Kannada News Health Health Tips : Expert says if you have these health problem, lemon water is not good for you, know the reason kannada News
Health Tips : ಈ ಆರೋಗ್ಯ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯಲೇ ಬೇಡಿ
ಖಾಲಿಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ತಿಳಿದಿದೆ. ಈ ನೀರಿನ ನಿಯಮಿತ ಸೇವನೆಯೂ ದೇಹದಿಂದ ವಿಷವನ್ನು ಹೊರಹಾಕುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ತೂಕವನ್ನು ನಿಯಂತ್ರಿಸಲು ನೈಸರ್ಗಿಕವಾಗಿ ಸಹಾಯ ಮಾಡುತ್ತದೆ. ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ದರೂ ಈ ಕೆಲವು ಆರೋಗ್ಯ ಸಮಸ್ಯೆಯಿರುವವರು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದು ಒಳ್ಳೆಯದಲ್ಲ. ಹಾಗಾದ್ರೆ ಯಾರೆಲ್ಲಾ ನಿಂಬೆ ನೀರಿನ ಸೇವನೆಯಿಂದ ದೂರವಿರಬೇಕು ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ (ನಿಂಬೆ ನೀರು)
Follow us on
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನಿಂಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆದರೆ ಅತಿಯಾಗಿ ನಿಂಬೆ ನೀರಿನ ಸೇವನೆಯಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೇ ಹೆಚ್ಚು. ಅದರಲ್ಲಿಯೂ ಈ ಕೆಲವು ಆರೋಗ್ಯ ಸಮಸ್ಯೆಯಿರುವವರು ನಿಂಬೆ ನೀರನ್ನು ಸೇವಿಸದೇ ಇರುವುದೇ ಉತ್ತಮ.
ಅಸಿಟಿಡಿ, ಎದೆಯುರಿ ಸಮಸ್ಯೆ : ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುತ್ತಿದ್ದರೆ ಅಸಿಡಿಟಿ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆಯೇ ಇದೆ. ಹೀಗಾಗಿ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸಬಾರದು. ನಿಂಬೆಯೂ ಆಮ್ಲೀಯತೆಯನ್ನು ಹೆಚ್ಚಿಸುವ ಕಾರಣ ಅಸಿಡಿಟಿ ರೋಗಿಗಳಿಗೆ ಒಳ್ಳೆಯದಲ್ಲ.
ಹಲ್ಲಿನ ಸಮಸ್ಯೆ : ಹಲ್ಲಿನ ಸಮಸ್ಯೆಯನ್ನು ಹೊಂದಿರುವವರಿಗೆ ಈ ನಿಂಬೆ ನೀರು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುವುದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂಬೆಯಲ್ಲಿ ಅಸಿಟಿಕ್ ಆಮ್ಲವಿದ್ದು, ಇದರಿಂದ ಹಲ್ಲುಗಳ ಆರೋಗ್ಯವು ಹದಗೆಡುತ್ತದೆ. ಹಲ್ಲುಗಳ ಮೇಲಿನ ದಂತಕವಚವನ್ನು ಹಾನಿ ಮಾಡುವುದಲ್ಲದೆ, ಹಲ್ಲುಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಮೂತ್ರಪಿಂಡದ ಸಮಸ್ಯೆ : ಕಿಡ್ನಿ ಸಮಸ್ಯೆಯಿರುವವರು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸದೆ ಇರುವುದೇ ಉತ್ತಮ. ಈ ನಿಂಬೆಯಲ್ಲಿ ಸಿಟ್ರಿಕ್ ಆಮ್ಲ ಮಾತ್ರವಲ್ಲದೇ, ಸಾಕಷ್ಟು ಪ್ರಮಾಣದ ಆಕ್ಸಲೇಟ್ ಕೂಡ ಇದೆ. ಅತಿಯಾಗಿ ಇದರ ನೀರು ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗಿ ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯಿರುವವರು ಈ ನೀರನ್ನು ಕುಡಿದರೆ ಮೂತ್ರಪಿಂಡದ ಸಂಬಂಧಿ ಸಮಸ್ಯೆಯೂ ಉಲ್ಬಣವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ