- Kannada News Health High BP Do you get angry often stay away from these food items health tips in kannada
High BP: ನೀವು ಆಗಾಗ ಕೋಪಗೊಳ್ಳುತ್ತೀರಾ? ಬಿಪಿ ಕಂಟ್ರೋಲ್ ಮಾಡಲು ಈ ಪಂಚ ಆಹಾರಗಳಿಂದ ದೂರವಿರಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯಕರ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
Updated on: Jan 16, 2023 | 6:30 AM

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯಕರ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಕೆಲವರು ಆಗಾಗ ಕೋಪಗೊಳ್ಳುವುದು ಇದೆ. ಇದಕ್ಕೆ ಅಧಿಕ ಬಿಪಿ ಕಾರಣವಾಗಿರಬಹುದು. ನೀವು ಅಧಿಕ ಬಿಪಿ ಸಮಸ್ಯೆ ಎದುರಿಸುತ್ತಿದ್ದರೆ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಅವುಗಳು ಯಾವುವು ಎಂದು ತಿಳಿಯೋಣ.

ಅಧಿಕ ರಕ್ತದೊತ್ತಡ ಇರುವವರು ಕಡಿಮೆ ಉಪ್ಪನ್ನು ಸೇವಿಸಬೇಕು. ಉಪ್ಪು ಸೋಡಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ಅತಿಯಾಗಿ ಸೇವಿಸುವುದು ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಹಾರದ ಜೊತೆಗೆ ಉಪ್ಪಿನಕಾಯಿ ತಿನ್ನುವ ಅಭ್ಯಾಸ ಅನೇಕರಿಗೆ ಇದೆ. ನೀವು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಯಾಗಿದ್ದರೆ ಉಪ್ಪಿನಕಾಯಿ ಸೇವನೆ ತಪ್ಪಿಸಬೇಕು.

ಬಿಪಿ ರೋಗಿಗಳು ಮದ್ಯಪಾನ ಮಾಡಬಾರದು. ಏಕೆಂದರೆ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಇದರ ಸೇವನೆಯಿಂದ ಬಿಪಿ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಅನೇಕ ಜನರು ಆಗಾಗ್ಗೆ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದಾಗ್ಯೂ, ಅಧಿಕ ಬಿಪಿ ಇರುವವರು ಚಹಾ ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇದನ್ನು ಸೇವಿಸುವುದರಿಂದ ನಿಮ್ಮ ಬಿಪಿ ಹೆಚ್ಚುತ್ತದೆ.

ಬಿಪಿ ಇರುವವರು ಫಾಸ್ಟ್ ಫುಡ್ನಿಂದ ದೂರವಿರಬೇಕು. ಏಕೆಂದರೆ ಫಾಸ್ಟ್ ಫುಡ್ನಲ್ಲಿ ಉಪ್ಪು ಅಧಿಕವಾಗಿರುತ್ತದೆ. ಇದರಿಂದ ಬಿಪಿ ಹೆಚ್ಚುತ್ತದೆ.




