Food Allergy: ಫುಡ್ ಅಲರ್ಜಿಗೆ ಈ ಆಹಾರಗಳೇ ಕಾರಣ

| Updated By: sandhya thejappa

Updated on: Jan 03, 2022 | 8:30 AM

ಅಲರ್ಜಿಯಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತ ಚಿಂತಿಸುತ್ತಾರೆ. ಅಂತವರು ಈ ಸ್ಟೋರಿಯನ್ನು ಪೂರ್ತಿ ಓದಿ. ಅಲರ್ಜಿಗೆ ಯಾವ ಆಹಾರ ಕಾರಣ ಅಂತ ಬಹುತೇಕರಿಗೆ ಗೊತ್ತಿಲ್ಲ.

Food Allergy: ಫುಡ್ ಅಲರ್ಜಿಗೆ ಈ ಆಹಾರಗಳೇ ಕಾರಣ
ಆಹಾರ (ಸಾಂದರ್ಭಿಕ ಚಿತ್ರ)
Follow us on

ಕೆಲವರಿಗೆ ಕೆಲ ಆಹಾರ ಅಲರ್ಜಿಗೆ ಕಾರಣವಾಗುತ್ತದೆ. ಏನೇ ತಿಂದರು ಮೈ ತುರಿಕೆ ಆಗುತ್ತದೆ ಅಂತ ತಿನ್ನಲು ಭಯಪಡ್ತಾರೆ. ತುರಿಕೆ ಆದಾಗ ಆ ಜಾಗದಲ್ಲಿ ಕೆಂಪಾಗುತ್ತದೆ. ಇದು ಎರಡರಿಂದ ಮೂರು ದಿನಗಳ ಕಾಲ ಇರುತ್ತದೆ. ಎರಡು ಮೂರ ದಿನ ತುರಿಕೆ ಜೊತೆಗೆ ಚರ್ಮ ಉರಿಯಾಗುತ್ತದೆ. ಇದರಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತ ಚಿಂತಿಸುತ್ತಾರೆ. ಅಂತವರು ಈ ಸ್ಟೋರಿಯನ್ನು ಪೂರ್ತಿ ಓದಿ. ಅಲರ್ಜಿಗೆ ಯಾವ ಆಹಾರ ಕಾರಣ ಅಂತ ಬಹುತೇಕರಿಗೆ ಗೊತ್ತಿಲ್ಲ. ಇಲ್ಲಿ ತಿಳಿಸಿದ ಕೆಲ ಆಹಾರಗಳು ಫುಡ್ ಅಲರ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಇವುಗಳಿಂದ ಸ್ವಲ್ಪ ಸಮಯ ದೂರವಿರಿ.

ಶೇಂಗಾ
ಬಡವರ ಬಾದಾಮಿ ಶೇಂಗಾ ತಿನ್ನುವುದರಿಂದ ಅಲರ್ಜಿ ಆಗುತ್ತದೆ. ಪುಳಿವಗರೆ, ಚಿತ್ರನ್ನಕ್ಕೆ ಇದನ್ನ ಹೆಚ್ಚು ಬಳಕೆ ಮಾಡಲಾಗುತ್ತದೆ. ಮೈ ತುಂಬಾ ಅಲರ್ಜಿ ಆಗಿದ್ದರೆ ಅದಕ್ಕೆ ಕಾರಣ ಶೇಂಗಾ ಕೂಡಾ ಆಗಿರುತ್ತದೆ.

ಮೀನು
ಮೀನು ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಆದರೆ ಇದು ಎಲ್ಲರ ಶರೀರಕ್ಕೆ ಆಗಿ ಬರಲ್ಲ. ಮೀನು ಸೇವಿಸುವುದರಿಂದ ಅಲರ್ಜಿ ಆಗುತ್ತದೆ ಅಂತ ವೈದ್ಯರು ಹೇಳುತ್ತಾರೆ. ಹೀಗಾಗಿ ಅಲರ್ಜಿಯಿಂದ ಮುಕ್ತರಾಗಲು ಮೀನು ತಿನ್ನುವುದನ್ನು ಸ್ವಲ್ಪ ಸಮಯ ನಿಲ್ಲಿಸಿ.

ಸೋಯಾ
ಮಕ್ಕಳಿಗೆ ಸೋಯಾಬೀನ್ ತುಂಬಾ ಇಷ್ಟ. ಮಕ್ಕಳಿಗೆ ಮಾತ್ರವಲ್ಲ ವಯಸ್ಸಾದವರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಗ್ರೇವಿ ನಾಲಿಗೆಗೆ ತುಂಬಾ ರುಚಿ ಕೊಡುತ್ತದೆ. ಆದರೆ ಸೋಯಾಬೀನ್ ತಿನ್ನುವುದರಿಂದ ಅಲರ್ಜಿ ಆಗುತ್ತದೆ ಅಂತ ಬಹುತೇಕರಿಗೆ ತಿಳಿದಿಲ್ಲ.

ಮೊಟ್ಟೆ
ಪ್ರತಿದಿನ ಬೇಯಿಸಿದ ಒಂದು ಮೊಟ್ಟೆಯನ್ನು ಸೇವಿಸಿ ಅಂತ ವೈದ್ಯರು ಹೇಳುತ್ತಾರೆ. ಕಾರಣ ಮೊಟ್ಟೆ ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಆದರೆ ಮೊಟ್ಟೆ ಸೇವನೆಯಿಂದ ಅಲರ್ಜಿಯಾಗುತ್ತದೆ.

ಹಾಲು
ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಉತ್ತಮ ಅಭ್ಯಾಸ. ಮೂಳೆಗಳ ಬಲ ಹೆಚ್ಚಿಸುವ ಗುಣ ಹಾಲಿನಲ್ಲಿ ಅಡಗಿದೆ. ಅಲ್ಲದೆ ರಕ್ತಪರಿಚಲನೆಗೆ ಸಹಾಯಕಾರಿ. ಆದರೆ ದೇಹದಲ್ಲಾಗುವ ಅಲರ್ಜಿಗೆ ಹಾಲು ಕೂಡಾ ಕಾರಣವಾಗುತ್ತದೆ.

ಗೋಧಿ
ಗೋಧಿ ಡಯಟ್ ಫುಡ್. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಗೋಧಿಯನ್ನು ಹೆಚ್ಚು ಬಳಸುತ್ತಾರೆ. ಆದರೆ ಗೋಧಿ ಎಲ್ಲ ಶರೀರಕ್ಕೂ ಆಗಲ್ಲ. ಅಲರ್ಜಿಗೆ ಗೋಧಿ ಕೂಡಾ ಕಾರಣವಾಗುತ್ತದೆ.

ಇದನ್ನೂ ಓದಿ

Winter Health Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಈ 5 ಆಹಾರ ಸೇವಿಸಿ

Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ