Woman Health: ಪ್ರತಿಯೊಬ್ಬ ಮಹಿಳೆ ಅಭ್ಯಾಸ ಮಾಡಬೇಕಾದ ಒಂದು ಯೋಗಾಸನದ ಕ್ರಮ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2023 | 12:04 PM

ಜಗತ್ತು ನಮಗಾಗಿ ವಿರಾಮ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕೈಯಲ್ಲಿದೆ. ಅದಕ್ಕೆ ಉತ್ತಮ ಮಾರ್ಗವೆಂದರೆ ಯೋಗಾಭ್ಯಾಸ, ಇದು ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಯೋಗ ತಜ್ಞರೊಬ್ಬರು ಯೋಗ ಆಸನ ಶಕ್ತಿ ಮುದ್ರೆಯನ್ನು ಹೇಗೆ ಅಭ್ಯಾಸ ಮಾಡುವುದು ಎಂದು ಹಂಚಿಕೊಂಡಿದ್ದು ಇಲ್ಲಿದೆ ಮಾಹಿತಿ.

Woman Health: ಪ್ರತಿಯೊಬ್ಬ ಮಹಿಳೆ ಅಭ್ಯಾಸ ಮಾಡಬೇಕಾದ ಒಂದು ಯೋಗಾಸನದ ಕ್ರಮ ಇಲ್ಲಿದೆ
Follow us on

ಸ್ತ್ರೀ ದೇಹದ ಅಂಗರಚನೆ ಪುರುಷನ ದೇಹಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಸಂತಾನೋತ್ಪತ್ತಿ ಮಾತ್ರವಲ್ಲದೆ ಇತರ ಹಲವಾರು ಅಂಶಗಳಿವೆ. ಇದು ಮಹಿಳೆಯರಿಗೆ ಕೆಟ್ಟ ಜೀವನಶೈಲಿ ಅಥವಾ ಬೇಡದ ಆಹಾರ ಪದ್ಧತಿಯನ್ನು ನಿಭಾಯಿಸಲು ಕಷ್ಟಕರವಾಗಿಸುತ್ತದೆ. ಇತ್ತೀಚಿನ ದಿನಗಳ ಒತ್ತಡದ ಬದುಕಿನಿಂದ ಆಕೆ ಹೊರಗೆ ಬರಬೇಕಾಗಿದೆ. ಜಗತ್ತು ನಮಗಾಗಿ ವಿರಾಮ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕೈಯಲ್ಲಿದೆ. ಅದಕ್ಕೆ ಉತ್ತಮ ಮಾರ್ಗವೆಂದರೆ ಯೋಗಾಭ್ಯಾಸ, ಇದು ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಸಹ ನಿಯಂತ್ರಣದಲ್ಲಿಡುತ್ತದೆ.

ಇತ್ತೀಚೆಗೆ ಯೋಗ ತಜ್ಞರೊಬ್ಬರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯೋಗಾಸನವನ್ನು ಹೇಗೆ ಅಭ್ಯಾಸ ಮಾಡಬೇಕೆಂದು ಹಂಚಿ ಕೊಂಡಿದ್ದಾರೆ, ಇದು ಮಹಿಳೆಯರ “ದೇಹದಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸಲು” ಸಹಾಯ ಮಾಡುತ್ತದೆ. “ಕೆಟ್ಟ ಜೀವನಶೈಲಿ ಮತ್ತು ಬೇಡದ ಆಹಾರ ಪದ್ಧತಿಯ ಪರಿಣಾಮವು ಮಹಿಳೆಯರ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಅಧ್ಯಯನಗಳು ಹೇಳುತ್ತವೆ. ಜೊತೆಗೆ ಈ ದಿನಗಳಲ್ಲಿ ಯುವತಿಯರು ಸಹ ಗರ್ಭಾಶಯದಲ್ಲಿ ನೋವು, ಫೈಬ್ರಾಯ್ಡ್ಗಳು, ಯುಟಿಐ ಸೋಂಕುಗಳು, ಪಾಲಿಪ್ಸ್, ಪ್ರೊಲ್ಯಾಪ್ಸ್ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ, ಸರಿಯಾದ ಫಿಟ್ನೆಸ್ ನಿಯಮವನ್ನು ಅನುಸರಿಸುವ ಮೂಲಕ ಮತ್ತು ಕೆಲವು ಯೋಗ ಆಸನಗಳನ್ನು ಮಾಡುವ ಮೂಲಕ ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ನಿಮ್ಮ ದೈನಂದಿನ ಅಭ್ಯಾಸದಲ್ಲಿ ಶಕ್ತಿ ಮುದ್ರೆಯನ್ನು ಸೇರಿಸಿಕೊಳ್ಳಬಹುದು” ಎಂದಿದ್ದಾರೆ.

ಶಕ್ತಿ ಮುದ್ರಾ ಪ್ರಯೋಜನಗಳೇನು?

ಶಕ್ತಿ ಮುದ್ರೆ ಶಕ್ತಿಯುತ ಕೈ ರಚನೆಯಾಗಿದ್ದು, ಇದು ದೇಹದಲ್ಲಿ ಉಸಿರಾಟ, ಶಕ್ತಿ ಮತ್ತು ಉಸಿರಾಟದ ಹರಿವನ್ನು ಸುಧಾರಿಸುತ್ತದೆ. ಈ ಮುದ್ರೆ ತನ್ನ ಹೆಸರನ್ನು ಶಕ್ತಿ ಎಂಬ ಸಂಸ್ಕೃತ ಪದದಿಂದ ಪಡೆದುಕೊಂಡಿದೆ. ಶಕ್ತಿಯು ದುರ್ಗಾ ಅಥವಾ ಸ್ತ್ರೀ ಶಕ್ತಿಯನ್ನು ಸಹ ಪ್ರತಿನಿಧಿಸುತ್ತದೆ.

ಇದನ್ನೂ ಓದಿ;Ginger Tea: ಬೇಸಿಗೆಯಲ್ಲೂ ಶುಂಠಿ ಚಹಾದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ಈ ಮುದ್ರಾ ಮಾಡುವುದು ಹೇಗೆ?

ಹೆಬ್ಬೆರಳುಗಳನ್ನು ಮೊದಲು ಎರಡು ಬೆರಳುಗಳಿಂದ ಅಂದರೆ ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಸುತ್ತಿ ಮತ್ತು ಕೊನೆಯ ಎರಡು ಬೆರಳುಗಳು ಅಂದರೆ ಉಂಗುರ ಬೆರಳು ಮತ್ತು ಕಿರು ಬೆರಳಿನ ತುದಿಗಳನ್ನು ಸೇರಿಸಿ. ಇದನ್ನು ಶಕ್ತಿ ಮುದ್ರೆ ಎಂದು ಕರೆಯಲಾಗುತ್ತದೆ. ಈಗ ನಿಮ್ಮ ಕೈಗಳನ್ನು ಎದೆಯ ಮಟ್ಟದಲ್ಲಿ ಅಥವಾ ಹೊಕ್ಕುಳಿನ ಕೇಂದ್ರದಲ್ಲಿ ಇರಿಸಿ ಮತ್ತು ಆಳವಾದ ಉಸಿರನ್ನು ತೆಗೆದು ಬಳಿಕ ನಿಧಾನವಾಗಿ ಉಸಿರನ್ನು ಬಿಡುಗಡೆ ಮಾಡಿ. ಇದನ್ನು ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಮಾಡುವುದರಿಂದ ಮಹಿಳೆಯರ ದೇಹದಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: