Parental tips: ಆರೋಗ್ಯಕರ ಮೂಳೆಗಳಿಗಾಗಿ ಹಾಲು ಹೊರತುಪಡಿಸಿ ಕ್ಯಾಲ್ಸಿಯಂನ 5 ಆಹಾರಗಳು; ನಿಮ್ಮ ಮಕ್ಕಳ ಆಹಾರದಲ್ಲಿ ಇವುಗಳನ್ನು ಸೇರಿಸಿ

|

Updated on: Mar 17, 2023 | 7:30 AM

ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಬಹುದಾದ ಕೆಲವು ಕ್ಯಾಲ್ಸಿಯಂ-ಭರಿತ ಆಹಾರಗಳನ್ನು ಪಟ್ಟಿ ನೀಡಿದ್ದಾರೆ

Parental tips: ಆರೋಗ್ಯಕರ ಮೂಳೆಗಳಿಗಾಗಿ ಹಾಲು ಹೊರತುಪಡಿಸಿ ಕ್ಯಾಲ್ಸಿಯಂನ 5 ಆಹಾರಗಳು; ನಿಮ್ಮ ಮಕ್ಕಳ ಆಹಾರದಲ್ಲಿ ಇವುಗಳನ್ನು ಸೇರಿಸಿ
Calcium foods
Follow us on

ಬಾಲ್ಯದಲ್ಲಿ, ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ಕ್ಯಾಲ್ಸಿಯಂ (Calcium) ಅತ್ಯಗತ್ಯ. ನಮ್ಮ ದೇಹದಲ್ಲಿನ ಹೆಚ್ಚಿನ ಕ್ಯಾಲ್ಸಿಯಂ ನಮ್ಮ ಮೂಳೆಗಳಲ್ಲಿ (Bones) ಸಂಗ್ರಹವಾಗಿರತ್ತದೆ. ಮೂಳೆಗಳು ದೇಹದಲ್ಲಿನ ಶೇ.99 ರಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ದುರ್ಬಲ ಮೂಳೆಗಳು (Weak Bones) ಮತ್ತು ಮುರಿತಗಳು ನಂತರದ ಜೀವನದಲ್ಲಿ ಬಾಲ್ಯದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯದ ಪರಿಣಾಮವಾಗಿ ಉಂಟಾಗಬಹುದು. ಕ್ಯಾಲ್ಸಿಯಂ ಇಲ್ಲದಿದ್ದರೆ, ವ್ಯಕ್ತಿಯ ಮೂಳೆಗಳು ಹದಗೆಡುತ್ತವೆ. ಹೀಗಾಗಿ, ಅಗತ್ಯವಿದ್ದಲ್ಲಿ, ದೇಹವು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ತೆಗೆದು ಬೇರೆಡೆ ಬಳಸುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮ ದೇಹವು ನಮ್ಮ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ನಾವು ವಯಸ್ಸಾದಂತೆ ನಮ್ಮ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೇವೆ. ಮಕ್ಕಳು ಪ್ರೌಡಾವಸ್ಥೆಗೆ ತಲುಪಿದಾಗ ಗರಿಷ್ಠ ಮೂಳೆ ಸಾಂದ್ರತೆಯನ್ನು ತಲುಪುತ್ತವೆ. ನಂತರ ದೇಹವು ಪ್ರಾಥಮಿಕವಾಗಿ ನಮ್ಮ ಮೂಳೆಗಳಲ್ಲಿನ ಕ್ಯಾಲ್ಸಿಯಂ ನಿಕ್ಷೇಪಗಳಿಂದ ಕ್ಯಾಲ್ಸಿಯಂ ಅನ್ನು ಎಳೆಯುತ್ತದೆ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಬಹುದಾದ ಕೆಲವು ಕ್ಯಾಲ್ಸಿಯಂ-ಭರಿತ ಆಹಾರಗಳನ್ನು ಪಟ್ಟಿ ಮಾಡುತ್ತಾರೆ.

ನಿಮ್ಮ ಮಕ್ಕಳ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಪಡೆಯುವುದು ಅವರ ನಂತರದ ವರ್ಷಗಳಲ್ಲಿ ಬಹಳ ಅವಶ್ಯಕವಾಗಿದೆ. ಬಾಲ್ಯದಲ್ಲಿ ಬಲವಾದ ಮೂಳೆಗಳನ್ನು ಹೊಂದಿರುವುದು ಜೀವನದುದ್ದಕ್ಕೂ ಉತ್ತಮ ಮೂಳೆ ಆರೋಗ್ಯಕ್ಕೆ ಕಾರಣವಾಗುತ್ತದೆ. ಪ್ರತಿ ತಾಯಿಯು ತಮ್ಮ ಮಗು ಹಾಲು ಕುಡಿಯುವುದಿಲ್ಲ ಎಂದು ಚಿಂತಿಸುತ್ತಾರೆ, ಹಾಗಿರುವಾಗ ಮಗು ಸಾಕಷ್ಟು ಕ್ಯಾಲ್ಸಿಯಂ ಅನ್ನು ಹೇಗೆ ಪಡೆಯುತ್ತದೆ?

ಪೌಷ್ಟಿಕತಜ್ಞರ ಪ್ರಕಾರ ನಿಮ್ಮ ಮಗುವಿನ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸುವ ಆಹಾರಗಳು:

  • ಕಪ್ಪು ಎಳ್ಳು ಬೀಜಗಳು

ಇದು ವಿಟಮಿನ್ ಬಿ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನೊಂದಿಗೆ ಕ್ಯಾಲ್ಸಿಯಂನ ಶ್ರೀಮಂತ ಮೂಲ. ಹೆಚ್ಚಿನ ಮಕ್ಕಳು ಚಿಕ್ಕಿ ತಿನ್ನುತ್ತಾರೆ. ಆದ್ದರಿಂದ ನೀವು ಇದನ್ನೂ ಮಕ್ಕಳ ಟಿಫಿನ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಅಥವಾ ಇದನ್ನು ಯಾವುದೇ ಸಮಯದಲ್ಲಿ ತಿಂಡಿಯಾಗಿ ನೀಡಬಹುದು.

  • ಮೊಸರು

ಸುಲಭವಾಗಿ ಜೀರ್ಣವಾಗುವ ಕ್ಯಾಲ್ಸಿಯಂ, ಮೊಸರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಮಕ್ಕಳಿಗೆ ಪ್ರತಿದಿನ ಮೊಸರು ಕೊಡುವ ಅಭ್ಯಾಸವನ್ನು ಮಾಡಿ. ನೀವು ನಿಮ್ಮ ಮಕ್ಕಳಿಗೆ ಮೊಸರು ಅಥವಾ ಮೊಸರು ಅನ್ನವನ್ನು ನೀಡಬಹುದು.

  • ಸಂಪೂರ್ಣ ದ್ವಿದಳ ಧಾನ್ಯಗಳು

ರಾಜ್ಮಾ, ಕಾಬೂಲಿ ಚನ್ನ, ಕಪ್ಪು ಚನ್ನ, ಹಸಿರು ಚನ್ನ, ಚೌಲಿ ಮುಂತಾದ ಕಾಳುಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇದನ್ನು ಈರುಳ್ಳಿ ಮತ್ತು ಟೊಮೆಟೊಗಳೊಂದಿಗೆ ಬೇಯಿಸಿ ಅನ್ನ ಅಥವಾ ಚಪ್ಪತಿಯ ಜೊತೆಗೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಕೋವಿಡ್ ‘ಮುಖ ಕುರುಡುತನ’ಕ್ಕೆ ಕಾರಣವಾಗಬಹುದು; ಹೇಗೆ ಎಂದು ತಿಳಿಯಲು ಮುಂದೆ ಓದಿ

  •  ಹಸಿರು ತರಕಾರಿಗಳು

ಹಸಿರು ತರಕಾರಿಗಳಾದ ಮೆಂತ್ಯೆ ಸೊಪ್ಪು, ಕೋಸುಗಡ್ಡೆ, ಹರಿವೆ ಸೊಪ್ಪು, ಮೂಲಂಗಿ ಎಲೆಗಳು ಕ್ಯಾಲ್ಸಿಯಂನಲ್ಲಿ ಅತ್ಯಂತ ಸಮೃದ್ಧವಾಗಿವೆ. ಪುದೀನಾ ಮತ್ತು ಕೊತ್ತಂಬರಿ ಚಟ್ನಿಯನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಈ ಹಸಿರು ಚಟ್ನಿಯನ್ನು ಗೋಧಿ ಸ್ಯಾಂಡ್‌ವಿಚ್‌ಗಳ ಮೇಲೆ ಹೇರಳವಾಗಿ ಹರಡಿ ಅಥವಾ ಊಟದ ಜೊತೆಯಲ್ಲಿ ತಿನ್ನಬಹುದು.

  • ಬೀಜಗಳು

ವಾಲ್‌ನಟ್ಸ್, ಅಂಜೂರದ ಹಣ್ಣುಗಳು, ಕಾರ್ಜುರ ಮತ್ತು ಏಪ್ರಿಕಾಟ್‌ಗಳಂತಹ ಬೀಜಗಳು ಕ್ಯಾಲ್ಸಿಯಂನ ಸಮೃದ್ಧ ಮೂಲಗಳಾಗಿವೆ, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್‌ಗಳಿಗೆ ಆರೋಗ್ಯಕರ ಆಯ್ಕೆಯಾಗಿದೆ. ಇದನ್ನು ನಿಮ್ಮ ಮಗುವಿಗೆ ಪ್ರತಿನಿತ್ಯ ಆರೋಗ್ಯಕರ ತಿಂಡಿಯಾಗಿ ಕೊಡಿ.