ಭಾರತದ ಆಯರ್ವೇದ (Ayurveda) ಔಷಧಿ ಜಗತ್ ಪ್ರಸಿದ್ಧ ನಮ್ಮ ಆಯುರ್ವೇದ ಔಷಧಿ ಮೂಲಕ ಗುಣಪಡಿಸದೆ ಇರುವ ರೋಗವಿಲ್ಲ. ನಮ್ಮ ಆಯುರ್ವೇದದಲ್ಲಿ ಎಲ್ಲ ರೋಗಗಳಿಗು ಔಷಧಿ ಇದೆ. ಈ ಇಂಗ್ಲೀಷ್ ಔಷಧಿ ಬರುವ ಮುಂಚೆಯೇ ಆಯರ್ವೇದ ಔಷಧಿ ಪ್ರಸಿದ್ಧಿಯಾಗಿತ್ತು. ಆಯುರ್ವೇದ, ಯೋಗ (Yoga) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದದ ಜೊತೆಗೂ ಯೋಗ ಅಷ್ಟೇ ಪ್ರಾಮುಖ್ಯತೆ ವಹಿಸುತ್ತದೆ. ಆದರೆ ಬ್ರಿಟೀಷರ ಆಕ್ರಮಣದಿಂದ ಇದು ತರೆಮರೆಯಾಯಿತು. ಈಗ ಮತ್ತೆ ಆಯುರ್ವೇದ ಮತ್ತು ಯೋಗ ಮುನ್ನಲೆಗೆ ಬಂದಿದೆ. ಜನರು ಆಯುರ್ವೇದ ಮತ್ತು ಯೋಗಕ್ಕೆ ಮೊರೆ ಹೋಗುತ್ತಿದ್ದಾರೆ. ಅದರಿಂದ ಗುಣಮುಖಗೊಂಡು ಸಫಲತೆಯನ್ನು ಕಂಡುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಾಗಿರಬಹುದು ಅಥವಾ ಈ ವಯಸ್ಕರಲ್ಲಿ ಅಂದರೆ ಯೌವನಾವಸ್ಥೆಯಲ್ಲಿರುವವರು. ಇವರಿಗೆ ಕೀಲು ನೋವು, ಬೆನ್ನು ನೋವುಗಳು ಕಾಡುತ್ತಿವೆ. ಕಾರಣ ಒತ್ತಡದ ಜೀವನ ಮತ್ತು ಅನಾರೋಗ್ಯಕರವಾದ ಜೀವನಸೈಲಿ ಈ ಕಾರಣದಿಂದ ಬೇಗನೆ ರೋಗಕ್ಕೆ ತುತ್ತಾಗುತ್ತಾರೆ. ಹೀಗಿರುವಾಗ ಈ ಕೀಲು ನೋವಿಗೆ ಪರಿಹಾರ ಏನು ಇಲ್ಲಿದೆ ನೋಡಿ ಕೆಲವು ಆಯುರ್ವೇದಿಕ್ ಸಲಹೆಗಳು.
ಈ ನೈಸರ್ಗಿಕ ಚಿಕಿತ್ಸೆಗಳು ಕೆಲವು ಕೀಲು ನೋವಿನ ಲಕ್ಷಣಗಳನ್ನು ಸರಾಗಗೊಳಿಸುವ ಮತ್ತು ಪ್ರಗತಿಯನ್ನು ತಡೆಯಲು ಸಹಾಯ ಮಾಡುತ್ತದೆ.