಪ್ರಯೋಜನಗಳಿವೆ. ಬೇಗ ಏಳುವುದರಿಂದ ವ್ಯಾಯಾಮ ಮಾಡಲು ಮತ್ತು ಧ್ಯಾನ ಮಾಡಲು ಸಮಯಾವಕಾಶ ಸಿಗುತ್ತದೆ. ಇದು ನಿಮಗೆ ದಿನವಿಡೀ ಒಳ್ಳೆಯ ಅನುಭವವನ್ನು ಕೊಡುತ್ತದೆ.

ಕೆಲಸ ಮಾಡಿ ದಿನನಿತ್ಯದ ವ್ಯಾಯಾಮವು ನಿಮ್ಮನ್ನು ಫಿಟ್ ಮತ್ತು ಆರೋಗ್ಯವಾಗಿರಿಸುತ್ತದೆ. ಇದು ಬೆವರಿನ ಮೂಲಕ ದೇಹದಿಂದ ಎಲ್ಲಾ ವಿಷಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತ ಪರಿಚನೆಯನ್ನೂ ಹೆಚ್ಚಿಸುತ್ತದೆ. ಹಾಗಾಗಿ ಜಡತ್ವವನ್ನು ಬಿಟ್ಟು ಶ್ರಮವಹಿಸಿ ಕೆಲಸ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಒಳ್ಳೆಯ ನಿದ್ರೆ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮೆದುಳಿನ ಕಾರ್ಯ ಚಟುವಟಿಕೆಗಳನ್ನು ಸುಧಾರಿಸಲು ಉತ್ತಮ ನಿದ್ರೆ ಮುಖ್ಯ. ಆದ್ದರಿಂದ ಆರೋಗ್ಯಕರ ಜೀವನ ಶೈಲಿ ಪಡೆಯಲು, ದೇಹ ಮತ್ತು ಮನಸ್ಸನ್ನು ಫಿಟ್ ಆಗಿರಿಸಲು ಒಳ್ಳೆಯ ನಿದ್ರೆ ಪಡೆಯಿರಿ. ಅನಗತ್ಯ ಚಿಂತೆಗಳನ್ನು ದೂರ ಮಾಡುವ ಮೂಲಕ ಒಳ್ಳೆಯ ನಿದ್ರೆಯ ಪಡೆಯಬಹುದಾಗಿದೆ. ಇವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯಕವಾಗಿವೆ.

ಇದನ್ನೂ ಓದಿ:

Health Tips: ಆಹಾರದಲ್ಲಿನ ಈ ಕೆಲವು ಮಸಾಲೆ ಪದಾರ್ಥಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ

Health Tips: ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ

(These habits for make healthy life check In Kannada)