ಸದಾ ಒತ್ತಡದಿಂದ ತುಂಬಿರುವ ಇಂದಿನ ವೇಗದ ಜಗತ್ತಿನಲ್ಲಿ ಆತಂಕ ಮತ್ತು ಉದ್ವೇಗವನ್ನು ಎದುರಿಸಲು ಮತ್ತು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲು ಒಂದು ಮಾರ್ಗವನ್ನು ಕಂಡುಹಿಡಿಯುವುದು ಅತ್ಯಗತ್ಯ. ಮಾನಸಿಕ ಆರೋಗ್ಯದ ಸಮಸ್ಯೆಗಳ ಜೊತೆಗೆ ದೈಹಿಕ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ (High Blood Pressure), ಮಧುಮೇಹ (Diabetes), ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮುಂತಾದವುಗಳಿಗೆ ಒತ್ತಡವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಟೆನ್ಷನ್ (Tension) ಅಥವಾ ಅತಿಯಾದ ಕೆಲಸವು ನಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ನಾವು ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯಕರ ಜೀವನವನ್ನು ನಡೆಸಬಹುದು. ಯೋಗ ಮತ್ತು ಧ್ಯಾನವು ನಮಗೆ ಇದನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ವಿಶ್ವ ಯೋಗ ಸಂಸ್ಥೆ, ಹಿಮಾಲಯ ಯೋಗ ಆಶ್ರಮ, ಅಕ್ಷರ ಯೋಗ ಸಂಸ್ಥೆಗಳ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ ಹೇಳುತ್ತಾರೆ.
ಅಧಿಕ ರಕ್ತದೊತ್ತಡಕ್ಕೆ ಯೋಗದ ಸಲಹೆ:
ನಮ್ಮ ಮನಸ್ಸು, ದೇಹ ಮತ್ತು ಚೈತನ್ಯವನ್ನು ಸರಿಪಡಿಸಲು ಅನೇಕ ಪರಿಣಾಮಕಾರಿ ಯೋಗದ ತಂತ್ರಗಳನ್ನು ಬಳಸಬಹುದು ಎಂದು ಹಿಮಾಲಯನ್ ಸಿದ್ಧಾ ಅಕ್ಷರ್ ಹೇಳುತ್ತಾರೆ. ಈ ಬಗ್ಗೆ ಜೀ ನ್ಯೂಸ್ ಲೇಖನವೊಂದನ್ನು ಪ್ರಕಟಿಸಿದೆ. ಯೋಗವು ನಮ್ಮ ಆಶಾವಾದವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಾಗ ಮತ್ತು ಯೋಗವನ್ನು ಅಭ್ಯಾಸ ಮಾಡುವಾಗ ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಕೆಲವು ಸರಳ ವಿಧಾನಗಳು ಇಲ್ಲಿವೆ:
ಇದನ್ನೂ ಓದಿ: Pumpkin Benefits: ಕಣ್ಣಿನ ಸಮಸ್ಯೆಯಿಂದ ರೋಗನಿರೋಧಕ ಶಕ್ತಿಯವರೆಗೆ; ಚೀನಿಕಾಯಿಯ ಉಪಯೋಗಗಳಿವು
ದಂಡಾಸನ:
ಆರಾಮವಾಗಿ ಕುಳಿತುಕೊಳ್ಳಿ. ನಂತರ ನಿಮ್ಮ ಕಾಲುಗಳನ್ನು ಅಗಲವಾಗಿ ತೆರೆಯಿರಿ. ನಿಮ್ಮ ಕಾಲುಗಳನ್ನು ಒಂದುಗೂಡಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ನಿಮ್ಮ ತೊಡೆ, ಕರುಳಿನ ಸ್ನಾಯುಗಳನ್ನು ಸಂಕುಚಿತಗೊಳಿಸಿ. ನಿಮ್ಮ ಬೆನ್ನುಮೂಳೆಗೆ ಸಪೋರ್ಟ್ ನೀಡಲು ನಿಮ್ಮ ಅಂಗೈಗಳನ್ನು ನಿಮ್ಮ ಸೊಂಟದ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ಎದುರು ಭಾಗದಲ್ಲಿ ನೋಡುತ್ತಾ ಹಾಗೇ ಕುಳಿತುಕೊಳ್ಳಿ. 30 ಸೆಕೆಂಡುಗಳ ಕಾಲ ಕುಳಿತುಕೊಂಡ ನಂತರ ನಿಮ್ಮ ಭುಜಗಳನ್ನು ವಿಶ್ರಾಂತಿ ಮಾಡುವಾಗಲೂ ಇದೇ ಪೊಸಿಷನ್ನಲ್ಲಿ ಕುಳಿತುಕೊಳ್ಳಿ.
ಊರ್ಧ್ವಮುಖಿ ಮಾರ್ಜರಿ ಆಸನ:
– ಮಂಡಿಯೂರಿ, ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಮೇಲೆ ಮತ್ತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿ.
– ನಿಮ್ಮ ಬೆನ್ನುಮೂಳೆಯನ್ನು ಜಗ್ಗಿ, ಮೇಲಕ್ಕೆ ಮುಖ ಎತ್ತಿ, ಉಸಿರಾಡಿ.
ಅಧೋಮುಖಿ ಮಾರ್ಜರಿ ಆಸನ:
– ನೀವು ಉಸಿರಾಡುವಾಗ ನಿಮ್ಮ ಎದೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಕುತ್ತಿಗೆಯನ್ನು ಇಳಿಮುಖವಾಗುವಂತೆ ಮತ್ತು ನಿಮ್ಮ ಬೆನ್ನುಮೂಳೆಯನ್ನು ಕಮಾನಿನಂತೆ ಮಾಡಿ.
ಇದನ್ನೂ ಓದಿ: Cooking Oil: ಹೃದಯದ ಆರೋಗ್ಯ ಸುಧಾರಿಸಲು ಈ 5 ಅಡುಗೆ ಎಣ್ಣೆಯನ್ನು ಟ್ರೈ ಮಾಡಿ
ಹೃದಯ ಸಮಸ್ಯೆಗಳಿಗೆ ಯೋಗ ಮುದ್ರೆ:
ಹೃದಯದ ಗೆಸ್ಚರ್ ಅಥವಾ ಹೃದಯ ಮುದ್ರೆ ಎಂದೂ ಕರೆಯಲ್ಪಡುವ ಮೃತಸಂಜೀವನಿ ಮುದ್ರೆಯನ್ನು ಪ್ರತಿದಿನ ಅಭ್ಯಾಸ ಮಾಡಿ. ಇದು ಹೃದ್ರೋಗದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳಲ್ಲಿನ ಬ್ಲಾಕ್‌ಗಳನ್ನು ತೆಗೆದುಹಾಕುತ್ತದೆ ಮತ್ತು ಅನಿಯಮಿತ ಹೃದಯ ಬಡಿತಗಳನ್ನು ನಿಯಂತ್ರಿಸುತ್ತದೆ. ಹಾಗೇ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಈ ಆಸನವನ್ನು ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ…
– ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಉಸಿರಾಟಕ್ಕೆ ಗಮನ ಕೊಡಿ. ನಿಧಾನ, ಆಳವಾದ ಉಸಿರನ್ನು ತೆಗೆದುಕೊಳ್ಳಿ.
– ನಿಮ್ಮ ಅಂಗೈಗಳನ್ನು ಆಕಾಶದ ಕಡೆಗೆ ಎತ್ತಿ, ನಿಮ್ಮ ಎರಡೂ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ.
– ಈಗ, ನಿಮ್ಮ ತೋರು ಬೆರಳನ್ನು ಬಗ್ಗಿಸಿ.
Published On - 11:11 am, Tue, 31 January 23